ಆಂಧ್ರಪ್ರದೇಶ: ಪತಿ-ಪತ್ನಿಯರ ಬಾಂಧವ್ಯ ಎಂದರೆ ಎರಡು ದೇಹ ಒಂದೇ ಜೀವ. ಪ್ರೀತಿ ಮತ್ತು ವಾತ್ಸಲ್ಯದಿಂದ ಕೂಡಿದ ಸಂಬಂಧವನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಶ್ರೀಕಾಕುಳಂ ಜಿಲ್ಲೆಯ ಆ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
ರೇಯಿ ಉಗಡಮ್ಮ (77) ವರ್ಷದ ಮಹಿಳೆ ಶುಕ್ರವಾರ ಸಂಜೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಪತ್ನಿಯ ಸಾವನ್ನು ಅರಗಿಸಿಕೊಳ್ಳಲಾಗದೆ ಆಕೆಯ 82 ವರ್ಷದ ಪತಿ ರೇಯಿ ಕಾಮೇಶ್ವರ ರಾವ್ ಹಠಾತ್ತನೆ ಕುಸಿದು ಬಿದ್ದಿದ್ದಾರೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶ್ರೀಕಾಕುಳಂ ಜಿಲ್ಲೆಯ ವಜ್ರಪು ಕೊತ್ತೂರು ಮಂಡಲದ ಪಲ್ಲೆಸರಡಿ ಎಂಬ ಗ್ರಾಮದ ನಿವಾಸಿಯಾಗಿದ್ದಾರೆ.
ಕಾಮೇಶ್ವರ ರಾವ್ ಅವರು ಉಗಡಮ್ಮ ನಿಧನರಾದ ಕೆಲವೇ ನಿಮಿಷಗಳಲ್ಲಿ ಪತ್ನಿಯ ಸಾವಿನ ಸೋವಿನ ಸಾವನ್ನು ಸಹಿಸಲಾಗದೆ ಕಣ್ಣೀರಿಡುತ್ತಾ ಕೊನೆಯುಸಿರೆಳೆದರು.
ಉಗಡಮ್ಮ ಮತ್ತು ಕಾಮೇಶ್ವರ ರಾವ್ ತುಂಬಾ ಆತ್ಮೀಯ ದಂಪತಿ. ಉಗಡಮ್ಮ ಮತ್ತು ಕಾಮೇಶ್ವರ ರಾವ್ ಅವರ ಸಾವು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಶನಿವಾರ ಬೆಳಗ್ಗೆ ಗ್ರಾಮದ ರುದ್ರಭೂಮಿಯಲ್ಲಿ ದಂಪತಿಯ ಅಂತ್ಯಕ್ರಿಯೆ ನಡೆಸಲಾಯಿತು. ದಂಪತಿಯ ಅಂತ್ಯಕ್ರಿಯೆಯಲ್ಲಿ ಗ್ರಾಮಸ್ಥರೆಲ್ಲರೂ ಭಾಗವಹಿಸಿ ನಮನ ಸಲ್ಲಿಸಿದರು.