ನ್ಯೂಸ್

ನಾನ್ಯಾರಿಗೂ ಕಮ್ಮಿಯಿಲ್ಲವೆಂದು ಹುಡುಗರೊಂದಿಗೆ FootBall ಆಡಿದ ಆನೆ; Video Viral

ಓಡಿಶಾ: ಕಾಲ ಕಳೆದಂತೆ ಕಾಡುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಪ್ರಾಣಿಗಳು ಆಹಾರ ಅರಸಿ ನಾಡಿನತ್ತ ಧಾವಿಸುತ್ತಿವೆ. ನಾವು ನೋಡಿರುವಂತೆ ಪ್ರತಿನಿತ್ಯ ಕಾಡಾನೆಗಳು ಆಹಾರ ಅರಸಿ ಬಂದು ಬೆಳೆಗಳನ್ನು ನಾಶ ಮಾಡಿರುವ ಸುದ್ದಿಯನ್ನು ಪ್ರತಿನಿತ್ಯ ನಾವು ನೋಡಿ ಹಾಗೂ ಕೇಳುತ್ತಿರುತ್ತೇವೆ. ಆಹಾರ ಅರಸಿ ಬರುವಂತಹ ಆನೆಗಳು ಅನೇಕ ಬಾರಿ ದಾಂಧಲೆ ಮಾಡಿ ಜೀವಕ್ಕೆ ಅಪಾಯವನ್ನು  ಉಂಟು ಮಾಡಿ ಹೋಗಿರುವ ಘಟನೆಗಳು ಸಾಕಷ್ಟಿವೆ. ಆದರೆ, ಇಲ್ಲೊಂದು ಆನೆ ಮಾತ್ರ ಡಿಫರೆಂಟ್​ ಆಗಿ ಫುಟ್ಬಾಲ್​ (FootBall) ಆಟವಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಈ ಘಟನೆಯು ಒಡಿಶಾದ ಕಿಯೋಂಜಾರ್‌ನ ಪಾಟ್ನಾ ಅರಣ್ಯ ವ್ಯಾಪ್ತಿಯ ಧಬಾಪಿಟ್ನಾ ಮೈದಾನದಲ್ಲಿ ನಡೆದಿದ್ದು, ಆಹಾರ ಅರಸಿ ಕಾಡಿನಿಂದ ನಾಡಿನತ್ತ ಬಂದ ಆನೆಯೊಂದು ಅಲ್ಲೇ ಫುಟ್ಬಾಲ್​ ಆಡುತ್ತಿದ್ದ ಹುಡುಗರೊಂದಿಗೆ ಕೆಲಕಾಲ ಫುಟ್ಬಾಲ್​ (FootBall) ಆಟವಾಡಿ ವಾಪಸ್​ ಕಾಡಿನತ್ತ ತೆರಳಿದೆ. ಈ ವಿಡಿಯೋ ಸದ್ಯ ಪ್ರಾಣಿಪ್ರಿಯರ ಮನ ಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಆನೆ ತನ್ನ ಕಾಲಿನಿಂದ ಸ್ಟೈಲ್​ ಆಗಿ ಫುಟ್​ಬಾಲ್ (FootBall)​ ಒದೆಯುತ್ತಿರುವುದನ್ನು ನೋಡಬಹುದಾಗಿದೆ. ಇದನ್ನು ನೋಡಿದ ಹುಡುಗರು ಜೋರಾಗಿ ಕೂಗುತ್ತ ಆನೆಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಮಾನಸ್​ ಮುದುಲಿ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೆ 2.3 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ.

ವಿಡಿಯೋ ನೋಡಿರುವ ನೆಟ್ಟಿಗರು ಕೂಡಲೇ ಈ ಆನೆಯನ್ನು ಕೆಲಸಕ್ಕೆ ಸೇರಿಸಿಕೊಳ್ಳಿ. ಆನೆಯೂ ಅವಿತ್ತಿದ್ದಾಗ ಹುಡುಗರು ಫುಟ್ಬಾಲ್​ ಆಡುತ್ತಿದ್ದನ್ನು ನೋಡಿ ಆಸೆಯಾಗಿ ಆಟವಾಡಿದೆ. ಮುಂದಿನ ದಿನಗಳಲ್ಲಿ ಈತನಿಗೆ ಚೆನ್ನಾಗಿ ಟ್ರೈನ್​ ಮಾಡಿದರೆ ಒಳ್ಳೆಯ ಉಪಯೋಗವಾಗುತ್ತದೆ ಎಂದು ನೆಟ್ಟಿಗರು ಕಮೆಂಟ್​ ಮಾಡಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.