ಬ್ಯುಸಿಯಾಗಿದ್ದರೂ ಸಂಗಾತಿಗೆ ಸಮಯ ನೀಡುವುದು ಹೇಗೆ? 
ನ್ಯೂಸ್

ಪ್ರೀತಿಸುವ ಹುಡುಗಿ ‘ನನಗೆ ಸಮಯ ಕೊಡ್ತಿಲ್ಲ’ ಅಂತ ದೂರುವುದೇಕೆ? ಇದರ ಹಿಂದೆ ಇದೆ ಅಚ್ಚರಿಯ ಕಾರಣ! | Girlfriend Time

ಪ್ರೀತಿಸುವ ಹುಡುಗಿ ‘ನನಗೆ ಸಮಯ ಕೊಡ್ತಿಲ್ಲ’ ಎಂದು ದೂರುವುದೇಕೆ? ಭಾವನಾತ್ಮಕ ಬಾಂಧವ್ಯ, ಗಮನ, ಆಕ್ಸಿಟೋಸಿನ್ ಸೇರಿದಂತೆ ಕಾರಣಗಳೇನು? ಸಂಬಂಧ ಸುಧಾರಿಸಲು ಏನು ಮಾಡಬೇಕು?

▪️ ‘ನನಗೆ ಸಮಯ ಕೊಡ್ತಿಲ್ಲ’ ಅನ್ನೋ ದೂರು ಯಾಕೆ ಬರುತ್ತೆ?

▪️ ಭಾವನಾತ್ಮಕ ಸಂಪರ್ಕ ಸಂಬಂಧದಲ್ಲಿ ಯಾಕೆ ಮುಖ್ಯ?

▪️ ಆಕ್ಸಿಟೋಸಿನ್‌ಗೂ ಬಾಂಧವ್ಯಕ್ಕೂ ಇರುವ ಸಂಬಂಧವೇನು?

Love Relationship: ಪ್ರೀತಿಯ ಸಂಬಂಧದಲ್ಲಿ ‘ನೀನು ನನಗೆ ಸಮಯ ಕೊಡ್ತಿಲ್ಲ’ ಅನ್ನೋ ದೂರು ಆಗಾಗ್ಗೆ ಕೇಳಿಬರೋದು ಸಾಮಾನ್ಯ. ಇದನ್ನು ಬರೀ ಮುನಿಸು ಅಥವಾ ಜಗಳ ಅಂತ ನೋಡಬೇಕಿಲ್ಲ. ಸಂಗಾತಿಯಿಂದ ಗಮನ, ಪ್ರೀತಿ, ಭಾವನಾತ್ಮಕ ಬೆಂಬಲ ಮತ್ತು ಭದ್ರತೆಯ ಭಾವನೆ ಸಿಗಬೇಕು ಅನ್ನೋ ಮನೋವೈಜ್ಞಾನಿಕ ಅಗತ್ಯವೂ ಇದಕ್ಕೆ ಕಾರಣವಾಗಿರಬಹುದು.

ಸಂಗಾತಿಯೊಂದಿಗೆ ಮಾತನಾಡೋದು, ದಿನದ ವಿಚಾರಗಳನ್ನು ಹಂಚಿಕೊಳ್ಳೋದು, ಜೊತೆಯಾಗಿ ಸ್ವಲ್ಪ ಸಮಯ ಕಳೆಯೋದು ಸಂಬಂಧದ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತೆ. ಸಂಗಾತಿ ಯಾವಾಗಲೂ ಬ್ಯುಸಿಯಾಗಿದ್ದು, ಮಾತಾಡೋಕೆ ಸಮಯ ಕೊಡದಿದ್ದಾಗ, ಕೆಲವೊಮ್ಮೆ ‘ನನ್ನನ್ನು ನಿರ್ಲಕ್ಷ್ಯ ಮಾಡ್ತಿದ್ದಾರಾ?’ ಅನ್ನೋ ಭಾವನೆ ಮೂಡಬಹುದು.

ಆಕ್ಸಿಟೋಸಿನ್‌ ಪಾತ್ರವೂ ಇದೆ

ಆಕ್ಸಿಟೋಸಿನ್‌ ಅನ್ನು ಸಾಮಾನ್ಯವಾಗಿ ‘ಬಾಂಧವ್ಯದ ಹಾರ್ಮೋನ್’ ಅಂತ ಕರೆಯಲಾಗುತ್ತೆ. ಪ್ರೀತಿ, ನಂಬಿಕೆ, ಸ್ಪರ್ಶ ಮತ್ತು ಸಾಮಾಜಿಕ ಸಂಪರ್ಕದ ವೇಳೆ ಈ ಹಾರ್ಮೋನ್‌ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಮಹಿಳೆಯರು ಆಕ್ಸಿಟೋಸಿನ್‌ ಕಾರಣಕ್ಕೇ ಹೆಚ್ಚು ಸಮಯ ಬಯಸುತ್ತಾರೆ ಅನ್ನೋದು ಸರಳೀಕೃತ ವಿವರಣೆ. ಸಂಗಾತಿಯಿಂದ ಸಮಯ, ಗಮನ ಮತ್ತು ಭಾವನಾತ್ಮಕ ಸಂಪರ್ಕ ಬಯಸೋದು ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿರಬಹುದು.

ಕ್ವಾಲಿಟಿ ಟೈಮ್ ಮತ್ತು ಸಣ್ಣ ಮೆಸೇಜ್‌ಗಳ ಮಹತ್ವವೇನು?

ಗಮನ ಮತ್ತು ಭರವಸೆಯೂ ಮುಖ್ಯ

ಸಂಗಾತಿಯ ಗಮನ ಮತ್ತು ಕಾಳಜಿ ಸಂಬಂಧದಲ್ಲಿ ನಂಬಿಕೆ ಮೂಡಿಸುತ್ತೆ. ಸಮಯ ಸಿಗದೇ ಹೋದಾಗ, ‘ನನ್ನ ಮೇಲೆ ಆಸಕ್ತಿ ಕಡಿಮೆಯಾಗ್ತಿದೆಯಾ?’ ಅನ್ನೋ ಅನುಮಾನ ಬರಬಹುದು. ಹೀಗಾಗಿ ಎಷ್ಟು ಸಮಯ ಕೊಡ್ತಾರೆ ಅನ್ನೋದಕ್ಕಿಂತ, ಕೊಡುವ ಸಮಯದಲ್ಲಿ ತೋರಿಸುವ ಕಾಳಜಿ ಮತ್ತು ಭಾವನಾತ್ಮಕ ಸಂಪರ್ಕ ಮುಖ್ಯ.

ಸಮಸ್ಯೆ ಬಗೆಹರಿಸಲು ಏನು ಮಾಡಬೇಕು?

ಕ್ವಾಲಿಟಿ ಟೈಮ್ ಕೊಡಿ.. ದಿನವಿಡೀ ಚಾಟ್ ಮಾಡುವುದು ಅಗತ್ಯವಿಲ್ಲ. ಪ್ರತಿದಿನ 15–20 ನಿಮಿಷವಾದರೂ ಮೊಬೈಲ್ ಬದಿಗಿಟ್ಟು, ಪರಸ್ಪರ ಗಮನ ಕೊಟ್ಟು ಮಾತನಾಡುವುದು ಉತ್ತಮ.

ಬ್ಯುಸಿಯಾಗಿದ್ದರೆ ಮೊದಲೇ ತಿಳಿಸಿ

ಕೆಲಸದ ಒತ್ತಡವಿದ್ದರೆ, ‘ಇವತ್ತು ಕೆಲಸ ಜಾಸ್ತಿ ಇದೆ, ಫ್ರೀ ಆದ್ಮೇಲೆ ಕಾಲ್ ಮಾಡ್ತೀನಿ’ ಎಂದು ಹೇಳಿ. ಇದರಿಂದ ಅನಗತ್ಯ ನಿರೀಕ್ಷೆ ಮತ್ತು ಗೊಂದಲ ಕಡಿಮೆಯಾಗಬಹುದು. ಸಣ್ಣ ಮೆಸೇಜ್‌ಗಳಿಗೂ ಮಹತ್ವವಿದೆ: ಕೆಲಸದ ನಡುವೆಯೂ ‘ಊಟ ಆಯ್ತಾ?’, ‘ಹೇಗಿದ್ದೀಯ?’ ಎಂಬ ಸಣ್ಣ ಮೆಸೇಜ್‌ಗಳು ಕಾಳಜಿಯನ್ನು ತೋರಿಸಬಹುದು.

ಸಂಗಾತಿಯೊಂದಿಗೆ ಸಮಯ ಕಳೆಯುತ್ತಿರುವ ಜೋಡಿ

ಮಾತನ್ನು ಕೇಳಿ, ಅರ್ಥ ಮಾಡಿಕೊಳ್ಳಿ

ಸಂಗಾತಿ ದೂರು ಹೇಳುವಾಗ ತಕ್ಷಣ ವಾದ ಮಾಡುವ ಬದಲು, ಅವರ ಭಾವನೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಸಣ್ಣ ವಿಚಾರಗಳಿಗೂ ಗಮನ ಕೊಡುವುದು ಸಂಬಂಧದಲ್ಲಿ ನಂಬಿಕೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ‘ಸಮುದ್ರ ಅಬ್ಬರಿಸುತ್ತಿದ್ದಾಗ ಈಜೋದು ನನಗೆ ತುಂಬಾ ಇಷ್ಟ’! ರಾಹುಲ್ ಗಾಂಧಿ ಮಾರ್ಮಿಕ ಪೋಸ್ಟ್ | Rahul latest post

ಕೊನೆಗೆ, ಆರೋಗ್ಯಕರ ಸಂಬಂಧಕ್ಕೆ 24 ಗಂಟೆಯೂ ಜೊತೆಯಲ್ಲೇ ಇರಬೇಕೆಂದಿಲ್ಲ. ಪರಸ್ಪರ ಸಮಯ ಕೊಡುವುದು, ಗಮನ ಹರಿಸುವುದು, ನಂಬಿಕೆ ಇಡುವುದು ಮತ್ತು ಮುಕ್ತವಾಗಿ ಮಾತನಾಡುವುದು ಮುಖ್ಯ.