UP Woman: ಗಂಡ ನೀನ್ಯಾಕೆ ಸಾಯಬಾರದು ಎಂದು ಕೇಳಿದ್ದಕ್ಕೆ ನಾಲ್ಕು ತಿಂಗಳ ಹಿಂದೆ ವಿವಾಹವಾದ 23 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದು, ಈ ಕೃತ್ಯವನ್ನು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ.
ಅಮ್ರೀನ್ ಜಹಾನ್ ಸುಮಾರು ನಾಲ್ಕು ತಿಂಗಳ ಹಿಂದೆ ಲವ್ ಮ್ಯಾರೇಜ್ ಆಗಿದ್ದರು. ಅವರ ಪತಿ ಬೆಂಗಳೂರಿನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಮ್ರೀನ್ ತನ್ನ ಕುಟುಂಬದೊಂದಿಗೆ ಮೊರಾದಾಬಾದ್‌ನಲ್ಲಿ ವಾಸಿಸುತ್ತಿದ್ದರು.
ಸಾಯುವ ಮುನ್ನ ರೆಕಾರ್ಡ್ ಮಾಡಿದ ವಿಡಿಯೋದಲ್ಲಿ, ನನ್ನ ಪತಿಯಿಂದ ನಾನು ತುಂಬಾ ನೊಂದಿದ್ದೆ ಎಂದು ಹೇಳಿಕೊಂಡಿದ್ದಾಳೆ. ಗರ್ಭಪಾತವಾದ ನಂತರ ತನ್ನ ಅತ್ತೆ-ಮಾವ ಕಿರುಕುಳ ನೀಡುತ್ತಿದ್ದರು ಎಂದು ಆಕೆ ಆರೋಪಿಸಿದ್ದಾರೆ.
ಕೆಲವೊಮ್ಮೆ ನಾನು ಮಾಡುವ ಪ್ರತಿ ಕೆಲಸದಲ್ಲೂ ತಪ್ಪು ಹುಡುಕುತ್ತಾರೆ, ನಾನು ಮಲಗುವ ಕೋಣೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸುತ್ತಾರೆ. ನನ್ನ ಅತ್ತಿಗೆ ಖತೀಜಾ, ನನ್ನ ಮಾವ ಶಾಹಿದ್ ನನ್ನ ಸಾವಿಗೆ ಕಾರಣ. ನನ್ನ ಗಂಡ ಕೂಡ ಅವನು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಎಲ್ಲವೂ ನನ್ನ ತಪ್ಪು ಎಂದು ಅವನು ಭಾವಿಸುತ್ತಾನೆ ಎಂದು ಹೇಳಿದ್ದಾಳೆ.
"ನನ್ನ ಗಂಡ ನನ್ನನ್ನು 'ನೀನು ಯಾಕೆ ಸಾಯಬಾರದು?' ಎಂದು ಕೇಳುತ್ತಾನೆ. ನನ್ನ ಅತ್ತಿಗೆ ಮತ್ತು ಮಾವ ಕೂಡ ಅದೇ ಮಾತನ್ನು ಹೇಳುತ್ತಾರೆ" ಎಂದು ನೊಂದು ನುಡಿದಿದ್ದಾಳೆ.
ತಾನು ಅಸ್ವಸ್ಥಳಾಗಿದ್ದಾಗ ಚಿಕಿತ್ಸೆಗೆ ಹಣ ನೀಡುವ ಮೂಲಕ ತಪ್ಪು ಮಾಡಿದ್ದೇವೆ ಎಂದು ತನ್ನ ಅತ್ತೆ-ಮಾವ ಹೇಳಿದ್ದರು. ಅವರು ಖರ್ಚು ಮಾಡಿದ ಹಣವನ್ನು ಹಿಂದಿರುಗಿಸಲು ನನ್ನನ್ನು ಕೇಳಿದ್ದರು.ಆದರೆ ನನ್ನ ಬಳಿಯಾಗಲಿ ಗಂಡನ ಬಳಿಯಾಗಲೀ ಅಷ್ಟು ಹಣವಿಲ್ಲ, ಇದ್ದಿದ್ದರೆ ನಿಮ್ಮ ಬಳಿ ಏಕೆ ಕೇಳುತ್ತಿದ್ದೆ ಎಂದು ಮಹಿಳೆ ಉತ್ತರ ಕೊಟ್ಟಿದ್ದಾಗಿ ಬರೆದಿದ್ದಾಳೆ.
ಪೊಲೀಸರು ಅಮ್ರೀನ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆಕೆಯ ತಂದೆ ಸಲೀಂ ಪೊಲೀಸ್ ದೂರು ದಾಖಲಿಸಿದ್ದಾರೆ. ಸಲೀಂ ಅವರ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)