ಉತ್ತರಪ್ರದೇಶ : (love) ಪ್ರಿಯಕರನ ಜತೆ ಇದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪತ್ನಿಯೊಬ್ಬಳು ತನ್ನ ಪತಿಗೆ ವಿಷ ನೀಡಿ ಪರಾರಿಯಾಗಿದ್ದಾಳೆ. ಫತೇಪುರ್ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಹೃತಿಕ್ ಯಾದವ್ ಮತ್ತು ಸುಶೀಲಾ ಯಾದವ್ 2 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ಜೋಡಿ ರಾಧನಗರ ಪವರ್ ಹೌಸ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಹೃತಿಕ್ ಕಾನ್ಪುರದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಜುಲೈ 16 ರಂದು ಹೃತಿಕ್ ಇದ್ದಕ್ಕಿದ್ದಂತೆ ಮನೆಗೆ ಹಿಂತಿರುಗಿದಾಗ ಸುಶೀಲಾ ಬೇರೆಯೊಬ್ಬ ವ್ಯಕ್ತಿಯ ಜತೆ ಆಕ್ಷೇಪಾರ್ಹವಾಗಿರುವುದನ್ನು ನೋಡಿದ್ದಾನೆ. ನಂತರ ಏನು ಮಾತನಾಡದೆ, ಹೃತಿಕ್ ಜುಲೈ 17 ರಂದು ಪತ್ನಿ ಸುಶೀಲಾಳನ್ನು ಕರೆದುಕೊಂಡು ಫತೇಪುರಕ್ಕೆ ಬಂದಿದ್ದಾನೆ. ಈ ವಿಚಾರವಾಗಿ ಪತ್ನಿ ಬಳಿ ಏನು ಪ್ರಶ್ನೆ ಮಾಡದೆ ಇದ್ದನು. ಆದರೆ ಈಕೆ ಅಕ್ರಮ ಸಂಬಂಧ ಕುರಿತಾಗಿ ಪತಿಗೆ ತಿಳಿದಿರುವ ವಿಚಾರವಾಗಿ ಕೋಪಗೊಂಡಿದ್ದಳು.
ಜುಲೈ 18 ರಂದು ಹೃತಿಕ್ ನೀರು ಕೇಳಿದಾಗ, ಸುಶೀಲಾ ಕೋಪದಿಂದ ನೀರಿನಲ್ಲಿ ವಿಷ ಬೆರೆಸಿ ಅವನಿಗೆ ಕೊಟ್ಟಳು. ನೀರು ಕುಡಿದ ನಂತರ ಹೃತಿಕ್ ಸ್ಥಿತಿ ಹದಗೆಟ್ಟಿತು. ನೆರೆಹೊರೆಯವರು ತಕ್ಷಣ ಹೃತಿಕ್ ತಾಯಿ ರಜನಿ ಯಾದವ್ ಅವರಿಗೆ ಮಾಹಿತಿ ನೀಡಿದರು. ರಜನಿ ಯಾದವ್ ಸ್ಥಳಕ್ಕೆ ತಲುಪಿ ತನ್ನ ಮಗನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಸಕಾಲಿಕ ಚಿಕಿತ್ಸೆಯಿಂದಾಗಿ ಹೃತಿಕ್ ಅವರ ಜೀವ ಉಳಿಯಿತು.
ಈ ಘಟನೆಯ ನಂತರ ಆರೋಪಿ ಪತ್ನಿ ಸುಶೀಲಾ ತಲೆಮರೆಸಿಕೊಂಡಿದ್ದಾಳೆ. ಹೃತಿಕ್ ತಾಯಿ ರಜನಿ ಯಾದವ್ ರಾಧಾನಗರ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ, ದೂರು ನೀಡಿದ್ದರೂ, ಪೊಲೀಸರು ಪ್ರಕರಣ ದಾಖಲಿಸಿಲ್ಲ ಅಥವಾ ಆರೋಪಿ ಪತ್ನಿಯನ್ನು ಬಂಧಿಸಿಲ್ಲ ಎನ್ನಲಾಗಿದೆ.
ಈ ವಿಷಯದ ಬಗ್ಗೆ ರಾಧಾನಗರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯನ್ನು ಸಂಪರ್ಕಿಸಿದಾಗ, ಈ ವಿಷಯ ತನ್ನ ಗಮನಕ್ಕೆ ಬಂದಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಖಾಗಗಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.