ನ್ಯೂಸ್

ಲೈಂಗಿಕ ಕ್ರಿಯೆ ವೇಳೆ ತೀವ್ರ ರಕ್ತಸ್ರಾವ; ಪ್ರೇಮಿ ಮಾಡಿದ ಈ ಕೆಲಸಕ್ಕೆ ಆಕೆ ಪ್ರಾಣವೇ ಹೋಯ್ತು

ಅಹಮದಾಬಾದ್​: 23 ವರ್ಷದ ನರ್ಸಿಂಗ್​ ಪದವಿಧರೆಯೊಬ್ಬಳು ಲಾಡ್ಜ್​ ಒಂದರಲ್ಲಿ ತನ್ನ ಗೆಳೆಯನೊಂದಿಗೆ ಲೈಂಗಿಕ ಕ್ರಿಯೆ (Sex) ನಡೆಸುವ ವೇಳೆ ತೀವ್ರ ರಕ್ತಸ್ರಾವದಿಂದ (bleeding) ಮೃತಪಟ್ಟಿರುವ ಘಟನೆ ಗುಜರಾತ್​ನ ನವಸಾರಿ ಜಿಲ್ಲೆಯಲ್ಲಿ ನಡೆದಿದೆ.

ಸೆಪ್ಟೆಂಬರ್​ 23ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೊಲೀಸರು ಯುವತಿಯ ಪ್ರಿಯಕರನನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಸುಮಾರು ಏಳು ತಿಂಗಳ ಹಿಂದೆ ಯುವಕ ಹಾಗೂ ಯುವತಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡಿದ್ದು, ದಿನ ಕಳೆದಂತೆ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ ಪಪರಸ್ಪರ ಪ್ರೀತಿಸಲು ಶುರು ಮಾಡಿದ್ದಾರೆ. ಅಂತೆಯೇ ಈ ಇಬ್ಬರು ಸೆಪ್ಟೆಂಬರ್​ 23ರಂದು ನವಸಾರಿಯ ಲಾಡ್ಜ್​ ಒಂದರಲ್ಲಿ ಉಳಿದುಕೊಂಡಿದ್ದು, ಇಬ್ಬರು ಲೈಂಗಿಕ ಕ್ರಿಯೆ ನಡೆಸುವ ವೇಳೆ ಯುವತಿಯ ಗುಪ್ತಾಂಗಕ್ಕೆ ಗಾಯವಾಗಿ ರಕ್ತಸ್ರಾವ ಶುರುವಾಗಿದೆ.

ಇದರಿಂದ ಭಯಗೊಂಡ ಆಕೆಯ ಗೆಳೆಯ ಅಂಬುಲೆನ್ಸ್​ಗೆ ಕರೆ ಮಾಡುವ ಬದಲು ಇಂಟರ್​ನೆಟ್​ನಲ್ಲಿ ರಕ್ತಸ್ರಾವ ನಿಲ್ಲಿಸುವುದು ಹೇಗೆ ಎಂದು ಹುಡುಕಿದ್ದು, ಬಟ್ಟೆಯ ಮೂಲಕ ರಕ್ತಸ್ರಾವವನ್ನು ನಿಲ್ಲಿಸಲು ಮುಂದಾಗಿದ್ದಾನೆ. ಇದಾದ ಕೆಲ ಕ್ಷಣಕ್ಕೆ ಯುವತಿ ಎಚ್ಚರತಪ್ಪಿದ್ದು, ಕೂಡಲೇ ಆಕೆಯನ್ನು ಖಅಸಗಿ ಆಸ್ಪತ್ರೆಗೆ ದಾಖಲಿಸಲಿಸಿದ್ದಾನೆ. ಖಾಸಗಿ ಆಸ್ಪತ್ರೆಯಿಂದ ಆಕೆಯನ್ನು ಸಿವಿಲ್​ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಿದ್ದು, ಸಿವಿಲ್​ ಆಸ್ಪತ್ರೆ ತಲುಪುವಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಯುವಕ ಬಳಿಕ ತನ್ನ ಪ್ರೇಯಸಿಯ ಮೊಬೈಲ್​ನಿಂದ ಆಕೆಯ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಯುವಕ ಅಂಬುಲೆನ್ಸ್‌ಗೆ ಕರೆ ಮಾಡುವ ಬದಲು ಚಿಕಿತ್ಸೆಯ ಕುರಿತು ಆನ್‌ಲೈನ್‌ನಲ್ಲಿ ಹುಡುಕುತ್ತಾ ಬರೋಬ್ಬರಿ 90 ನಿಮಿಷ ವ್ಯರ್ಥ ಮಾಡಿದ್ದಾನೆ. ವೈದ್ಯಕೀಯ ನೆರವು ಪಡೆಯಲು ವಿಳಂಬವಾಗಿದ್ದೆ ಯುವತಿ ಸಾವಿಗೆ ಕಾರಣವಾಗಿದೆ. ಯುವತಿ ಸ್ಥಿತಿ ಚಿಂತಾಜನಕವಾಗಿದ್ದರೂ, ಲೈಂಗಿಕ ಸಂಬಂಧವನ್ನು ಮುಂದುವರಿಸಲು ಪ್ರಯತ್ನಿಸಿದ್ದಾರೆ. ಯುವತಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಯೋನಿ ಹರಿದಿದ್ದು, ಅತಿಯಾದ ರಕ್ತಸ್ರಾವವಾಗಿರುವುದು ಬಯಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.