ನ್ಯೂಸ್

ಸೇಂದಿ ಬಾಟಲ್​​ ಹಿಡಿದು ಸರ್ಕಾರಿ ಬಸ್​​ ಏರಿದ ಮಹಿಳೆ!: ಕಂಡಕ್ಟರ್ ಮಾಡಿದ್ದೇನು ಗೊತ್ತಾ? ವಿಡಿಯೋ ವೈರಲ್​​|Rtc Bus

Telangana: ಬಸ್ಸಿನಲ್ಲಿ (Rtc Bus) ಸೇಂದಿ ಬಾಟಲಿಗಳನ್ನು ಕೊಂಡೊಯ್ಯತ್ತಿದ್ದ ಮಹಿಳೆಯನ್ನು ಡ್ರೈವರ್​​ ಮತ್ತು ಕಂಡಕ್ಟರ್ ಇಬ್ಬರೂ ದಾರಿ ಮಧ್ಯದಲ್ಲೇ ಇಳಿಸಿದ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

ನಲ್ಗೊಂಡ ಜಿಲ್ಲೆಯ ಕಟ್ಟಂಗೂರಿನ ಮಹಿಳೆಯೊಬ್ಬರು ಸೇಂದಿ ಬಾಟಲಿಗಳೊಂದಿಗೆ ಬಸ್​​ ಹತ್ತಿದ್ದಾಳೆ, ಇದನ್ನು ಗಮನಿಸಿದ ಚಾಲಕ ಮತ್ತು ಕಂಡಕ್ಟರ್, ಯಾರೂ ಬಸ್ಸಿನೊಳಗೆ ಸೇಂದಿಯನ್ನು ತರಬಾರದು ಎಂದು ಅವಳನ್ನು ರಸ್ತೆ ಮಧ್ಯದಲ್ಲಿ ಇಳಿಸಿದ ಘಟನೆ ನಡೆದಿದೆ.

ಇದು ತನ್ನ ಹಳ್ಳಿಯ ಒಂದು ಸಂಪ್ರದಾಯ, ತನ್ನ ಹುಟ್ಟುಹಬ್ಬವನ್ನು ಆಚರಿಸಲು ತಾನು ಸೇಂದಿಯನ್ನು ತೆಗೆದುಕೊಂಡು ಹೋಗುತ್ತಿದ್ದೇನೆ."ನಾನು ಸೇಂದಿಯನ್ನು ತೆಗೆದುಕೊಂಡು ಹೋದರೆ, ನನ್ನನ್ನು ಯಾರು ತಡೆಯುತ್ತಾರೆ?" ಎಂದು ಆಕ್ರೋಶಗೊಂಡ ಮಹಿಳೆ ಬಸ್ ಮುಂದೆ ನಿಂತು ಪ್ರತಿಭಟಿಸಿದ್ದಾಳೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ಸಮಾಧಾನಪಡಿಸಿ ವಾಪಸ್​​ ಕಳುಹಿಸಿದ್ದಾರೆ.

ನೆಟ್ಟಿಗರು ಹೇಳಿದ್ದೇನು?

ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ, ಬಳಕೆದಾರರು ಆರ್‌ಟಿಸಿ ಬಸ್‌ಗಳಲ್ಲಿ ಸೇಂದಿ ತರುವುದನ್ನು ನಿಷೇಧಿಸುವ ನಿಯಮವಿದೆಯೇ? ತೆಲಂಗಾಣದಲ್ಲಿ ಇದನ್ನು ನಿಷೇಧಿಸಲಾಗಿದೆಯೇ? ಈ ವಿಷಯಕ್ಕೆ ಆರ್‌ಟಿಸಿ ಆಡಳಿತ ಮಂಡಳಿ ಪ್ರತಿಕ್ರಿಯಿಸಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಮಹಿಳೆಯ ಹೇಳಿಕೆ ಈಗ ಹೊಸ ಚರ್ಚೆಗೆ ಕಾರಣವಾಗಿದೆ. (ಏಜೆನ್ಸೀಸ್​)