ನ್ಯೂಸ್

ಪತ್ನಿಯ ಪ್ರಿಯಕರನನ್ನು ಇಟ್ಟಿಗೆಯಿಂದ ಜಜ್ಜಿ ಕೊಂದ

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಖಿನ ಬೆಳ್ಳಾವರಹಳ್ಳಿಯಲ್ಲಿ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪತಿರಾಯ ಇಟ್ಟಿಗೆಯಿಂದ ಮುಖಕ್ಕೆ ಜಜ್ಜಿ ಜಜ್ಜಿ ಕೊಲೆ ಮಾಡಿದ್ದಾನೆ.

ಗ್ರಾಮದ ವೆಂಕಟೇಶಪ್ಪ (42) ಮೃತ. ಚಿಂಚಾನಹಳ್ಳಿಯ ನರಸಿಂಹಪ್ಪ (45) ಕೊಲೆ ಆರೋಪಿ. ಈತನನ್ನು ಬಂಧಿಸಿರುವ ಪೊಲೀಸರು ಕೊಲೆಗೆ ಬಳಸಿದ್ದ ಇಟ್ಟಿಗೆ ಮತ್ತು ಮಚ್ಚನ್ನು ವಶಪಡಿಸಿಕೊಂಡಿದ್ದಾರೆ.

ತನ್ನ ಹೆಂಡತಿಯೊಂದಿಗೆ ವೆಂಕಟೇಶಪ್ಪ ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನುವ ವಿಚಾರದಲ್ಲಿ ಕೋಪಗೊಂಡಿದ್ದ ನರಸಿಂಹಪ್ಪ. ಇದರ ವಿಚಾರವಾಗಿ ಪತ್ನಿ ಮೇಲೆ ಗಲಾಟೆ ಮಾಡಿದ್ದಾನೆ. ಇದರ ನಡುವೆ ವೆಂಕಟೇಶಪ್ಪ ವೆಂಕಟಾಪುರ ಗ್ರಾಮದ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಸ್ಥಳಕ್ಕೆ ಬಂದ ಆರೋಪಿ, ಇಟ್ಟಿಗೆಯಿಂದ ತಲೆ ಮತ್ತು ಮುಖಕ್ಕೆ ಹೊಡೆದಿದ್ದರೆ ಜತೆಗೆ ಮಚ್ಚಿನಿಂದಲೂ ಮಾರಣಾಂತಿಕ ಹಲ್ಲೆ ನಡೆಸಿ, ಬಳಿಕ ಪರಾರಿಯಾಗಿದ್ದಾನೆ. ಇನ್ನು ಗಂಭೀರವಾಗಿ ಗಾಯಗೊಂಡು ವೆಂಕಟೇಶಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತನ ಮಗ ರಮೇಶ್ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.