hindu harsha 
ನ್ಯೂಸ್

ಹರ್ಷನ ಹತ್ಯೆ ಪ್ರಕರಣದ ಸಾಕ್ಷಿದಾರನಿಗೆ ಬೆದರಿಕೆ

ಶಿವಮೊಗ್ಗ: ನಗರದ ಭಾರತಿ ಕಾಲನಿಯಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಹಿಂದೂ ಹರ್ಷನ ಹತ್ಯೆ ಪ್ರಕರಣದ ಸಾಕ್ಷಿದಾರನಿಗೆ ಕೋರ್ಟ್‌ಗೆ ತೆರಳದಂತೆ ಬೆದರಿಕೆ ಹಾಕಿದ್ದು, ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರ್ಷ ಹತ್ಯೆ ಪ್ರಕರಣದಲ್ಲಿ ಅಭಿಷೇಕ್ ಎಂಬಾತನನ್ನು ಎನ್‌ಐಎ(ರಾಷ್ಟ್ರೀಯ ತನಿಖಾ ದಳ) ಸಾಕ್ಷಿಯಾಗಿ ಪರಿಗಣಿಸಿತ್ತು. ಹಿಂದು ಹರ್ಷ ಹತ್ಯೆಯಾದ ದಿನ ಆರೋಪಿಗಳು ಶಿವಮೊಗ್ಗದ ಬೈಪಾಲ್ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ತಮ್ಮ ಕಾರಿಗೆ ಇಂಧನ ಹಾಕಿಸಿದ್ದರು.

ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಪೆಟ್ರೋಲ್ ಭರ್ತಿ ಮಾಡಿದ್ದರು. ಹಾಗಾಗಿ ಅಭಿಷೇಕ್‌ನನ್ನು ಸಾಕ್ಷಿಯಾಗಿ ಎನ್‌ಐಎ ಪರಿಗಣಿಸಿತ್ತು. ಸದ್ಯ ಅಭಿಷೇಕ್ ಪೆಟ್ರೋಲ್ ಬಂಕ್ ತೊರೆದು ಬೇರೆ ಕೆಲಸ ಮಾಡುತ್ತಿದ್ದು ಈಚೆಗೆ ಆ ಬಂಕ್‌ಗೆ ಸ್ಕೂಟಿಯಲ್ಲಿ ತೆರಳಿದ್ದ ವ್ಯಕ್ತಿಯೊಬ್ಬ ಅಭಿ ಯಾರೆಂದು ಪ್ರಶ್ನಿಸಿದ್ದ. ಆತ ಕೆಲಸ ಬಿಟ್ಟಿರುವುದಾಗಿ ತಿಳಿಸಿದಾಗ, ಕೋರ್ಟ್‌ಗೆ ಹೋಗದಂತೆ ಹೇಳಿ ಎಂದು ಬಂಕ್ ಸಿಬ್ಬಂದಿಗೆ ಎಚ್ಚರಿಸಿದ್ದ. ಈ ವಿಷಯ ಸ್ನೇಹಿತರಿಂದ ತಿಳಿದ ಅಭಿಷೇಕ್ ಡಿ.12ರಂದು ಎನ್‌ಐಎ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದು ಮರುದಿನ (ಶುಕ್ರವಾರ)ಕೋರ್ಟ್ ಸೂಚನೆ ಮೇರೆಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.