ನ್ಯೂಸ್

ಆಸ್ಪತ್ರೆಯಲ್ಲಿರುವ ನಟ Darshanರನ್ನು ಭೇಟಿ ಮಾಡಲು ಯಾರಿಗೆಲ್ಲಾ ಇದೆ ಅವಕಾಶ?; ಇಲ್ಲಿದೆ ಕಂಪ್ಲೀಟ್​ಬ ಡೀಟೇಲ್ಸ್​

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್​ (Darshan) ಬೆನ್ನು ನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದ ನಟ ದರ್ಶನ್ (Darshan)​ ಆ ಬಳಿಕ ತೀವ್ರ ಬೆನ್ನು ನೋವಿನಿಂದ ಬಳಲಿದ್ದು, ನಡೆದಾಡಲು ಸಾಧ್ಯವಾಗದೆ ಪರದಾಡಿದ್ದರು. ಇದೀಗ ನಟ ದರ್ಶನ್​ (Darshan) ಜೈಲಿನಿಂದ ಬಿಡುಗಡೆಯಾದ ಮೂರನೇ ದಿನಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಅವರಿಗೆ ಚಿಕಿತ್ಸೆ ಆರಂಭಿಸಿದ್ದಾರೆ.

ಕೆಂಗೇರಿಯ ಬಿಜಿಎಸ್​ ಆಸ್ಪತ್ರೆಗೆ ನಟ ದರ್ಶನ್​ (Darshan) ದಾಖಲಾಗಿದ್ದು, ಇವರನ್ನು ವಿಶೇಷ ರೂಮ್​ನಲ್ಲಿ ಇರಿಸಲಾಗಿದೆ. ಅಲ್ಲದೇ ಇವರನ್ನು ಭೇಟಿ ಮಾಡಲು ಬರೀ ಏಳು ಜನಕ್ಕೆ ಅವಕಾಶ ನೀಡಲಾಗಿದ್ದು, ಬೇರೆ ಯಾರಿಗೂ ಅವಕಾಶವಿಲ್ಲ ಎಂದು ಹೇಳಲಾಗಿದೆ. ಈ ವಿಷಯವನ್ನು ದರ್ಶನ್ (Darshan) ಕುಟುಂಬದವರೇ ಆಸ್ಪತ್ರೆಯವರಿಗೆ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ. ಅದರಂತೆ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮೀ, ತಾಯಿ ಮೀನಾ, ಸಹೋದರ ದಿನಕರ್​, ಪುತ್ರ ವಿನೀಶ್​, ನಟ ಧನ್ವೀರ್​ ಹಾಗೂ ವಕೀಲರನ್ನು ಬಿಟ್ಟರೆ ನಟ ದರ್ಶನ್​ರನ್ನು ಭೇಟಿ ಮಾಡಲು ಬೇರೆ ಯಾರಿಗೂ ಅವಕಾಶವಿಲ್ಲ.

ಸದ್ಯ ತಿಳಿದು ಬಂದಿರುವ ಮಾಹಿತಿ ಪ್ರಕಾರ ನಟ ದರ್ಶನ್​ಗೆ (Darshan) ಹೆಚ್ಚಿನ ವಿಶ್ರಾಂತಿಯ ಅಗತ್ಯವಿದ್ದು, ಹೆಚ್ಚಿನ ಜನ ಅವರನ್ನು ಭೇಟಿ ಮಾಡಲು ಬಂದರೆ ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ತೊಂದರೆಯಾಗುತ್ತದೆ. ಭದ್ರತೆ ಸಮಸ್ಯೆ ಉಂಟಾಗಬಹುದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವೈದ್ಯರು ತಪಾಸಣೆಯನ್ನು ಆರಂಭಿಸಿದ್ದಾರೆ.

ದಾಸನ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು? 

ದರ್ಶನ್​ (Darshan) ಆರೋಗ್ಯದ ಕುರಿತು ಕೆಂಗೇರಿ ಬಿಜಿಎಸ್​ ಆಸ್ಪತ್ರೆಯೆ ವೈದ್ಯ ನವೀನ್​ ಅಪ್ಪಾಜಿಗೌಡ (Naveen AppajiGowda)  ಮಾತನಾಡಿ, ದರ್ಶನ್​ (Darshan) ಇಂದು (ನವೆಂಬರ್​ 01) 3.30ರ ಸುಮಾರಿಗೆ ಬಂದು ಅಡ್ಮಿಟ್ ಆಗಿದ್ದಾರೆ. ನಾವು ತಪಾಸಣೆ ಮಾಡಿದ್ದೇನೆ. ಕಾಲು ನೋವು ಇದೆ. ಅದರಿಂದ ಬೆನ್ನು ನೋವು ಕೂಡ ಇದೆ. ಎಡಗಡೆ ಕಾಲಿನಲ್ಲಿ ವೀಕ್​ನೆಸ್​ ಇದೆ. ಆ ಕಾಲು ಆಡುವುದು ಸ್ವಲ್ಪ ಕಮ್ಮಿ ಆಗಿದೆ. ಹೆಚ್ಚಿನ ತಪಾಸಣೆ ಮಾಡಿ, ಯಾವ ರೀತಿ ಚಿಕಿತ್ಸೆ ಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಪೂರ್ತಿ ತಪಾಸಣೆ (Tests) ಆದ ನಂತರ ಏನಾಗಿದೆ ಎಂಬುದು ನಮಗೆ ಗೊತ್ತಾಗುತ್ತದೆ.

ಎಂಆರ್​ಐ, ಎಕ್ಸ್​ರೇ ಮತ್ತು ರಕ್ತದ ಪರೀಕ್ಷೆ ಮಾಡಬೇಕಾಗುತ್ತದೆ. 48 ಗಂಟೆ ಬಳಿಕ ಒಟ್ಟಾರೆ ರಿಪೋರ್ಟ್ ಸಿಗಲಿದೆ. ತಪಾಸಣೆಗೆ 24 ಗಂಟೆಗಳ ಕಾಲಬೇಕು ಎಂದು ಹೇಳಿದ್ದಾರೆ. ಒಂದು ವಾರದ ಹಿಂದೆ ಮಾಡಿದ ಎಂಆರ್​ಐ ಫಿಲ್ಮ್​ ನಮಗೆ ಲಭ್ಯವಾಗಿಲ್ಲ. ಆದ್ದರಿಂದ ಇನ್ನೊಮ್ಮೆ ಎಂಆರ್​ಐ ಮಾಡಬೇಕಾಗುತ್ತದೆ. ಸದ್ಯಕ್ಕೆ ಅವರಿಗೆ ತುಂಬ ನೋವು (Pain) ಇದೆ. ಶಸ್ತ್ರಚಿಕಿತ್ಸೆಯ (Operation) ಅಗತ್ಯ ಇದೆಯೋ ಇಲ್ಲವೋ ಎಂಬುದು ಈಗಲೇ ಹೇಳೋಕೆ ಆಗಲ್ಲ. 24ರಿಂದ 48 ಗಂಟೆಯ ಒಳಗೆ ಎಲ್ಲ ರಿಪೋರ್ಟ್​ಗಳು ಸಿಗುತ್ತವೆ. ತುಂಬಾ ನೋವು ಇರುವುದರಿಂದ ಔಷಧಿ ನೀಡಲು ಆರಂಭಿಸಿದ್ದೇವೆ ಎಂದು ಬಿಜಿಎಸ್​ ಆಸ್ಪತ್ರೆಯ ವೈದ್ಯ ನವೀನ್​ ಅಪ್ಪಾಜಿಗೌಡ (Naveen AppajiGowda) ತಿಳಿಸಿದ್ದರು.