ಪತ್ನಿ ಜತೆ ಸಿಕ್ಕಿ ಬಿದ್ದ ಪ್ರೇಮಿಗೆ ಬೆಲ್ಟ್‌ನಿಂದ ಹಿಗ್ಗಾಮಗ್ಗಾ ಥಳಿಸಿ ಪತಿ 
ನ್ಯೂಸ್

ಲವರ್​ ಜತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ: ಪ್ರೇಮಿಯ ಕಾಲು ಕಟ್ಟಿ, ರಸ್ತೆಯಲ್ಲೇ ಬೆಲ್ಟ್‌ನಿಂದ ಧರ್ಮದೇಟು | Wife Caught With Boyfriend

Madhya Pradesh Viral Incident: ಪ್ರವಾಸಿತಾಣದಲ್ಲಿ ಪ್ರೇಮಿ ಜೊತೆ ಸುತ್ತಾಡುತ್ತಿದ್ದ ಪತ್ನಿಯನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದ ಪತಿ, ಇಬ್ಬರಿಗೂ ಬೆಲ್ಟ್‌ನಿಂದ ಹಿಗ್ಗಾಮಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ..

ಅಕ್ಟೋಬರ್ 20 ರಂದು ಶಿವಪುರಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣವಾದ ಭದೈಯಾಕುಂಡ್‌ನಲ್ಲಿ ಈ ಘಟನೆ ಸಂಭವಿಸಿದೆ. ಪತ್ನಿ ತನ್ನ ಪ್ರೇಮಿಯೊಂದಿಗೆ ಸುತ್ತಾಡಲು ಬಂದಿದ್ದಾಗ, ಆಕೆಯನ್ನು ಹಿಂಬಾಲಿಸಿ ಬಂದ ಪತಿ ರೆಡ್ ಹ್ಯಾಂಡ್‌ ಆಗಿ ಹಿಡಿದಿದ್ದಾನೆ.

ಕಾಲು ಕಟ್ಟಿ ರಸ್ತೆಯಲ್ಲೇ ಧರ್ಮದೇಟು

ಕೋಪಗೊಂಡ ಪತಿ ತಕ್ಷಣವೇ ತನ್ನ ಸೋದರಸಂಬಂಧಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ನಂತರ ಇಬ್ಬರೂ ಸೇರಿ ಪ್ರೇಮಿಯ ಕಾಲುಗಳನ್ನು ಹಗ್ಗದಿಂದ ಬಿಗಿದು, ಬೆಲ್ಟ್‌ನಿಂದ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ, ರಸ್ತೆಯಲ್ಲೇ ಪತಿ ತನ್ನ ಪತ್ನಿಗೂ ಬೆಲ್ಟ್‌ನಿಂದ ಥಳಿಸಿದ್ದಾನೆ.

ಇದನ್ನೂ ಓದಿ: ಆಂಧ್ರಕ್ಕೆ 'ಅರ್ನಾಬ್' ಚಂಡಮಾರುತದ ಭೀತಿ: ಬುಧವಾರ ಲ್ಯಾಂಡ್‌ಫಾಲ್ ಸಾಧ್ಯತೆ, ರೆಡ್ ಅಲರ್ಟ್ ಘೋಷಣೆ! | Andhra Cyclone

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಹಲ್ಲೆಯ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಪರಿಶೀಲನೆ ನಡೆಸಿದ ಪೊಲೀಸರು, ಪತ್ನಿ ನೀಡಿದ ದೂರಿನ ಮೇರೆಗೆ ಪತಿ ಮತ್ತು ಆತನ ಸೋದರಸಂಬಂಧಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.