ಕೊಳ್ಳೇಗಾಲ: ಹುಲಿ, ಜಿಂಕೆ, ಕಾಡುಕುರಿ, ಕಡವೆ, ಪುನುಗು ಬೆಕ್ಕು, ಕಾಡುನಾಯಿಯ ಚರ್ಮ ಮತ್ತು ಮೂಳೆಗಳನ್ನು ಅಕ್ರಮವಾಗಿ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ಮತ್ತೊಬ್ಬ ಆರೋಪಿ ಮಲೆ ಮಹದೇಶ್ವರ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಪೋಡಿನ ಮಹದೇವ ಬಂಧಿತ. ಗುರುವಾರ ಬೆಳಗ್ಗಿನ ಜಾವ 3 ಗಂಟೆಯಲ್ಲಿ ಈತನನ್ನು ಬಂಧಿಸಲಾಗಿದೆ. ಇದನ್ನೂ ಓದಿರಿ ಎರಡು ಕ್ವಿಂಟಾಲ್ ಗಾಂಜಾ ವಶ, ರಾಜಕೀಯ ನಾಯಕನ ಬಂಧನ
ಆ.21ರಂದು ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಬಳಿ ಪ್ರಾಣಿಗಳ ಚರ್ಮ ಮತ್ತು ಮೂಳೆಯನ್ನು ಸಾಗಿಸುತ್ತಿದ್ದ ಹನೂರು ತಾಲೂಕಿನ ನಲ್ಲಿಕತ್ರಿಯ ಮಹಾದೇವ, ಬೊಂಬೆಗಲ್ಲಿನ ರಂಗ, ಕುಮಾರ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ವೇಳೆ ಮಹದೇವ ತಲೆ ಮರೆಸಿಕೊಂಡಿದ್ದ. ಈಗ ಅರಣ್ಯಾಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.