Pant shirt color combination: ಗಂಡಸರು ಡ್ರೆಸ್ ಮಾಡಿಕೊಳ್ಳುವಾಗ ಪ್ಯಾಂಟ್ ಮತ್ತು ಶರ್ಟ್ ಬಣ್ಣ ಸರಿಯಾಗಿ ಮ್ಯಾಚ್ ಆಗುವುದು ತುಂಬಾ ಮುಖ್ಯ. ಯಾವ ಪ್ಯಾಂಟ್‌ಗೆ ಯಾವ ಶರ್ಟ್ ಹಾಕಿದರೆ ಹ್ಯಾಂಡ್ಸಮ್ ಆಗಿ ಕಾಣಬಹುದು ಎಂಬ ಗೊಂದಲ ನಿಮಗೂ ಇದ್ದರೆ, ಈ ಸರಳ ಟಿಪ್ಸ್ ನಿಮ್ಮ ಸ್ಟೈಲ್ ಅನ್ನು ಸುಲಭವಾಗಿ ಬದಲಾಯಿಸಬಹುದು.
ಫ್ಯಾಷನ್ ಲೋಕದಲ್ಲಿ ಬಣ್ಣಗಳ ಸರಿಯಾದ ಜೋಡಣೆ ಹೇಗಿರಬೇಕು ಎಂಬ ಮಾಹಿತಿ ಇಲ್ಲಿದೆ
ಇದು ಯಾವಾಗಲೂ ಟ್ರೆಂಡ್‌ನಲ್ಲಿರುವ ಮತ್ತು ಎಲ್ಲೂ ಮುಜುಗರವಾಗದ ಸುರಕ್ಷಿತವಾದ ಸ್ಟೈಲ್. ಆಫೀಸ್‌ಗೆ ಹೋಗುವಾಗ ಅಥವಾ ಮೀಟಿಂಗ್‌ಗಳಿಗೆ ಇದು ಬೆಸ್ಟ್ ಚಾಯ್ಸ್.
ಕಪ್ಪು ಪ್ಯಾಂಟ್: ಇದಕ್ಕೆ ಬಿಳಿ, ತಿಳಿ ನೀಲಿ, ಪೀಚ್, ತಿಳಿ ಗುಲಾಬಿ ಅಥವಾ ಬೂದು ಬಣ್ಣದ ಶರ್ಟ್ ಹಾಕಿದರೆ ಸೂಪರ್ ಆಗಿರುತ್ತೆ.
ನೇವ್ ಬ್ಲೂ ಪ್ಯಾಂಟ್: ಇದಕ್ಕೆ ಬಿಳಿ, ತಿಳಿ ನೀಲಿ, ಕ್ರೀಮ್ ಅಥವಾ ತಿಳಿ ಹಳದಿ ಬಣ್ಣದ ಶರ್ಟ್ ತುಂಬಾ ಚೆಂದ ಕಾಣಿಸುತ್ತದೆ.
ಗಾಢ ಬೂದು ಪ್ಯಾಂಟ್: ಇದಕ್ಕೆ ಬಿಳಿ, ತಿಳಿ ಗುಲಾಬಿ, ತಿಳಿ ನೀಲಿ ಅಥವಾ ಕಪ್ಪು ಶರ್ಟ್ ಜೋಡಿಸಬಹುದು.
ಸ್ನೇಹಿತರೊಂದಿಗೆ ಹೊರಗೆ ಹೋಗುವಾಗ ಅಥವಾ ಪಾರ್ಟಿಗಳಿಗೆ ಈ ಕಾಂಬಿನೇಷನ್ ಟ್ರೈ ಮಾಡಬಹುದು.
ಖಾಕಿ ಅಥವಾ ಕ್ರೀಮ್ ಪ್ಯಾಂಟ್: ಇದಕ್ಕೆ ಮೆರೂನ್, ಗಾಢ ನೀಲಿ, ಬಾಟಲ್ ಗ್ರೀನ್ ಅಥವಾ ಕಪ್ಪು ಶರ್ಟ್ ಧರಿಸಿದರೆ ರಾಯಲ್ ಲುಕ್ ಸಿಗುತ್ತದೆ.
ತಿಳಿ ಬೂದು ಪ್ಯಾಂಟ್: ಇದಕ್ಕೆ ಕಪ್ಪು, ಗಾಢ ನೀಲಿ ಅಥವಾ ಮೆರೂನ್ ಶರ್ಟ್ ಬೆಸ್ಟ್ ಮ್ಯಾಚಿಂಗ್.
ಬಿಳಿ ಪ್ಯಾಂಟ್: ಬಿಳಿ ಪ್ಯಾಂಟ್‌ಗೆ ಯಾವುದೇ ಗಾಢ ಬಣ್ಣದ (ಗಾಢ ನೀಲಿ, ಕಪ್ಪು, ಹಸಿರು, ಮೆರೂನ್) ಶರ್ಟ್ ಧರಿಸಬಹುದು.
ಬ್ಲೂ ಜೀನ್ಸ್: ಇದಕ್ಕೆ ಬಿಳಿ ಶರ್ಟ್ ಸಾರ್ವಕಾಲಿಕ ಬೆಸ್ಟ್. ಇದರೊಂದಿಗೆ ಕಪ್ಪು, ಆಲಿವ್ ಹಸಿರು ಅಥವಾ ಚೆಕ್ಸ್ ಶರ್ಟ್‌ಗಳು ಕೂಡ ಚೆನ್ನಾಗಿ ಒಪ್ಪುತ್ತವೆ.
ಬ್ಲ್ಯಾಕ್ ಜೀನ್ಸ್: ಇದಕ್ಕೆ ಬಿಳಿ, ಬೂದು ಅಥವಾ ಕೆಂಪು-ಕಪ್ಪು ಕಾಂಬಿನೇಷನ್ ಇರುವ ಚೆಕ್ಸ್ ಶರ್ಟ್ ಧರಿಸಿದರೆ ಲುಕ್ ಇಂಪ್ರೂವ್ ಆಗುತ್ತದೆ.
ಕಾಂಟ್ರಾಸ್ಟ್ ರೂಲ್: ಪ್ಯಾಂಟ್ ಡಾರ್ಕ್ ಆಗಿದ್ದರೆ ಶರ್ಟ್ ಲೈಟ್ ಇರಲಿ; ಪ್ಯಾಂಟ್ ಲೈಟ್ ಆಗಿದ್ದರೆ ಶರ್ಟ್ ಡಾರ್ಕ್ ಆಗಿರಲಿ.
ಒಂದೇ ತರಹದ ಬಣ್ಣ ಬೇಡ: ಒಂದೇ ಬಣ್ಣದ ಪ್ಯಾಂಟ್ ಮತ್ತು ಶರ್ಟ್ ಧರಿಸುವುದನ್ನು ಆದಷ್ಟು ತಪ್ಪಿಸಿ (ಉದಾಹರಣೆಗೆ: ಪೂರ್ತಿ ಹಸಿರು). ಆದರೆ ಕಪ್ಪು ಅಥವಾ ಬಿಳಿ ಬಣ್ಣದ ಒಂದೇ ತರಹದ ಲುಕ್ ಕೆಲವೊಮ್ಮೆ ಚೆನ್ನಾಗಿ ಕಾಣುತ್ತದೆ.
ಚೆಕ್ಸ್ ಮತ್ತು ಪ್ರಿಂಟ್ಸ್: ಶರ್ಟ್ ಮೇಲೆ ದೊಡ್ಡ ಚೆಕ್ಸ್ ಅಥವಾ ಭಾರಿ ಡಿಸೈನ್‌ಗಳಿದ್ದರೆ, ಪ್ಯಾಂಟ್ ಯಾವಾಗಲೂ ಪ್ಲೇನ್ (ಯಾವುದೇ ಡಿಸೈನ್ ಇಲ್ಲದ್ದು) ಆಗಿರಲಿ.