catfish pond 
ನ್ಯೂಸ್

ಸುರಕ್ಷತಾ ದೃಷ್ಟಿಯಿಂದ ಕೃಷಿ ಹೊಂಡಕ್ಕೆ ತಂತಿ ಬೇಲಿ ಕಡ್ಡಾಯ

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಕೃಷಿಭಾಗ್ಯ ಯೋಜನೆಯಡಿ ನಿರ್ಮಾಣ ಮಾಡುವ ಕೃಷಿ ಹೊಂಡಕ್ಕೆ ಕಡ್ಡಾಯವಾಗಿ ತಂತಿ ಬೇಲಿ ಮತ್ತು ಸೂಚನಾ ಲಕ ಅಳವಡಿಸಬೇಕು. ಇಲ್ಲವಾದರೆ ಶೇ.25 ಅನುದಾನ ಬಿಡುಗಡೆ ಆಗುವುದಿಲ್ಲ.

ಹೌದು.. ಕೃಷಿ ಚಟುವಟಿಕೆ ಸಲುವಾಗಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಕೃಷಿ ಇಲಾಖೆಯಿಂದ ಅನುದಾನ ಸಿಗಲಿದೆ. ಆದರೆ, ಮಕ್ಕಳು ಆಟವಾಡುವ ಸಮಯದಲ್ಲಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು, ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 45 ಮಕ್ಕಳು ಅಸುನೀಗಿದ್ದಾರೆ. ಮಕ್ಕಳೂ ಅಲ್ಲದೆ, ಜಾನುವಾರುಗಳು ಮತ್ತು ವಯಸ್ಕರು ಸಹ ಈಜಾಡಲು ಹೋಗಿ ಪ್ರಾಣ ಕಳೆದುಕೊಳ್ಳುವ ಘಟನೆಗಳು ಸಾಕಷ್ಟು ವರದಿಯಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜುಲೈ 9ರಂದು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೃಷಿ ಹೊಂಡದಲ್ಲಿ ಪ್ರಾಣ ಹಾನಿ ಉಂಟಾಗದಂತೆ ಎಚ್ಚರಿಕೆ ವಹಿಸುವ ಬಗ್ಗೆ ಚರ್ಚೆ ನಡೆಸಿ ಮಾರ್ಗಸೂಚಿ ಹೊರಡಿಸಿದೆ.

ಕೃಷಿ ಹೊಂಡ ನಿರ್ಮಿಸಿದ ನಂತರ ಸುತ್ತಲೂ ಕಡ್ಡಾಯವಾಗಿ ತಂತಿ ಬೇಲಿ ಅಳವಡಿಸಬೇಕು. ಹೊಂಡದಲ್ಲಿ ಹಗ್ಗಗಳನ್ನು ಇಳೆಬಿಟ್ಟು ಟ್ಯೂಬ್ ತೇಲಿಬಿಡುವುದು ಮತ್ತು ಸೂಚನಾ ಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ಇದರ ಜವಾಬ್ದಾರಿಯನ್ನು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ವಹಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೃಷಿ ಹೊಂಡಕ್ಕೆ ಸುರಕ್ಷತಾ ಬೇಲಿ ನಿರ್ಮಾಣ ಮಾಡಿರುವ ಬಗ್ಗೆ ಸ್ವಯಂೋಷಣೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದು ಕೆ-ಕಿಸಾನ್ ಅರ್ಜಿಯನ್ನು ದೃಢೀಕರಿಸಬೇಕು. ತಂತಿ ಬೇಲಿ ಅಳವಡಿಸಿದ ಮೇಲೆ ರೈತ ಸಂಪರ್ಕ ಕೇಂದ್ರದ ಸಹಾಯಕ ಅಧಿಕಾರಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಬೇಕು. ಆ ನಂತರ ಕೆ-ಕಿಸಾನ್ ಮೊಬೈಲ್ ಆ್ಯಪ್‌ನಲ್ಲಿ ಸ್ಥಳ ಪರಿಶೀಲನೆ ಕೈಗೊಂಡು ಜಿಪಿಎಸ್ ೆಟೋ ಅಪ್‌ಲೋಡ್ ಮಾಡಬೇಕು. ಆ ನಂತರವೇ ಬಾಕಿ ಇರುವ ಶೇ.25 ಸಹಾಯಧನ ಪಾವತಿಸಬೇಕು. ಜತೆಗೆ ರೈತರು ಅಳವಡಿಸಿರುವ ಸೂಚನಾಲಕಕ್ಕೆ 2 ಸಾವಿರ ರೂ. ಸಹಾಯಧನ ಮಂಜೂರು ಮಾಡಬೇಕು. ಒಂದು ವೇಳೆ ಸುರಕ್ಷತಾ ಕ್ರಮಗಳನ್ನು ಅಳವಡಿಸದೇ ಇದ್ದರೆ ಬಾಕಿ ಇರುವ ಶೇ.25 ಸಹಾಯಧನವನ್ನು ಬಿಡುಗಡೆ ಮಾಡದಂತೆ ಕೃಷಿ ಇಲಾಖೆ ಕಟ್ಟಾಜ್ಞೆ ಮಾಡಿದೆ.

2023-24ರಿಂದ ಅನ್ವಯ:

2023-24 ಮತ್ತು 2024-25ನೇ ಸಾಲಿನ ಕೃಷಿಭಾಗ್ಯ ಯೋಜನೆ ಮತ್ತು ಕೃಷಿಭಾಗ್ಯ (ಎಸ್‌ಡಿಎಂಎ್) ಯೋಜನೆಗಳಡಿ ಕೃಷಿ ಹೊಂಡ ನಿರ್ಮಿಸಿದ ಎಲ್ಲ ಲಾನುಭವಿಗಳಿಗೆ ಮಾರ್ಗಸೂಚಿ ಅನ್ವಯ ಆಗಲಿದೆ. ಈ ಬಗ್ಗೆ ಲಾನುಭವಿಗಳಿಗೆ, ರೈತರಿಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಮಾಡಬೇಕೆಂದು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೃಷಿ ಹೊಂಡ ದುರಂತಗಳು:

- ಆಗಸ್ಟ್ 13ರಲ್ಲಿ ವಿಜಯಪುರ ಜಿಲ್ಲೆಯ ಇಂಡಿ ಸಮೀಪ ಅರ್ಚನಾ ರಾಠೋಡ (8)

- ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಪ್ರೀತಮ್ (13)

- ಜನವರಿ 1ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ತಾಯಿ ಮತ್ತು ಶ್ರವಣ (6), ಶರಣ(4)