ನ್ಯೂಸ್

ಪತಿ-ಪತ್ನಿ ಸಂಬಂಧ: ಅಪ್ಪಿತಪ್ಪಿಯೂ ನಿಮ್ಮ ಹೆಂಡತಿಯ ಮುಂದೆ ಈ ಮಾತುಗಳನ್ನು ಹೇಳಲೇಬೇಡಿ | Wife And Husband Relationship

Wife And Husband Relationship: ಭಾರತದಲ್ಲಿ ವೈವಾಹಿಕ ಜೀವನವನ್ನು ಒಂದು ಬಂಡಿ (ಎರಡು ಚಕ್ರದ ಗಾಡಿ) ಗೆ ಹೋಲಿಸಲಾಗುತ್ತದೆ. ಗಂಡ ಹೆಂಡತಿ ಬಂಡಿಯ ಎರಡು ಚಕ್ರಗಳು ಇದ್ದಂತೆ. ಒಂದು ಚಕ್ರಕ್ಕೆ ತೊಂದರೆಯಾದರೂ ದಾಂಪತ್ಯ ಜೀವನ ಮುಂದೆ ಸಾಗದು. ಈ ಬಂಧವನ್ನು ಗಟ್ಟಿಯಾಗಿ ಇರಿಸಿಕೊಳ್ಳಲು ಇಬ್ಬರಿಂದಲೂ ಸಾಕಷ್ಟು ಶ್ರಮ ಬೇಕಾಗುತ್ತದೆ.

ಜೀವನದಲ್ಲಿ ಜೊತೆಯಾಗಿ ಹೆಜ್ಜೆ ಹಾಕುವಾಗ ಪತಿ-ಪತ್ನಿಯರಲ್ಲಿ ಜಗಳ, ಕಲಹ ಉಂಟಾಗುವುದು ಸಹಜ. ಆದರೆ ಕೋಪದಲ್ಲಾಗಲಿ ಅಥವಾ ತಮಾಷೆಯಿಂದಾಗಲಿ ಈ ಬಲವಾದ ಬಂಧವನ್ನು ದುರ್ಬಲಗೊಳಿಸುವ ಕೆಲವು ಮಾತುಗಳು ಬಾಯಿಯಿಂದ ಜಾರಬಾರದು ಎಂಬುದನ್ನು ನೆನಪಿನಲ್ಲಿಡಬೇಕು. ತವರು ಮನೆ ಮತ್ತು ಎಲ್ಲ ಸಂಬಂಧಗಳನ್ನು ತೊರೆದ ಮಹಿಳೆ ತನ್ನ ಪತಿಯ ಮನೆಗೆ ಬರುತ್ತಾಳೆ. ಇಂತಹ ಸಂದರ್ಭಗಳಲ್ಲಿ ಗಂಡನಾದವನು ಹೆಂಡತಿಯ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಮಾತುಗಳನ್ನಾಗಲಿ ಆಡಬಾರದು. ಹೀಗಾಗಿ ಗಂಡ, ಹೆಂಡತಿಗೆ ಹೇಳಬಾರದಂತಹ ಕೆಲ ವಿಷಯಗಳ ಬಗ್ಗೆ ನಾವಿಂದು ತಿಳಿಯೋಣ.

ಪತಿಯಾದವನು ತನ್ನ ಹೆಂಡತಿಯ ದೇಹದ ಆಕಾರವನ್ನು ಎಂದಿಗೂ ತಪ್ಪಾಗಿ ನಿರೂಪಿಸಬಾರದು. ಏಕೆಂದರೆ ಮಹಿಳೆ ಅದನ್ನು ಇಷ್ಟಪಡುವುದಿಲ್ಲ. ತನ್ನ ಪತಿ ತನ್ನ ಬಗ್ಗೆಯೇ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾನೆ ಎಂದು ಆಕೆ ಭಾವಿಸುತ್ತಾಳೆ. ಹೆಂಡತಿ ದಪ್ಪಗಿದ್ದಾಳೆ, ತೆಳ್ಳಗಿದ್ದಾಳೆ ಅಥವಾ ಅವಳ ಎತ್ತರದ ಬಗ್ಗೆ ತಮಾಷೆಯ ಕಾಮೆಂಟ್‌ಗಳನ್ನು ಎಂದಿಗೂ ಮಾಡಬೇಡಿ.

ಹೋಲಿಕೆ ಮಾಡಿ ಮಾತನಾಡಬಾರದು

ಮದುವೆ ಆಗಿದ್ದರ ಬಗ್ಗೆ ಪಶ್ಚಾತಾಪ ಪಡಬಾರದು. ನಿನ್ನನ್ನು ಮದುವೆಯಾಗಿ ತಪ್ಪು ಮಾಡಿದೆ ಎಂದು ಪತ್ನಿಯ ಮುಂದೆ ಯಾವುದೇ ಕಾರಣಕ್ಕೂ ಹೇಳಬಾರದು. ಇದರಿಂದ ಗಂಡ-ಹೆಂಡತಿ ನಡುವಿನ ನಂಬಿಕೆಯಲ್ಲಿ ಬಿರುಕು ಮೂಡುತ್ತದೆ. ಅಲ್ಲದೆ, ನೀನು ನಿನ್ನ ತಂದೆ-ತಾಯಿಯಂತೆಯೇ ಎಂದು ಎಂದಿಗೂ ಹೋಲಿಕೆ ಮಾಡಿ ಮಾತನಾಡಬಾರದು. ಇದು ಕೂಡ ಆಕೆಯ ಕೋಪಕ್ಕೆ ಕಾರಣವಾಗುತ್ತದೆ. ಇನ್ನೆಂದು ನಿನ್ನನ್ನು ಇಷ್ಟಪಡುವುದಿಲ್ಲ ಎಂದು ತಮಾಷೆಗೂ ಸಹ ಹೇಳಬೇಡಿ. ಇದರಿಂದ ಪತ್ನಿಯ ಮನಸ್ಸಿಗೆ ತುಂಬಾ ನೋವುಂಟಾಗುತ್ತದೆ. ನಿನ್ನನ್ನು ಬಿಟ್ಟು ಬೇರೋಬ್ಬಳನ್ನು ಮದುವೆಯಾಗಬೇಕಿತ್ತು ಎಂದು ಎಂದಿಗೂ ಹೇಳಬೇಡಿ. ಇದರಿಂದ ಇಬ್ಬರ ನಡುವಿನ ಪ್ರೀತಿ ಮರೆಯಾಗುತ್ತದೆ. ಇದನ್ನು ಬಿಟ್ಟು ಸಂಬಂಧವನ್ನು ಹೇಗೆ ಬೆಳೆಸಬೇಕೆಂಬುದರ ಬಗ್ಗೆ ಯೋಚಿಸಿ.

ರಹಸ್ಯಗಳ ಬಗ್ಗೆ ಹೇಳಬಾರದು

ನನ್ನ ಎಲ್ಲ ಸಮಸ್ಯೆಗಳಿಗೆ ನೀನೇ ಕಾರಣ ಎಂದೂ ಹೇಳಬೇಡಿ. ಇದು ಪತ್ನಿಯ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಸಂಬಂಧವೇ ಹಾಳಾಗುತ್ತದೆ. ನಾನು ನಿನ್ನಿಂದ ಕೆಲವು ರಹಸ್ಯಗಳನ್ನು ಕಾಪಾಡಿಕೊಂಡಿದ್ದೇನೆ ಅಂತಾನೂ ಹೇಳಬೇಡಿ. ಇದರಿಂದ ಪತ್ನಿಗೆ ನಿಮ್ಮ ಮೇಲಿರುವ ನಂಬಿಕೆ ಸಂಪೂರ್ಣವಾಗಿ ಮಾಯವಾಗುತ್ತದೆ.

ಅವಮಾನದ ಬಗ್ಗೆ ಹೇಳಿಕೊಳ್ಳಬೇಡಿ

ಇನ್ನು ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ ಪುರುಷರು ತಮ್ಮ ದೌರ್ಬಲ್ಯವನ್ನು ತಮ್ಮ ಸಂಗಾತಿಯೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು. ಏಕೆಂದರೆ ಅವಳು ನಿಮ್ಮ ದೌರ್ಬಲ್ಯವನ್ನು ನಿಮ್ಮ ವಿರುದ್ಧ ಅಸ್ತ್ರವಾಗಿ ಬಳಸಬಹುದು. ಆದ್ದರಿಂದಲೇ ಗಂಡಸರು ಈ ಕೆಲಸವನ್ನು ಮಾಡಬೇಡಿ ಎನ್ನುತ್ತಾರೆ. ನಿಮಗಾದ ಅವಮಾನದ ಬಗ್ಗೆ ನಿಮ್ಮ ಹೆಂಡತಿಗೆ ಎಂದಿಗೂ ಹೇಳಬೇಡಿ. ಏಕೆಂದರೆ ಭವಿಷ್ಯದಲ್ಲಿ ಆಕೆ ಅದನ್ನೇ ಪುನರಾವರ್ತಿಸಬಹುದು. ಅಲ್ಲದೆ, ಅವಳು ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು.

ನೀವು ಎಷ್ಟು ಸಂಪಾದಿಸುತ್ತೀರಿ ಮತ್ತು ಎಷ್ಟು ಖರ್ಚು ಮಾಡುತ್ತೀರಿ ಎಂಬುದು ನಿಮ್ಮ ಹೆಂಡತಿಗೆ ತಿಳಿದಿರಬಾರದು. ಇಲ್ಲದಿದ್ದರೆ ಅವರು ನಿಮ್ಮ ಖರ್ಚುಗಳನ್ನು ನಿಯಂತ್ರಿಸುತ್ತಾರೆ. ಇದರಿಂದ ಅಗತ್ಯವಿರುವಷ್ಟು ಖರ್ಚು ಮಾಡಲು ಕಷ್ಟವಾಗುತ್ತದೆ. ಅಲ್ಲದೆ, ನೀವು ಮಾಡಿದ ದಾನವನ್ನು ಸಹ ಗೌಪ್ಯವಾಗಿಡಬೇಕು. ಬಲಗೈಯಿಂದ ಕೊಟ್ಟರೆ ಎಡಗೈಗೆ ತಿಳಿಯಬಾರದು ಎಂಬ ಮಾತಿದೆ. ಅದೇ ರೀತಿ ನಿಮ್ಮ ದಾನದ ಬಗ್ಗೆ ನಿಮ್ಮ ಹೆಂಡತಿಗೂ ಹೇಳಬಾರದು. (ಏಜೆನ್ಸೀಸ್​)