ನ್ಯೂಸ್

ಪತ್ನಿ ವಿಚ್ಚೇದನ ನೀಡಿದಳೆಂದು ಪತಿ ಆತ್ಮಹತ್ಯೆ

ಹಾನಗಲ್ಲ: ಪತ್ನಿ ವಿಚ್ಚೇದನ ನೀಡಿದ್ದರಿಂದ ಬೇಸತ್ತ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅಕ್ಕಿವಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಗ್ರಂಥಾಲಯದ ಮೇಲ್ವಿಚಾರಕ ಶಂಭಣ್ಣ ರಂಗಪ್ಪ ತಹಸೀಲ್ದಾರ್ (55) ಮೃತ ವ್ಯಕ್ತಿ.
ಈತ ಅರಳೇಶ್ವರ ಗ್ರಾಮದ ಗ್ರಂಥಾಲಯದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ನಿತ್ಯವೂ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ವಿಚ್ಚೇದನ ನೀಡಿದ್ದಳು. ಇದರಿಂದ ಬೇಸತ್ತು ಮನೆಯಲ್ಲಿಯೆ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.