ನ್ಯೂಸ್

ಪತ್ನಿಯ ಸಾವಿಗೆ ನೊಂದು, ಮೂರು ಮಕ್ಕಳ ಕೊಂದು, ಆತ್ಮಹತ್ಯೆ ಮಾಡಿಕೊಂಡ..!

ಚಂಡೀಗಢ: ಪತ್ನಿಯ ಅಕಾಲಿಕ ಮರಣದಿಂದ ನೊಂದ ಪತಿ, ತನ್ನ ಮೂವರು ಮಕ್ಕಳನ್ನು ಸಾಯಿಸಿದ್ದಷ್ಟೇ ಅಲ್ಲದೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪಂಜಾಬ್​ನ ಬತಿಂಡ ಜಿಲ್ಲೆಯ ಹಮೀರ್​ಘರ್​ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಪ್ರಕರಣ ಸಂಭವಿಸಿದೆ. ಕೂಲಿ ಕಾರ್ಮಿಕ ಬಿಯಾಂತ್ ಸಿಂಗ್​ (35) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತನ ಪತ್ನಿ ಕ್ಯಾನ್ಸರ್​ ರೋಗದಿಂದ ಬಳಲಿದ್ದು, ಆಗಸ್ಟ್​ನಲ್ಲಿ ಮೃತಪಟ್ಟಿದ್ದಳು.

ಇದರಿಂದ ತುಂಬ ನೊಂದಿದ್ದ ಬಿಯಾಂತ್, ಖಿನ್ನತೆಗೆ ಒಳಗಾಗಿದ್ದ. ಹೀಗಾಗಿ ಮೂವರು ಮಕ್ಕಳನ್ನು ಸಾಯಿತಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೀಡಾಗಿರುವ ಮೂರೂ ಮಕ್ಕಳು ಆರು ವರ್ಷದೊಳಗಿನವರು. ಪತ್ನಿಯ ಅಕಾಲಿಕ ಮರಣದಿಂದ ನೊಂದಿದ್ದೇನೆ ಎಂದು ಆತ ಬರೆದಿದ್ದ ಡೆತ್​ನೋಟ್​ ಸಿಕ್ಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)