ನವದೆಹಲಿ: ಮದುವೆ (Marriage) ಎಂಬುದು ಒಂದು ಪವಿತ್ರಾ ಸಂಬಂಧವಾಗಿದ್ದು, ಇದಕ್ಕೆ ಏಳು ಜನ್ಮಗಳ ನಂಟಿರುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮದುವೆ ಎಂಬ ಪದಕ್ಕೆ ಯಾವುದೇ ಅರ್ಥವಿಲ್ಲದಂತಾಗಿದ್ದು, ಮದುವೆಯೇ ಆಗದೆ ಸಂಸಾರ (Live In Relationship) ನಡೆಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಇದೀಗ ಹಣಕ್ಕಾಗಿ ಯುವತಿಯರು ಪ್ಲೆಷರ್ ವೆಡ್ಡಿಂಗ್ (Pleasure Wedding) ಆಗುತ್ತಿರುವ ಬಗ್ಗೆ ವರದಿಯಾಗಿದ್ದು, ಈ ಆಘಾತಕಾರಿ ವಿಚಾರ ಹಲವರನ್ನು ಬೆಚ್ಚಿ ಬೀಳಿಸಿದೆ.
ಖ್ಯಾತ ಪ್ರವಾಸಿ ತಾಣ ಇಂಡೋನೇಷ್ಯಾದ (Indonesia) ಪುಂಕಾಕ್ (Puncak) ಎಂಬ ಪ್ರದೇಶದಲ್ಲಿ ಪ್ಲೆಷರ್ ವೆಡ್ಡಿಂಗ್ (Pleasure Wedding) ಟ್ರೆಂಡ್ ಹುಟ್ಟಿಕೊಂಡಿದ್ದು, ಹಣಕ್ಕಾಗಿ ಯುವತಿಯರು ಈ ರೀತಿ ಮಾಡುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮದುವೆಯನ್ನು ತಾತ್ಕಾಲಿಕ ಮದುವೆ ಎಂದು ಕರೆಯಲಾಗುತ್ತದೆ. ಈ ವಿಚಾರವಾಗಿ ಹಲವರು ಕಿಡಿಕಾರಿದ್ದು, ಸರ್ಕಾರಕ್ಕೆ (Government) ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ದೇಶದ ಪಶ್ಚಿಮ ಭಾಗದಲ್ಲಿರುವ ಪುಂಕಾಕ್ (Puncak) ಮಧ್ಯಪ್ರಾಚ್ಯದಿಂದ ಬರು ಪ್ರವಾಸಿಗರಿಗೆ (Tourists) ನೆಚ್ಚಿನ ತಾಣವಾಗಿದೆ. ಪ್ರದೇಶವು ನೈಸರ್ಗಿಕ ಸೌಂದರ್ಯ ಮತ್ತು ಅರೇಬಿಕ್ ಪ್ರಭಾವಗಳ ಸಮೃದ್ಧಿಯಿಂದ ಆಕರ್ಷಿತವಾಗಿದ್ದು, ಪ್ರತಿನಿತ್ಯ ಇಲ್ಲಿ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಕೋಟಾ ಬುಂಗಾ (Kota Bunga) ಎಂಬ ಪ್ರದೇಶದ ರೆಸಾರ್ಟ್ ಒಂದರಲ್ಲಿ ಈ ರೀತಿ ಮಾಡಲಾಗುತ್ತಿದ್ದು, ಹಣಕ್ಕಾಗಿ ವಾರದ ಮಟ್ಟಿಗೆ ಮದುವೆಯಾಗುತ್ತಿರುವ ಸುದ್ದಿ ಹಲವರ ಕಣ್ಣು ಕೆಂಪಗಾಗಿಸಿದೆ.
ಖಾಸಗಿ ಸುದ್ದಿ ಮಾಧ್ಯಮ ವರದಿ ಮಾಡಿರುವ ಪ್ರಕಾರ, ಇಂಡೋನೇಷ್ಯಾದ (Indonesia) ಪುಂಕಾಕ್ ಎಂಬ ಹಳ್ಳಿಯಲ್ಲಿ ಇಂತಹದ್ದೊಂದು ಪದ್ಧತಿ ಇದೆ. ಅದಲ್ಲದೇ, ಸ್ಥಳೀಯ ಹೆಣ್ಣು ಮಕ್ಕಳೇ ದುಡ್ಡಿಗಾಗಿ ಯುವತಿಯರನ್ನು ಮದುವೆ ಮಾಡಿಕೊಳ್ಳುವ ಎಜೆನ್ಸಿಗಳನ್ನು (Agencies) ಪ್ರಾರಂಭಿಸಲಾಗಿದೆ. ಅತ್ಯಂತ ಕಡು ಬಡತನದ ಹಿನ್ನೆಲೆಯಿಂದ ಬಂದ ಯುವತಿಯರು ಈ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು, ಯುವತಿ ಹಾಗೂ ಇಲ್ಲಿಗೆ ಬಂದ ಪ್ರವಾಸಿಗರು ಒಪ್ಪಿಕೊಂಡರೆ ಮದುವೆ (Marriage) ಮಾಡಿ ಮುಗಿಸುತ್ತಾರೆ.
ತಾತ್ಕಾಲಿಕ ಮದುವೆ (Temprovary Wedding) ಮಾಡಿಕೊಂಡ ಪ್ರವಾಸಿಗರು ವಧುದಕ್ಷಿಣೆ ಎಂದು ಲಕ್ಷಾಂತರ ರೂಪಾಯಿ ಹಣವನ್ನು ನೀಡಬೇಕು. ಆದಾದ ಬಳಿಕ ತಮ್ಮ ತಮ್ಮ ದೇಶಕ್ಕೆ ಹೊರಟಾಗ ನಿಯಮದ ಪ್ರಕಾರ ಮದುವೆ ರದ್ದಾಗುತ್ತದೆ. ಆ ಬಳಿಕ ಈ ಯುವತಿಯು ಬೇರೊಬ್ಬ ಪ್ರವಾಸಿಗನನ್ನು ಮದುವೆಯಾಗುತ್ತಾಳೆ. ಈ ರೀತಿ ಮದುವೆಯಾಗುವ ಯುವತಿಯರು ಲೈಂಗಿಕ ಸೇವೆ (Sexual Services) ಸೇರಿದಂತೆ ತಾತ್ಕಾಲಿಕ ಪತಿ ಹೇಳುವ ಎಲ್ಲಾ ಸೇವೆಗಳನ್ನು ಮಾಡುತ್ತಾರೆ.
ಈ ಬಗ್ಗೆ ಕಹಾಯಾ (Cahaya) ಎಂಬ ಯುವತಿಯೊಬ್ಬಳು ಮಾತನಾಡಿದ್ದು, ತನಗಾದ ಅನುಭವವನ್ನು ಹಂಚಿಕೊಂಡಿದ್ದಾಳೆ. ನಾನು 17 ವರ್ಷದವಳಾಗಿದ್ದಾಗ ಈ ವೃತ್ತಿಗೆ ಬಂದೆ. ಈವರೆಗೆ ನಾನು 15ಕ್ಕೂ ಹೆಚ್ಚು ಮಂದಿಯನ್ನು ಮದುವೆಯಾಗಿದ್ದು, ಮೊದಲ ತಾತ್ಕಾಲಿಕ ಪತಿ ಸೌದಿ ಅರೇಬಿಯಾ ಮೂಲದ 50 ವರ್ಷದವರಾಗಿದ್ದರು. ಈತ 850 ಡಾಲರ್ (Dollar) ಕೊಟ್ಟು ನನ್ನನ್ನು ವಿವಾಹವಾಗಿದ್ದ. ಏಜೆಂಟ್ (Agent) ಮತ್ತು ಅಧಿಕಾರಿಗಳು (Officers) ತಮ್ಮ ಪಾಲು ಪಡೆದ ಬಳಿಕ ಅರ್ಧದಷ್ಟು ಮೊತ್ತ ಮಾತ್ರ ನಮಗೆ ಕೊಡುತ್ತಾರೆ. ಇದರಿಂದಲೇ ನಮ್ಮ ಜೀವನ ಸಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ.