ನ್ಯೂಸ್

ಈ ಘಟನೆಗಳು 2025ರಲ್ಲಿ ಲಕ್ಷಾಂತರ ಮಂದಿಯನ್ನು ಬಲಿ ಪಡೆಯಲಿದೆ! ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯ | Nostradamus Predictions

Nostradamus Predictions : ಫ್ರೆಂಚ್ ತತ್ವಜ್ಞಾನಿ ಮತ್ತು ಪ್ರವಾದಿ ನಾಸ್ಟ್ರಾಡಾಮಸ್ ಭವಿಷ್ಯವಾಣಿಯು ಇಲ್ಲಿಯವರೆಗೆ ಹಲವು ಬಾರಿ ಸಾಬೀತಾಗಿದೆ. 1666 ರಲ್ಲಿ ಲಂಡನ್‌ನ ಮಹಾ ಬೆಂಕಿ, 9/11 ಭಯೋತ್ಪಾದಕ ದಾಳಿ, 2016ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗುವುದು, ಕರೊನಾ ಸಾಂಕ್ರಾಮಿಕ ರೋಗ, ರಾಣಿ ಎಲಿಜಬೆತ್ ಮರಣದ ಕುರಿತಂತೆ ಸುಮಾರು 500 ವರ್ವದ ಹಿಂದೆಯೇ ಭವಿಷ್ಯ ನುಡಿದಿದ್ದರು. ಇದೆಲ್ಲ ಅವರು ಹೇಳಿದಂತೆಯೇ ನಡೆದಿದೆ. ಆತಂಕಕಾರಿ ವಿಷಯವೆಂದರೆ ನಾಸ್ಟ್ರಾಡಾಮಸ್​ ಅವರು 2025ರಲ್ಲಿ ಸಂಭವಿಸುವ ಕೆಲವು ಅಪಘಾತಗಳನ್ನು ಸಹ ಉಲ್ಲೇಖಿಸಿದ್ದಾರೆ.

ಅಂದಹಾಗೆ ನಾಸ್ಟ್ರಾಡಾಮಸ್ 1555ರಲ್ಲಿ ತನ್ನ ಪುಸ್ತಕ ದಿ ಕಂಪ್ಲೀಟ್ ಪ್ರೊಫೆಸೀಸ್ ಫಾರ್ ದಿ ಫ್ಯೂಚರ್​ನಲ್ಲಿ ವಿಶ್ವದ ಭವಿಷ್ಯವಾಣಿ ಬರೆದಿದ್ದಾರೆ. ಈ ಪುಸ್ತಕವು 942 ಕವಿತೆಗಳ ಸಂಗ್ರಹವಾಗಿದೆ. ಇದರ ಮೂಲಕ ನಾಸ್ಟ್ರಾಡಾಮಸ್​ ಭವಿಷ್ಯದ ವಿವಿಧ ಘಟನೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಆ ನಿಟ್ಟಿನಲ್ಲಿ ನಾಸ್ಟ್ರಾಡಾಮಸ್ ಅವರ 2025ರ ಭವಿಷ್ಯವಾಣಿಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅವು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

1. ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಯ ಪ್ರಕಾರ, 2025ರಲ್ಲಿ ರಾಜಕೀಯ ಉದ್ವಿಗ್ನತೆ ಮತ್ತು ಯುದ್ಧದ ಸಾಧ್ಯತೆಯಿದೆ. ಇನ್ನು ಕೆಲ ರಾಷ್ಟ್ರಗಳು ಯುದ್ಧದ ಬೆಂಕಿಯಲ್ಲಿ ಬೇಯಲಿವೆ.

2. ಯುರೋಪ್ ಖಂಡದಾದ್ಯಂತ ಶೀಘ್ರದಲ್ಲೇ "ಅಪಾಯಕಾರಿ ಯುದ್ಧಗಳು" ಪ್ರಾರಂಭವಾಗಲಿವೆ ಎಂದು ನಾಸ್ಟ್ರಾಡಾಮಸ್ ಹೇಳಿದ್ದಾರೆ. 2025 ವಿಶ್ವದ ರಾಷ್ಟ್ರಗಳಿಗೆ ಸವಾಲಿನ ಸಮಯವಾಗಲಿದೆ. ರಾಜಮನೆತನದೊಳಗಿನ ಉದ್ವಿಗ್ನತೆಯಿಂದಾಗಿ ಈ ಪರಿಸ್ಥಿತಿ ಉದ್ಭವಿಸುತ್ತದೆ.

3. ನಾಸ್ಟ್ರಾಡಾಮಸ್ ಪ್ರಕಾರ, ನೈಸರ್ಗಿಕ ವಿಪತ್ತುಗಳು ಸಂಭವಿಸಬಹುದು. 2025ರಲ್ಲಿ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು ಸಂಭವಿಸುತ್ತವೆ. ಈ ಘಟನೆಗಳು ಪ್ರಪಂಚದಾದ್ಯಂತ ವಿನಾಶ ಮತ್ತು ಅವ್ಯವಸ್ಥೆಗೆ ಕಾರಣವಾಗುತ್ತವೆ. ಇದರಿಂದ ಲಕ್ಷಾಂತರ ಜೀವಗಳು ಬಲಿಯಾಗಲಿವೆ.

4. 2025ರ ಮತ್ತೊಂದು ಕೆಟ್ಟ ಮುನ್ಸೂಚನೆಯೆಂದರೆ ಜಾಗತಿಕ ಆರ್ಥಿಕ ಕುಸಿತ. ಇದು ಆರ್ಥಿಕ ಬಿಕ್ಕಟ್ಟಿಗೂ ಕಾರಣವಾಗಲಿದೆ. ಪ್ರಸ್ತುತ ಜಾಗತಿಕ ಆರ್ಥಿಕ ವಾತಾವರಣದಲ್ಲಿ, ಅನೇಕ ದೇಶಗಳು ಸಾಲ ಮತ್ತು ಇತರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿವೆ.

5. ನಾಸ್ಟ್ರಾಡಾಮಸ್‌ ಅವರ ಎಲ್ಲ ಭವಿಷ್ಯವಾಣಿಗಳು ಕೇವಲ ವಿನಾಶದ ಬಗ್ಗೆಯೇ ಇರುವುದಿಲ್ಲ. ಕೆಲವೊಂದು ಪ್ರಗತಿಯು ಸಹ ಈ ವರ್ಷ ನಡೆಯಲಿದೆ. 2025ರಲ್ಲಿ ಗಮನಾರ್ಹ ತಾಂತ್ರಿಕ ಪ್ರಗತಿಗಳಾಗಲಿವೆ. ಈ ಪ್ರಗತಿಗಳು ಔಷಧ, ಸಂವಹನ ಮತ್ತು ಸಾರಿಗೆ ಸೇರಿದಂತೆ ಮಾನವ ಜೀವನದ ವಿವಿಧ ಅಂಶಗಳನ್ನು ಸಮರ್ಥವಾಗಿ ಪರಿವರ್ತಿಸಬಹುದು.

6. ನಾಸ್ಟ್ರಾಡಾಮಸ್‌ನ ಕೆಲವು ಭವಿಷ್ಯವಾಣಿಗಳ ಪ್ರಕಾರ 2025ರ ಅತ್ಯಂತ ವಿನಾಶಕಾರಿ ಭವಿಷ್ಯವಾಣಿಯೆಂದರೆ ಆಕಾಶದಿಂದ ಕ್ಷುದ್ರಗ್ರಹ ಬೀಳುವುದು. ಇದರಿಂದ ಭೂಮಿಯ ಮೇಲೆ ದೊಡ್ಡ ಬೆಂಕಿ ಕಾಣಿಸಿಕೊಳ್ಳಲಿದೆಯಂತೆ. ಈ ಭವಿಷ್ಯವಾಣಿಯು ಅನೇಕರ ಹುಬ್ಬೇರಿಸಿದೆ. ಏಕೆಂದರೆ ಕ್ಷುದ್ರಗ್ರಹವು ತುಂಬಾ ಅಪಾಯಕಾರಿ ಅಂಶವಾಗಿದೆ. ಆದರೆ, ಈ ವರ್ಷ ಕ್ಷುದ್ರಗ್ರಹಗಳು ಭೂಮಿಗೆ ಬರಲಿವೆ ಎಂದು ನಾಸಾ ಕೂಡ ಹೇಳಿದೆ. ಆದರೆ, ಯಾವುದೂ ಜೀವಕ್ಕೆ ಅಪಾಯಕಾರಿ ಅಲ್ಲ ಎಂದು ತಿಳಿಸಿದೆ.

ಗಮನಿಸಿ: ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪುಸ್ತಕಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ. ಇದಕ್ಕೆ ವಿಜಯವಾನಿ ಡಾಟ್​ ನೆಟ್​ ಹೊಣೆಯಲ್ಲ.