ನ್ಯೂಸ್

ರಾಷ್ಟ್ರೀಯ ಗೀತೆಯನ್ನು ಬರೆದವರು ಯಾರು? ಸುಂದ್ರಿಯರ ಉತ್ತರ ಕೇಳಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು

ನವದೆಹಲಿ: ಇಂದಿನ ಪೀಳಿಗೆಯ ಆಲೋಚನೆಗಳು ಎಲ್ಲಿಗೆ ಹೋಗುತ್ತಿವೆ ಎಂದು ಕೆಲವರು ಆಗಾಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲ ಯುವತಿಯರಿಗೆ ದೇಶ, ದೇಶದ ಸ್ವಾತಂತ್ರ್ಯ, ನಾಯಕರ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ಇಂತಹವರಿಗೆ ಸಂಬಂಧಿಸಿದ ವಿಡಿಯೋಗಳು ನೆಟ್ ನಲ್ಲಿ ಹರಿದಾಡುತ್ತಿವೆ.

ರಸ್ತೆ ಬಂದಿ ನಿಂತ ವ್ಯಕ್ತಿಯೊಬ್ಬ ಅಲ್ಲೇ ಸುತ್ತಮುತ್ತಾ ಓಡಾಡುತ್ತಿರುವ ಯುವತಿಯರ ಬಳಿ ಮೈಕ್​ ಹಿಡಿದು ಭಾರತದ ರಾಷ್ಟ್ರೀಯ ಗೀತೆಯನ್ನು  ಬರೆದವರು ಯಾರೆಂದು ಕೇಳಿದರು. ಈ ಪ್ರಶ್ನೆಗೆ ಹುಡುಗಿಯೊಬ್ಬಳ ಉತ್ತರ ಕೇಳಿ ಇಂಟರ್ ನೆಟ್ ಬಳಕೆದಾರರು ನಗು ತಡೆಯಲಾರದೆ ವಿಭಿನ್ನವಾಗಿ ಕಾಮೆಂಟ್​​ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

Instagram ಪ್ರಭಾವಿ ರೆಹಾನ್ ಖಾನ್ ಆಗಾಗ್ಗೆ ಜನರೊಂದಿಗೆ ಸಣ್ಣ ಸಂದರ್ಶನಗಳನ್ನು ತೆಗೆದುಕೊಳ್ಳುತ್ತಾರೆ. ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ, ಇತ್ತೀಚೆಗೆ ಈತ ಕೇಳಿದ ಪ್ರಶ್ನೆಗೆ ಯುವತಿಯ ಉತ್ತರ ಕೇಳಿ ಕೇಳುಗರು ತಲೆ ಕೆಡಿಸಿಕೊಂಡಿದ್ದರು. ವೈರಲ್ ವೀಡಿಯೊದಲ್ಲಿ ಕೆಲವು ಹುಡುಗಿಯರನ್ನು ತೋರಿಸಲಾಗಿದೆ. ಇದರಲ್ಲಿ ಭಾರತದ ರಾಷ್ಟ್ರೀಯ ಗೀತೆ  ಬರೆದವರು ಯಾರು ಎಂದು ರೆಹಾನ್ ಕೇಳುತ್ತಿದ್ದಾರೆ. ಕೆಲವರು ರವೀಂದ್ರನಾಥ ಟ್ಯಾಗೋರ್ ಎಂದು ಹೇಳಿದರು, ಇತರರು ಬಂಗಾಳದ ವ್ಯಕ್ತಿಯ ಹೆಸರು ನೆನಪಿಲ್ಲ ಎಂದು ಹೇಳಿದರು. ಇದೇ ವೇಳೆ ಯುವತಿಯೊಬ್ಬಳು ಗಾಯಕ ಅರಿಜಿತ್ ಸಿಂಗ್ ಹೆಸರು ಹೇಳಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾಳೆ. ಈ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಜನರು ಈ ವೀಡಿಯೊಗೆ ಕಾಮೆಂಟ್ ಮಾಡುತ್ತಿದ್ದಾರೆ.

ರಾಷ್ಟ್ರೀಯ ಗೀತೆಯನ್ನು 'ವಂದೇ ಮಾತರಂ' ಅನ್ನು ಬಂಕಿಮ್ ಚಂದ್ರ ಚಟರ್ಜಿ ಬರೆದಿದ್ದಾರೆ. ಇದು ಅವರು ತಮ್ಮ ಬಂಗಾಳಿ ಕಾದಂಬರಿ 'ಆನಂದಮತ್' ನಲ್ಲಿ ಬರೆದ ಸಂಸ್ಕೃತ ಪದ್ಯ. ಕಾಲಕ್ರಮೇಣ ಈ ಪದ್ಯ ರಾಷ್ಟ್ರಗೀತೆಯಾಯಿತು. 1896 ರಲ್ಲಿ, ರಹಮತುಲ್ಲಾ ಎಂ ಸಯಾನಿ ಅವರ ಅಧ್ಯಕ್ಷತೆಯಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು. ಆದರೆ ಹುಡುಗಿಯ ಉತ್ತರ ಕೇಳಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.. ಇಂದಿನ ಯುವ ಪೀಳಿಗೆ ಎಲ್ಲಿಗೆ ಹೋಗುತ್ತಿದೆ. ಆದರೆ ಇಂದಿನ ಯುವಕರಿಗೆ ನಮ್ಮ ದೇಶದ ಬಗ್ಗೆ ಮಹತ್ವದ ಮಾಹಿತಿ ನೀಡುವ ಅಗತ್ಯವಿದೆ ಎಂದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.