Anupama Parameswaran: ತಮ್ಮ ಕುಟುಂಬದ ಬಗ್ಗೆ ಸುಳ್ಳು ಮಾಹಿತಿ ಮತ್ತು ತಮ್ಮ ಫೋಟೋಗಳನ್ನು ಮಾರ್ಫ್ ಮಾಡಿ ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ನಟಿ ಅನುಪಮಾ ಪರಮೇಶ್ವರನ್, ಕೇರಳ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ಮೂಲಕ ವಿಷಯವನ್ನು ಬಹಿರಂಗಪಡಿಸಿರುವ ನಟಿ, ಮೊದ ಮೊದಲು ಇದು ಸಾಂದರ್ಭಿಕ ಟ್ರೋಲ್ನಂತೆ ಕಾಣುತ್ತಿತ್ತು. ನಂತರ ನನ್ನ ಬಗ್ಗೆ ಸುಳ್ಳು ಆರೋಪಗಳನ್ನು ಹರಡಲು ಹಲವಾರು ನಕಲಿ ಸಾಮಾಜಿಕ ಮಾಧ್ಯಮದ ಖಾತೆಗಳನ್ನು ರಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಎಂದಿನಂತೆ ನಿದ್ರೆಗೆ ಜಾರಿದ ಆಂಧ್ರ ಯುವತಿ ಬೆಳಗ್ಗೆ ಕಣ್ಣು ತೆರೆಯಲೇ ಇಲ್ಲ! ಏನಾಯ್ತು ಆ ರಾತ್ರಿ? Young girl
ಕೆಲವು ದಿನಗಳ ಹಿಂದೆ, ಇನ್ಸ್ಟಾಗ್ರಾಮ್ನಲ್ಲಿ ನನ್ನ ಪ್ರೊಫೈಲ್ ಫೋಟೋ ಹಾಗೂ ನನ್ನ ಕುಟುಂಬದ ಬಗ್ಗೆ ಅತ್ಯಂತ ಅನುಚಿತ ಮತ್ತು ಸುಳ್ಳು ವಿಷಯಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಈ ವೇಳೆ ನನ್ನ ಸ್ನೇಹಿತರು ಮತ್ತು ಸಹ-ನಟರನ್ನು ಟ್ಯಾಗ್ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಪೋಸ್ಟ್ಗಳಲ್ಲಿ ನನ್ನ ಮಾರ್ಫ್ ಮಾಡಿದ ಚಿತ್ರಗಳು ಹಾಗೂ ಆಧಾರರಹಿತ ಆರೋಪಗಳನ್ನು ಒಳಗೊಂಡಿವೆ. ಆನ್‌ಲೈನ್‌ನಲ್ಲಿ ಇಂತಹ ಉದ್ದೇಶಿತ ಕಿರುಕುಳವನ್ನು ನೋಡುವುದು ತುಂಬಾ ದುಃಖಕರವಾಗಿದೆ ಎಂದು ಬರೆದಿದ್ದಾರೆ.
ನನ್ನ ಆಶ್ಚರ್ಯಕ್ಕೆ, ಆರೋಪಿ ತಮಿಳುನಾಡು ಮೂಲದ 20 ವರ್ಷದ ಯುವತಿ ಎಂದು ತಿಳಿದುಬಂದಿದೆ. ಅವಳ ಚಿಕ್ಕ ವಯಸ್ಸನ್ನು ಪರಿಗಣಿಸಿ, ನಾನು ಅವಳ ಗುರುತನ್ನು ಬಹಿರಂಗಪಡಿಸುತ್ತಿಲ್ಲ. ಏಕೆಂದರೆ ನಾನು ಆಕೆಯ ಭವಿಷ್ಯ ಮತ್ತು ಮನಸ್ಸಿನ ಶಾಂತಿಯನ್ನು ಹಾಳು ಮಾಡಲು ಇಷ್ಟಪಡುವುದಿಲ್ಲ ಎಂದು ಬರೆದಿದ್ದಾರೆ.
ಈ ವಿಷಯದ ಬಗ್ಗೆ ಸೈಬರ್ ಪೊಲಿಸರು ತನಿಖೆ ಆರಂಭಿಸಿದಾಗ ಆ ಮಹಿಳೆಯು ನಟಿಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಲು ಹಲವಾರು ನಕಲಿ ಇನ್‌ಸ್ಟಾಗ್ರಾಮ್ ಪ್ರೊಫೈಲ್ಗಳನ್ನು ರಚಿಸಿದ್ದಾಳೆ ಎಂದು ತಿಳಿದುಬಂದಿದೆ.
ಸಾರ್ವಜನಿಕ ವ್ಯಕ್ತಿಗಳ ಮೇಲೆ ಸೈಬರ್ ಬೆದರಿಕೆಗಳು ವ್ಯಾಪಕವಾಗಿ ಪರಿಣಾಮ ಬೀರುತ್ತಿರುವ ಬಗ್ಗೆ ಮಾತನಾಡಿದ ಅನುಪಮ, ನಟ ಹಾಗೂ ನಟಿಯರು ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ ಅವರ ಮೂಲಭೂತ ಹಕ್ಕುಗಳನ್ನು ಯಾರೂ ಕಸಿದುಕೊಳ್ಳಲಾಗುವುದಿಲ್ಲ. ಹಾಗಾಗಿ ಇಂತಹ ಸೈಬರ್ ಬೆದರಿಕೆಗಳು ಶಿಕ್ಷಾರ್ಹ ಅಪರಾಧ ಎಂದು ಹೇಳಿದ್ದಾರೆ.
ಈ ಪೋಸ್ಟ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯಿಸಿದ್ದು, ನಟಿ ಯುವತಿಯ ಬಗ್ಗೆ ಸಹಾನುಭೂತಿಯನ್ನು ಆರಿಸಿಕೊಂಡರೂ, ಕಾನೂನು ಕ್ರಮಗಳು ನಡದೇ ನಡೆಯುತ್ತವೆ. ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಪ್ರವೇಶವನ್ನು ಹೊಂದಿರುವುದು ಯಾವ ವ್ಯಕ್ತಿಗೂ ಮಾನಹಾನಿ ಹಾಗೂ ದ್ವೇಷವನ್ನು ಹರಡುವ ಹಕ್ಕನ್ನು ನೀಡುವುದಿಲ್ಲ. ಆನ್‌ಲೈನ್‌ನಲ್ಲಿ ನಡೆಯುವ ಪ್ರತಿಯೊಂದಕ್ಕೂ ಸಾಕ್ಷಿಗಳು ಸಿಗುತ್ತವೆ. ಹಾಗಾಗಿ ಜವಬ್ದಾರಿಯಿಂದ ವರ್ತಿಸಬೇಕು ಎಂದು ತಿಳಿಸಿದ್ದಾರೆ.
ಕಾನೂನು ಕ್ರಮ ಕೈಗೊಳ್ಳುವ ಅವರ ನಿರ್ಧಾರವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಡಿಜಿಟಲ್ ಜವಾಬ್ದಾರಿಯ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ಅನೇಕರು ನಟಿಯನ್ನು ಶ್ಲಾಘಿಸಿದ್ದಾರೆ. ಇನ್ನು ಆನ್‌ಲೈನ್ ಕಿರುಕುಳವು ನಿಜವಾದ ಪರಿಣಾಮಗಳನ್ನು ಬೀರುತ್ತದೆ ಎಂದು ನೆನಪಿಸಿದ್ದಾರೆ. (ಏಜೆನ್ಸೀಸ್)