ನ್ಯೂಸ್

ಮತದಾನ ನಂತರ ಬೆರಳಿಗೆ ಹಾಕಿದ ಶಾಯಿ ಬೇಗ ಹೋಗುವುದಿಲ್ಲ ಏಕೆ?: ಇದರಲ್ಲಿ ಯಾವ ರಾಸಾಯನಿಕ ಬಳಸಲಾಗುತ್ತದೆ ಗೊತ್ತಾ? | Ink

ink:ಚುನಾವಣೆಯ ಸಂದರ್ಭದಲ್ಲಿ ಮತದಾನದ ವೇಳೆ ಮತದಾನದಾತರ ಬೆರಳಿಗೆ ಶಾಯಿಯೊಂದನ್ನು(ಇಂಕ್​) ಹಚ್ಚುತ್ತಾರೆ. ಇದರ ಅರ್ಥವೇನು?, ಇದು ಏಕೆ ಬೇಗ ಹೋಗುವುದಿಲ್ಲ, ಇದರಲ್ಲಿ ಬಳಸುವ ರಾಸಾಯನಿಕ ಅಂಶ ಯಾವುದು ಎಂಬುವುದನ್ನು ತಿಳಿಯೋಣ ಬನ್ನಿ...

ಚುನಾವಣೆಯ ವೇಳೆ ಶಾಯಿಯನ್ನು ಏಕೆ ಬಳಸುತ್ತಾರೆ?

ಚುನಾವಣೆಯ ಸಂದರ್ಭದಲ್ಲಿ ಶಾಯಿಯನ್ನು(ಇಂಕ್) ಬಳಸಲು ಮುಖ್ಯ ಕಾರಣ ಮತದಾರನ ಮತದಾನ ಧೃಢಿಕರಿಸುವ ಬಗ್ಗೆ, ಜೊತೆಗೆ ಶಾಯಿ ಬೇಗ ಅಳಿಸದ ಕಾರಣ ಎರಡು ಬಾರಿ ಮತ ಹಾಕದಂತೆ ತಡೆಯುವ ಮೂಲ ಉದ್ದೇಶ ಹೊಂದಿದೆ. ಇನ್ನು ಚುನಾವಣಾ ಆಯೋಗವು ಇದನ್ನು ಅಳಿಸಲಾಗದ ಶಾಯಿ ಎಂದು ಕರೆಯುತ್ತಾರೆ. ಕಾರಣದಲ್ಲಿ ರಾಸಾಯನಿಕ ಅಂಶವೊಂದನ್ನು ಮಿಕ್ಸ್​ ಮಾಡಿರುತ್ತಾರೆ ಎಂದು ನಿಮಗೆ ತಿಳಿದಿದೆಯೇ!. ಇಲ್ಲಿದೆ ಮಾಹಿತಿ.

ಸಿಲ್ವರ್​ ನೈಟ್ರೈಟ್​ ರಾಸಾಯನಿಕ

ಹೌದು ಇದರಲ್ಲಿ ಸಿಲ್ವರ್​ ನೈಟ್ರೈಟ್​ ಎಂಬ ರಾಸಾಯನಿಕ ಬಳಸುತ್ತಾರೆ. ಇದೇ ಕಾರಣಕ್ಕೆ ಇದು ಬೇಗ ಮರೆಯಾಗುವದಿಲ್ಲ. ನೀರಿನ ಸಂಪರ್ಕಕ್ಕೆ ಬಂದ ನಂತರ ಸಿಲ್ವರ್​ ನೈಟ್ರೈಟ್​ ರಾಸಾಯನಿಕ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಬೇಗ ಮಸುಕು ಆಗುವುದಿಲ್ಲ ಎಂಬ ಕಾರಣಕ್ಕೆ ಇದನ್ನು ಚುನಾವಣೆಯಲ್ಲಿ ಶಾಯಿಯಾಗಿ ಬಳಸುತ್ತಾರೆ. ಇನ್ನು ಚುನಾವಣಾಧಿಕಾರಿ ನಮ್ಮ ಬೆರಳಿಗೆ ಶಾಯಿಯನ್ನು ಹಚ್ಚಿದಾಗ ಸಿಲ್ವರ್​ ನೈಟ್ರೈಟ್​ ರಾಸಾಯನಿಕ ನಮ್ಮ ದೇಹದಲ್ಲಿರುವ ಉಪ್ಪಿನೊಂದಿಗೆ ಸೇರಿಕೊಂಡು ಕಪ್ಪು ಬಣ್ಣದ ಸಿಲ್ವರ್​ ಕ್ಲೋರೈಡ್​ ಅನ್ನು ರೂಪಿಸುತ್ತದೆ. ಇದು ನೀರಿನಲ್ಲಿ ಕರಗುವುದಿಲ್ಲ. ಚರ್ಮಕ್ಕೆ ನೇರವಾಗಿ ಅಂಟಿಕೊಳ್ಳುತ್ತದೆ. ಈ ಶಾಯಿ ಎಷ್ಟು ಪ್ರಬಲ ಎಂದರೆ ಹಚ್ಚಿನ ತಕ್ಷಣ ತನ್ನ ಗಾಢವಾದ ಬಣ್ಣ ಬಿಟ್ಟು, 40 ಸೆಕೆಂಡ್​ಗಳಲ್ಲಿ ಒಣಗುತ್ತದೆ.

ವಿದೇಶಿಗಳಿಗೆ ಭಾರತ ಸರಬರಾಜು

ಈ ಸಿಲ್ವರ್​ ನೈಟ್ರೈಟ್​ ಎಂಬ ರಾಸಾಯನಿಕ ಹೊಂದಿರುವ ಶಾಯಿಯನ್ನು ನಮ್ಮ ದೇಶದಿಂದ 30ಕ್ಕೂ ಅಧಿಕ ವಿದೇಶಗಳಿಗೆ ರಪ್ತು ಮಾಡಲಾಗುತ್ತದೆ. ಸರ್ಕಾರಿ ಮಾಹಿತಿ ಪ್ರಕಾರ, ಮೈಸೂರು ಪೆಂಟ್ಸ್​ ಮತ್ತು ವಾರ್ನಿಸ್​ ಲಿಮಿಟೆಡ್​ ಕಂಪನಿಯೂ ತಯಾರು ಮಾಡುತ್ತಿದ್ದು, ವಿದೇಶಗಳಿಗೆ ಪೂರೈಕೆ ಮಾಡುತ್ತಿದೆ. (ಏಜೆನ್ಸೀಸ್​)