Soap : ಜಾಹೀರಾತುಗಳು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಹತ್ತಿರ ತರುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಜಾಹೀರಾತುಗಳಲ್ಲಿ ನೀವೊಂದು ವಿಷಯವನ್ನು ಗಮನಿಸಿರಬಹುದು ಅದೇನೆಂದರೆ, ನಾವು ಯಾವುದೇ ಸಾಬೂನಿನ ಜಾಹೀರಾತು ಅಥವಾ ಸಾಬೂನಿನ ಪ್ಯಾಕೆಟ್ ನೋಡಿದಾಗಲೆಲ್ಲ ಅದರಲ್ಲಿ ಮಹಿಳೆಯರ ಚಿತ್ರವೇ ಇರುತ್ತದೆ. ಪುರುಷರ ಚಿತ್ರಗಳು ಬಹಳ ಅಪರೂಪ. ಹೇಳಬೇಕೆಂದರೆ, ಇಲ್ಲವೇ ಇಲ್ಲ ಎನ್ನಬಹುದು.
ಮಹಿಳೆಯರ ಚಿತ್ರವಿದ್ದಕ್ಕೆ ಆ ಸೋಪುಗಳನ್ನು ಕೇವಲ ಹುಡುಗಿಯರು ಮಾತ್ರ ಬಳಸುತ್ತಾರೆಯೇ? ಹುಡುಗರು ಕೂಡ ಬಳಸುತ್ತಾರೆ ತಾನೇ? ಹೀಗಿರುವಾಗ ಕೇವಲ ಹುಡುಗಿಯರ ಫೋಟೋ ಮಾತ್ರ ಏಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು.
ಅಂದಹಾಗೆ, ಮಾರುಕಟ್ಟೆಯಲ್ಲಿ ಹಲವು ರೀತಿಯ ಸೋಪುಗಳು ಲಭ್ಯವಿದೆ. ಸಂತೂರ್, ಪ್ರಿಯಾ, ಡೈನಾ, ಹಮಾಮ್ ಹಾಗೂ ಲಕ್ಸ್ ಸೇರಿದಂತೆ ಹಲವು ಸಾಬೂನಿನ ಪ್ಯಾಕೆಟ್ಗಳ ಮೇಲೆ ಕೇವಲ ಹುಡುಗಿಯರ ಚಿತ್ರಗಳೇ ಇರುತ್ತವೆ. ಹಾಗಾದರೆ, ಸಾಬೂನಿನ ಕವರ್ ಮತ್ತು ಅದಕ್ಕೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಕೇವಲ ಹುಡುಗಿಯರ ಚಿತ್ರಗಳೇ ಏಕೆ ಇವೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ನೀವು ಗೂಗಲ್ನಲ್ಲಿ ಈ ರೀತಿಯ ಪ್ರಶ್ನೆ ಕೇಳಿದರೆ, ಗೂಗಲ್ ನಿಮಗೆ ತಮಾಷೆಯ ಉತ್ತರ ನೀಡುತ್ತದೆ. ಅದರ ಪ್ರಕಾರ, ಪುರುಷರಿಗೆ ಹೋಲಿಸಿದರೆ ಮಹಿಳೆಯರು ಪ್ರತಿದಿನ ಸ್ನಾನ ಮಾಡುತ್ತಾರಂತೆ. ಹಾಗಾಗಿ, ಹುಡುಗಿಯರ ಫೋಟೋ ಹಾಕುತ್ತಾರಂತೆ. ಸರಾಸರಿ ನೋಡಿದರೆ ಹುಡುಗರು ಪ್ರತಿದಿನ ಸ್ನಾನ ಮಾಡುವುದಿಲ್ಲ ಆದರೆ, ಹುಡುಗಿಯರು ಸದಾ ಸ್ನಾನ ಮಾಡುತ್ತಾರಂತೆ. ಇನ್ನು ಈ ಉತ್ತರ ತಮಾಷೆಗಾಗಿ ಮಾತ್ರ. ಅಸಲಿ ಉತ್ತರ ಈ ಕೆಳಕಂಡಂತಿದೆ.
ಇದನ್ನೂ ಓದಿ: ರೈಲು ಪ್ರಯಾಣದ ಮಧ್ಯೆಯೇ ಹೆರಿಗೆ ನೋವು: ದೇವರಂತೆ ಬಂದ ಯುವಕ, ಉಳಿದಿದ್ದು ಎರಡು ಜೀವ! Railway platform
ಸೋಪ್ ಪ್ಯಾಕೆಟ್‌ಗಳು ಮತ್ತು ಸೋಪಿನ ಜಾಹೀರಾತುಗಳಲ್ಲಿ ಮಹಿಳೆಯರನ್ನೇ ಕೇಂದ್ರೀಕರಿಸಲು ಮುಖ್ಯ ಕಾರಣವೇನೆಂದರೆ, ಮಹಿಳೆಯರ ಫೋಟೋಗಳು ಮಾತ್ರ ಜಾಹೀರಾತನ್ನು ಆಕರ್ಷಕವಾಗಿಸುತ್ತವೆ. ಲುಕ್ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಗಮನ ಸೆಳೆಯುತ್ತಾರೆ. ಇದು ಕೇವಲ ಸಾಬೂನಿನ ವಿಚಾರಕ್ಕೆ ಮಾತ್ರವಲ್ಲ, ಅನೇಕ ವಿಭಾಗಗಳಲ್ಲಿ ಇದೇ ತಂತ್ರವನ್ನು ಅನುಸರಿಸಲಾಗುತ್ತಿದೆ. ಡಿಜಿಟಲ್ ಮಾರುಕಟ್ಟೆಯಲ್ಲಿ ಲುಕ್ ಬಹಳ ಮುಖ್ಯ. ಅದಕ್ಕಾಗಿಯೇ ಅವರು ಹೆಚ್ಚಾಗಿ ಮಹಿಳೆಯರನ್ನು ಬಳಸುತ್ತಾರೆ. (ಏಜೆನ್ಸೀಸ್)