ಕರೀನಾ ಕಪೂರ್ ಬಳಿ ಬಂದ ಮಹಿಳೆ 
ನ್ಯೂಸ್

‘ಹ್ಯಾಂಡ್‌ಶೇಕ್ ಕೊಡಿ’ ಎಂದ ಮಹಿಳೆ, ದೂರ ಸರಿದ ಕರೀನಾ! ನಟಿಯ ನಡೆಗೆ ನೆಟ್ಟಿಗರ ಪರ-ವಿರೋಧ | Kareena Kapoor

Kareena Kapoor: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸಾರ್ವಜನಿಕವಾಗಿ ಕಾಣಿಸಿಕೊಂಡ ವೇಳೆ ಮಹಿಳೆಯೊಬ್ಬರು ಅವರ ಬಳಿ ಬಂದು ಒಮ್ಮೆ ಹ್ಯಾಂಡ್‌ಶೇಕ್ ಮಾಡುವಂತೆ ಕೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆಯ ವರ್ತನೆಯಿಂದ ಕರೀನಾ ಮುಜುಗರಕ್ಕೊಳಗಾದಂತೆ ಕಾಣಿಸಿದ್ದಾರೆ. ಈ ವೇಳೆ ನಟಿಯ ವರ್ತನೆಗೆ ನೆಟ್ಟಿಗರಿಂದ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಮುಂಬೈನಲ್ಲಿ ನಿನ್ನೆ ರಾತ್ರಿ ಕಾರಿನಿಂದ ಇಳಿದ ಕರೀನಾ ಕಪೂರ್ ಫ್ಲೋರಲ್ ಪ್ರಿಂಟ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಮಹಿಳೆಯೊಬ್ಬರು ನಟಿಯ ಹತ್ತಿರ ಬಂದು, ‘ಏಕ್ ಬಾರ್ ಹಾತ್ ಲಗಾವೋ’ (ಒಮ್ಮೆ ಕೈ ಕುಲುಕಿ) ಎಂದು ಕೇಳುತ್ತಿರುವುದು ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ.

ಮಹಿಳೆಗೆ ಹ್ಯಾಂಡ್‌ಶೇಕ್ ಮಾಡದ ನಟಿ

ಮಹಿಳೆ ಹತ್ತಿರ ಬರುತ್ತಿದ್ದಂತೆ ಕರೀನಾ ತಮ್ಮ ಬಾಡಿಗಾರ್ಡ್ ಸಹಾಯದಿಂದ ಅಲ್ಲಿಂದ ತೆರಳಿದ್ದಾರೆ. ಈ ವೇಳೆ ನಗುಮುಖದಿಂದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದ ನಟಿ, ಮಹಿಳೆಯೊಂದಿಗೆ ಹ್ಯಾಂಡ್‌ಶೇಕ್ ಮಾಡಿಲ್ಲ ಎನ್ನಲಾಗಿದೆ.

ಕರೀನಾ ವರ್ತನೆಗೆ ನೆಟ್ಟಿಗರ ಪ್ರತಿಕ್ರಿಯೆ

ವಿಡಿಯೋ ವೈರಲ್ ಆಗುತ್ತಿದ್ದಂತೆ ಕರೀನಾ ಅವರ ವರ್ತನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ. ಕೆಲವರು ನಟಿಯನ್ನು ಟೀಕಿಸಿದರೆ, ಹಲವರು ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ.

‘ಭಿಕ್ಷೆ ಬೇಡುವ ಮಹಿಳೆ ಮುಟ್ಟಲು ಬಂದರೆ, ಟೀಕಿಸುವವರು ಅವಕಾಶ ಕೊಡುತ್ತಾರಾ?’ ಎಂದು ಒಬ್ಬ ನೆಟ್ಟಿಗ ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ‘ಕರೀನಾ ಅವರನ್ನು ದೂಷಿಸುವ ಅಗತ್ಯವಿಲ್ಲ, ಅದು ಅವರ ವೈಯಕ್ತಿಕ ಆಯ್ಕೆ’ ಎಂದು ನಟಿಯ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಂವಿಧಾನವೇ ಭಾರತದ ಶಕ್ತಿ; ಕ್ರೈಸ್ತ ಸುರಕ್ಷತೆ, ಅಮೆರಿಕ ಸುಂಕದ ಬಗ್ಗೆ ಶಶಿ ತರೂರ್ ಕಳವಳ | Shashi Tharoor

ಇನ್ನು ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಘಟನೆಗಳು ನಡೆದಾಗ ಸೆಲೆಬ್ರಿಟಿಗಳು ಎದುರಿಸುವ ಮುಜುಗರದ ಸನ್ನಿವೇಶದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸದ್ಯ ಕರೀನಾ ಕಪೂರ್ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.