ನ್ಯೂಸ್

ನನ್ನ ಜೀವನ... ದಿಕ್ಕು ತೋಚದ ಪರಿಸ್ಥಿತಿ! Pawan Kalyan ಎದುರು​ ಗುರು ಸತ್ಯಾನಂದ್ ಹೀಗೇಳಿದ್ಯಾಕೆ?

Pawan Kalyan: ತೆಲುಗು ನಟ ಪವರ್​ಸ್ಟಾರ್ ಕಮ್​​ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ​ಪವನ್​​ ಕಲ್ಯಾಣ್​ ಬಗ್ಗೆ ಯಾರಿಗೆ ತಿಳಿಯದು. ಸಿನಿಮಾ ರಂಗದಿಂದ ಏಕಾಏಕಿ ರಾಜಕಾರಣ ಪ್ರವೇಶಿಸಿ ಇಂದು ರಾಜ್ಯದ ಡಿಸಿಎಂ ಆಗುವ ಮೂಲಕ ಇಡೀ ದೇಶವನ್ನು ತಮ್ಮ ಕಡೆ ನೋಡುವಂತೆ ಮಾಡಿದ ನಟ ಈತ. ಡಿಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಪವನ್​ ಕಲ್ಯಾಣ್​ ಅವರ ನಟನೆಯ 'ಹರಿಹರ ವೀರಮಲ್ಲು' ಚಿತ್ರ ಬಿಡುಗಡೆಗೊಳ್ಳಲು ಸಿದ್ಧವಾಗಿದೆ.

ಈ ವಾರ ಹರಿಹರ ವೀರಮಲ್ಲು ವಿಶ್ವದ್ಯಾಂತ ತೆರೆಗೆ ಬರ್ತಿದೆ. ಗುರುವಾರ(ಜು.24) ಸಿನಿಮಾ ಬಿಡುಗಡೆಯಾಗಲಿದ್ದು, ಇದಾಗಲೇ ಪ್ರಿಮಿಯರ್​ ಶೋಗಳು ಆರಂಭವಾಗಿವೆ. ಅದಾಗ್ಯೂ, ಈ ಸಿನಿಮಾ ಪ್ರೀ ಇವೆಂಟ್​ ಆಂಧ್ರದ ವಿಶಾಖಪಟ್ಟಣದಲ್ಲಿ ನಡೆಯಿತು. ರಾಜಕೀಯ ಚಟುವಟಿಕಗಳನ್ನು ಬದಿಗೊತ್ತಿ ಪವನ್​​ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ಇವೆಂಟ್​ಗೆ ರಾಜಕಾರಣಿಗಳು ಸೇರಿ ಪವನ್​ ಬೆಳವಣಿಗೆಗೆ ಕಾರಣವಾದ ಪ್ರಮುಖರಲ್ಲಿ ಅವರ ಗುರು ಸತ್ಯಾನಂದ್​ ಕೂಡ ಭಾಗವಹಿಸಿದ್ದರು.

ಪ್ರೀ ಇವೆಂಟ್​​ ವೇದಿಕೆ ಕಾರ್ಯಕ್ರಮ ಹಂಚಿಕೊಂಡ ಸತ್ಯಾನಂದ್​ ಕೆಲ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡರು. ಅದರಲ್ಲಿ ಪವನ್​​ ಮತ್ತು ನಟ ಚಿರಂಜೀವಿ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಹೇಳಿದ ಮಾತುಗಳು ಇದೀಗ ವೈರಲ್​ ಆಗಿವೆ.

ಸತ್ಯಾನಂದ್​​ ಹೇಳಿದ್ದೇನು..?

1992ರಲ್ಲಿ ನಟ ಚಿರಂಜೀವಿ ನನಗೆ ಕರೆ ಮಾಡಿದರು. ಎಲ್ಲಿದ್ದರೂ ಆದಷ್ಟು ಬೇಗೆ ಚೆನ್ನೈಗೆ ಬರಲು ಹೇಳಿದ್ರು. ನಾನು ಚೆನ್ನೈಗೆ ತೆರಳಿದ ತಕ್ಷಣ, ಚಿರಂಜೀವಿ ಅವರು ತಮ್ಮನ (ಪವನ್ ಕಲ್ಯಾಣ್​) ಕೈ ಹಿಡಿದು ಹೀಗೆ ಹೇಳಿದರು.. ಸತ್ಯ ಅವರೇ.. ನನ್ನ ತಮ್ಮ ಪವನ್​​ನನ್ನು ನಿಮ್ಮ ಕೈಯಲ್ಲಿಡುತ್ತಿದ್ದೇನೆ. ಅವನನ್ನು ಒಬ್ಬ ನಟನ್ನಾಗಿ ಮಾಡಿ. ಈ ಜವಾಬ್ದಾರಿ ನಿಮ್ಮದು ಎಂದರು. ಇದು ನನ್ನ ಜೀವನದ ದೊಡ್ಡ ತಿರುವು. ಅಲ್ಲಿಯವರೆಗೂ ನಾನು ಸಣ್ಣ ನಾಟಕಗಳನ್ನು ಮಾಡುತ್ತಿದ್ದೆ. ನನ್ನ ಜೀವನ ದಿಕ್ಕು ತೋಚದ ಸ್ಥಿತಿಯಲ್ಲಿತ್ತು ಎಂದು ಸತ್ಯಾನಂದ್​ ಹೇಳಿದರು.

ಆ ಸಮಯದಲ್ಲಿ, ಚಿರಂಜೀವಿ ಒಂದು ನಿರ್ಧಾರ ತೆಗೆದುಕೊಂಡು ಪವನ್ ಕಲ್ಯಾಣ್ ಅವರನ್ನು ನನ್ನ ಕೈಯಲ್ಲಿ ವಜ್ರವನ್ನಾಗಿ ಇಟ್ಟರು. ಆ ದಿನದಿಂದ ಇಂದಿನವರೆಗೆ ನಾನು ಹಿಂತಿರುಗಿ ನೋಡಬೇಕಾಗಿಲ್ಲ. ನಾನು ಇನ್ನೂ ನೂರಾರು ಜನರಿಗೆ ನಟನೆಯಲ್ಲಿ ತರಬೇತಿ ನೀಡುತ್ತಿದ್ದೇನೆ ಎಂದು ಸತ್ಯಾನಂದ್ ಹೇಳಿದರು. ಅವರ ಮೊದಲ ಶಿಷ್ಯ ಪವನ್ ಕಲ್ಯಾಣ್ ಎಂದು ಅವರು ಹೇಳಿದರು.(ಏಜೆನ್ಸೀಸ್​)