ನ್ಯೂಸ್

ನೀವು ಯಾಕೆ ಮೌನವಾಗಿದ್ದೀರಿ?: ರಾಹುಲ್ ಗಾಂಧಿಯ ಎಚ್-ಫೈಲ್ಸ್ ಮತ ಕಳ್ಳತನ ಆರೋಪವನ್ನು ಬೆಂಬಲಿಸಿ, ದೇಶದ ನಾಗರಿಕರಿಗೆ ಪ್ರಿಯಾಂಕಾ ಗಾಂಧಿ ಮನವಿ | Priyanka Gandhi

ಪಾಟ್ನಾ: ಹರಿಯಾಣದಲ್ಲಿ ಚುನಾವಣೆಯಲ್ಲಿ ಬಿಜೆಪಿ ಮತ ಕಳ್ಳತನ ಮಾಡಿದೆ ಎಂಬ ತಮ್ಮ ಸಹೋದರ ರಾಹುಲ್ ಗಾಂಧಿಯ ಆರೋಪಗಳಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi) ಬುಧವಾರ (ನ.5) ದೃಢ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾಗರಿಕರು ತಮ್ಮ ಶಕ್ತಿಯನ್ನು ಗುರುತಿಸಿ ಆಡಳಿತಾರೂಢ ಎನ್‌ಡಿಎ ಸರ್ಕಾರವನ್ನು ತೆಗೆದುಹಾಕಬೇಕೆಂದು ಎಂದು ಒತ್ತಾಯಿಸಿದ್ದಾರೆ.

ಪಶ್ಚಿಮ ಚಂಪಾರಣ್‌ನ ವಾಲ್ಮೀಕಿ ನಗರದಲ್ಲಿ ನಡೆದ ಸಾರ್ವಜನಿಕ ಱಲಿಯಲ್ಲಿ ಮಾತನಾಡಿದ ವಾದ್ರಾ, ಎನ್‌ಡಿಎ ಎಲ್ಲವನ್ನೂ ನಾಶಮಾಡುತ್ತಿದೆ. ದೇಶದಲ್ಲಿ ಚುನಾವಣಾ ಕುಶಲತೆಯ ವಿರುದ್ಧ ಸಾಮೂಹಿಕ ಕ್ರಮಕ್ಕೆ ಕರೆ ನೀಡಿದ್ದಾರೆ.

ಇಂದು ನನ್ನ ಸಹೋದರ ರಾಹುಲ್ ಗಾಂಧಿ ಎಲ್ಲರ ಮುಂದೆ ಮತ ಕಳ್ಳತನವನ್ನು ಹೊರಹಾಕುತ್ತಿದ್ದಾರೆ. ಹರಿಯಾಣದಲ್ಲಿ ಚುನಾವಣೆಯಲ್ಲಿ ನಡೆದ ಎಲ್ಲ ಅಕ್ರಮ ಮಾಡಿದ್ದಾರೆ ಎಂದು ಸಾರ್ವಜನಿಕರಿಗೆ ತೋರಿಸುತ್ತಿದ್ದಾರೆ. ಇಡೀ ಚುನಾವಣೆಯಲ್ಲಿ ಮತ ಹೇಗೆ ಕದ್ದಿದ್ದಾರೆ. ಇದನ್ನು ಇಡೀ ರಾಷ್ಟ್ರ ನೋಡಬೇಕು. ಆದರೆ ನನಗೆ ರಾಷ್ಟ್ರಕ್ಕೆ ಒಂದು ದೂರು ಇದೆ, ದೇಶ ಏಕೆ ಮೌನವಾಗಿದೆ? ನೀವು ಏಕೆ ಮೌನವಾಗಿದ್ದೀರಿ? ನಿಮ್ಮ ಶಕ್ತಿಯನ್ನು ನೀವು ಏಕೆ ಗುರುತಿಸುವುದಿಲ್ಲ - ಕೇಂದ್ರ ಸರ್ಕಾರವನ್ನು ಬದಲಾಯಿಸಿ, ಇವರ ಸರ್ಕಾರವನ್ನು ಹೊರಗೆಳೆದು ಹೊಸ ಸರ್ಕಾರ ಮಾಡಿ ಎಂದು ಪ್ರಿಯಾಂಕಾ ಕರೆ ದೇಶದ ನಾಗರಿಕರಿಗೆ ಕರೆ ನೀಡಿದ್ದಾರೆ.

ಅಲ್ಲದೆ, 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜನಾದೇಶವನ್ನು ಕದ್ದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಆರೋಪಿಸಿದ ಒಂದು ದಿನದ ನಂತರ ಈ ಹೇಳಿಕೆಗಳು ಬಂದಿವೆ. ಕಾಂಗ್ರೆಸ್‌ನ ಗೆಲುವನ್ನು ಉದ್ದೇಶಪೂರ್ವಕ ಬಿಜೆಪಿಯ ಗೆಲುವಾಗಿ ಪರಿವರ್ತಿಸಲಾಗಿದೆ ಎಂದು ರಾಹುಲ್​ ಹೇಳಿದ್ದರು.

ರಾಹುಲ್ ಎಚ್-ಫೈಲ್ಸ್ ಬಿಡುಗಡೆ

ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಎಚ್-ಫೈಲ್ಸ್ ಎಂದು ಕರೆದಿದ್ದಾರೆ. ಇದು ಮತ ಎಣಿಕೆಯ ಸಮಯದಲ್ಲಿ ವ್ಯಾಪಕ ಅಕ್ರಮಗಳ ಪುರಾವೆಗಳನ್ನು ಹೊಂದಿದೆ ಎಂದು ರಾಹುಲ್​ ಹೇಳಿದ್ದಾರೆ. ಅಲ್ಲದೆ, ಚುನಾವಣಾ ಆಯೋಗವು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಕ್ರಮ ಮತ ಕಳ್ಳತನ ನಡೆದಿದೆ ಎಂದು ರಾಹುಲ್​ ಗಾಂಧಿ ಆರೋಪಿಸಿದ್ದಾರೆ.

ಹಲವು ರಾಜ್ಯಗಳ ಕ್ಷೇತ್ರಗಳಾದ್ಯಂತ ಅಭ್ಯರ್ಥಿಗಳಿಂದ ಪಕ್ಷಕ್ಕೆ ಹಲವಾರು ದೂರುಗಳು ಬಂದಿವೆ ಎಂದು ರಾಹುಲ್ ಆರೋಪಿಸಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಅಡಿಪಾಯ ನಾಶವಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್)