ಮುಂಬೈ: ನಿರ್ಮಾಣ ಕಂಪನಿ KNR ಕನ್ಸ್ಟ್ರಕ್ಷನ್ ಷೇರು ಬೆಲೆಗಳು ಗುರುವಾರ 20% ರಷ್ಟು ಏರಿಕೆಯಾಗಿದ್ದು, ಅಪ್ಪರ್ ಸರ್ಕ್ಯೂಟ್ ಹಿಟ್ ಆಗಿದೆ. ಈ ಏರಿಕೆಯ ನಂತರ ಕಂಪನಿಯ ಷೇರುಗಳ ಬೆಲೆ 407.30 ರೂ. ಮುಟ್ಟಿದೆ. ಇದು 52 ವಾರಗಳ ಗರಿಷ್ಠ ಬೆಲೆಯಾಗಿದೆ. ಕಳೆದ 2 ವಹಿವಾಟಿನ ದಿನಗಳಲ್ಲಿ ಈ ಕಂಪನಿಯ ಷೇರು ಬೆಲೆಗಳು ಶೇ. 35ರಷ್ಟು ಏರಿಕೆ ಕಂಡಿವೆ. 3 ವಾರಗಳಲ್ಲಿ 58 ಪ್ರತಿಶತಕ್ಕಿಂತ ಹೆಚ್ಚು ಏರಿಕೆಯಾಗಿದೆ.
ಪ್ರಸ್ತುತ ಕೇಂದ್ರ ಸರ್ಕಾರ ರಸ್ತೆ ನಿರ್ಮಾಣ ಇತ್ಯಾದಿಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಪಿಎಂ ಗತಿ ಶಕ್ತಿ, ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್, ಸ್ಮಾರ್ಟ್ ಸಿಟಿ ಮಿಷನ್ಗೆ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಕೆಎನ್ಆರ್ ಕನ್ಸ್ಟ್ರಕ್ಷನ್ ಮೂಲಸೌಕರ್ಯ ಕ್ಷೇತ್ರದಲ್ಲಿ ಪ್ರಮುಖ ಕಂಪನಿಯಾಗಿದೆ. ಕಂಪನಿಯು ನೀರಾವರಿ, ಮೇಲ್ಸೇತುವೆಗಳು, ಹೆದ್ದಾರಿಗಳು ಇತ್ಯಾದಿಗಳ ನಿರ್ಮಾಣಕ್ಕಾಗಿ ತನ್ನ ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಬಿಹಾರದಲ್ಲಿ ವಿವಿಧ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪ್ರಸ್ತುತ ಸರ್ಕಾರವು ಈ ವರ್ಷ ಮಂಡಿಸಿದ ಬಜೆಟ್‌ನಲ್ಲಿ ರಸ್ತೆ ಬಂಡವಾಳವನ್ನು 11 ಪ್ರತಿಶತದಷ್ಟು ಹೆಚ್ಚಿಸಿದೆ. ಇದು ಕೆಎನ್ಆರ್ ಕನ್‌ಸ್ಟ್ರಕ್ಷನ್‌ನಂತಹ ಕಂಪನಿಗಳಿಗೆ ಅನೇಕ ದೊಡ್ಡ ಅವಕಾಶಗಳನ್ನು ತಂದಿದೆ. ಇತ್ತೀಚೆಗೆ ಕಂಪನಿಗೆ 1200 ಕೋಟಿ ರೂ.ಗಳ ಕಾಮಗಾರಿ ದೊರೆತಿತ್ತು. ಪ್ರಸ್ತುತ ಕಂಪನಿ ಬಳಿ 6505 ಕೋಟಿ ರೂಪಾಯಿಯ ಕಾಮಗಾರಿಗಳಿವೆ.