ಕಾಡಾನೆ ದಾಳಿಯಿಂದ ಭತ್ತದ ಬೆಳೆ ನಾಶಗೊಂಡಿರುವುದು.  
ನ್ಯೂಸ್

ಕಾಡಾನೆ ದಾಳಿ; ಬತ್ತದ ಬೆಳೆ ನಾಶ

ರಿಪ್ಪನ್‌ಪೇಟೆ: ಕುಮದ್ವತಿ ನದಿ ತಟದ ಬಟಾಣಿ ಜಡ್ಡು ಗ್ರಾಮದಲ್ಲಿ ಗದ್ದೆಗೆ ನುಗ್ಗಿರುವ ಕಾಡಾನೆ ಭತ್ತದ ಬೆಳೆಯನ್ನು ನಾಶಗೊಳಿಸಿದೆ. ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದ ಕಡೆಗದ್ದೆ ಅರಣ್ಯದಲ್ಲಿ ತಿಮ್ಮಪ್ಪ ಎಂಬುವರು ಶುಕ್ರವಾರವಷ್ಟೇ ಆನೆ ತುಳಿತದಿಂದ ಸಾವನ್ನಪ್ಪಿದ್ದರು. ಇದೀಗ ಬಸವಾಪುರಕ್ಕೆ ಹತ್ತಿರವಿರುವ ಬಟಾಣಿಜಡ್ಡು ಗ್ರಾಮದಲ್ಲಿ ದಾನಪ್ಪ ಎಂಬುವರ ಗದ್ದೆಗೆ ನುಗ್ಗಿ ಭತ್ತದ ಬೆಳೆಯನ್ನು ನಾಶಗೊಳಿಸಿದೆ. ಮೇಲಿಂದ ಮೇಲೆ ಕಾಡಾನೆ ದಾಳಿ ನಡೆಸುತ್ತಿರುವುದು ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ.

ಅರಣ್ಯ ಇಲಾಖೆಯವರು ಕೂಡಲೇ ಸೂಕ್ತ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.