ನ್ಯೂಸ್

ಮೊದಲ Budget ಮಂಡನೆಯಾಗಿದ್ದು ಯಾವಾಗ? ಇಲ್ಲಿದೆ ನೋಡಿ ಆಯವ್ಯಯ ಕುರಿತಾದ ಸ್ವಾರಸ್ಯಕರ ಸಂಗತಿಗಳು

ನವದೆಹಲಿ: ಮೋದಿ ಸರ್ಕಾರ 3.0 ಅವಧಿಯ ಎರಡನೇ ಬಜೆಟ್​ಅನ್ನು (Budget) ಇಂದು (ಫೆಬ್ರವರಿ 01) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಲಿದ್ದು, ಹೊಸ ದಾಖಲೆ ಬರೆಯಲಿದ್ದಾರೆ. ಬೆಳಿಗ್ಗೆ 11ಗಂಟೆಗೆ ಸಂಸತ್‌ನಲ್ಲಿ 2025–26ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆಯಾಗಲಿದ್ದು, ಆರ್ಥಿಕ ಹಾಗೂ ಸಾಮಾಜಿಕ ವಲಯದಲ್ಲಿ ನಿರೀಕ್ಷೆಗಳು ಗರಿಗೆದರಿವೆ. 

ಇನ್ನೂ ಭಾರತದಲ್ಲಿ ಮೊದಲ ಬಜೆಟ್ ಮಂಡನೆಯಾಗಿದ್ದು, 1890 ಏಪ್ರಿಲ್​ 07ರಂದು. ಬ್ರಿಟಿಷ್ ಅಧಿಕಾರಿ ಬ್ರಿಟಿಷ್ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಜೇಮ್ಸ್​ ವಿಲ್ಸನ್ ಸ್ವತಂತ್ರಪೂರ್ವ ಭಾರತದ ಮೊದಲ ಬಜೆಟ್​ ಮಂಡಿಸಿದ್ದರು. ಸ್ವಾತಂತ್ರ್ಯದ ಬಳಿಕ ಮೊದಲ ಬಜೆಟ್ಅ​ನ್ನು ಅಂದಿನ ಪ್ರಧಾನಿ ಜವಾಹರಲಾಲ್​ ನೆಹರು ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಆರ್.ಕೆ.ಷಣ್ಮುಖಂ ಚೆಟ್ಟಿ ಅವರು ನವೆಂಬರ್​ 26, 1947ರಂದು ಮಂಡಿಸಿದ್ದರು. ಈ ಬಜೆಟ್​ 1947 ಆಗಸ್ಟ್ 15ರಿಂದ 1948 ಮಾರ್ಚ್ 31ರ ಅವಧಿಯದ್ದಾಗಿತ್ತು. ಭಾರತದಲ್ಲಿ ಸಂವಿಧಾನ ರಚನೆಯಾದ ಬಳಿಕ ಮೊದಲ ಬಜೆಟ್ಅ​ನ್ನು ಜಾನ್ ಮಥಾಯಿ 1950 ಫೆಬ್ರವರಿ 28ರಂದು ಮಂಡಿಸಿದರು.

ಇನ್ನೂ ಬಜೆಟ್​ನ ಸ್ವಾರಸ್ಯಕರ ಸಂಗತಿಗಳಿಗೆ ಬರುವುದಾದರೆ ಬಜೆಟ್ ಪುಸ್ತಕ 1995ರವರೆಗೆ ಬಜೆಟ್​ ಪುಸ್ತಕ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿತವಾಗುತ್ತಿತ್ತು. 1996ರಿಂದ ಹಿಂದಿಯಲ್ಲೂ ಬಜೆಟ್ ಪುಸ್ತಕ ಬರಲಾರಂಭಿಸಿತು. 1999ಕ್ಕೂ ಮುನ್ನ ಕೇಂದ್ರ ಬಜೆಟ್​ನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. 1999ರಿಂದ ಬೆಳಗ್ಗೆ 11 ಗಂಟೆಗೆ ಮಂಡಿಸಲಾಗುತ್ತಿದೆ. ಬಜೆಟ್ 2016ರವರೆಗೂ ಫೆಬ್ರವರಿ ತಿಂಗಳ ಕೊನೆಯ ದಿನ ಮಂಡನೆಯಾಗುತ್ತಿತ್ತು. 2017ರಿಂದ ಆಯವ್ಯಯವನ್ನು ಫೆಬ್ರವರಿ 1ರಂದು ಮಂಡಿಸಲಾಗುತ್ತಿದೆ. 2016ರವರೆಗೆ ರೈಲ್ವೆ ಬಜೆಟ್​ನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು, 2017ರಲ್ಲಿ ರೈಲ್ವೆ ಬಜೆಟ್​ನ್ನು ಸಾಮಾನ್ಯ ಬಜೆಟ್​ನಲ್ಲಿ ವಿಲೀನಗೊಳಿಸಲಾಯಿತು. 2021ರಲ್ಲಿ ಮೊದಲ ಬಾರಿಗೆ ಪೇಪರ್​ಲೆಸ್ ಬಜೆಟ್ ಮಂಡಿಸಲಾಯಿತು.  

ಇನ್ನೂ ಬಜೆಟ್​ನ (Budget) ವಿಚಾರಕ್ಕೆ ಬರುವುದಾದರೆ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಮಧ್ಯಮ ವರ್ಗಕ್ಕೆ ಒಂದಷ್ಟು ರಿಯಾಯಿತಿ ನೀಡುವ ಉದ್ದೇಶದಿಂದ ಹೊಸ ತೆರಿಗೆ ಸ್ಲ್ಯಾಬ್​ಗಳನ್ನು ಪರಿಚಯಿಸಬೇಕು ಎಂಬ ಬೇಡಿಕೆ ಶ್ರೀಸಾಮಾನ್ಯರದ್ದು. ಆದಾಯ ತೆರಿಗೆಯಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ಹಣದುಬ್ಬರಕ್ಕೆ ಒಂದಿಷ್ಟು ಪರಿಹಾರ ಕಂಡುಕೊಳ್ಳಬಹುದು. ಆದಾಯ ತೆರಿಗೆಗೆ ಕನಿಷ್ಠ 10 ಲಕ್ಷ ರೂ. ಮಿತಿ ಅಳವಡಿಸಬೇಕು. 15 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಮಿತಿಯನ್ನು ತಗ್ಗಿಸಬೇಕು ಎಂಬ ಆಗ್ರಹಕ್ಕೆ ವಿತ್ತ ಸಚಿವರ ಸ್ಪಂದನೆ ಹೇಗಿರುತ್ತದೆ ಎಂಬುದಕ್ಕೆ ಫೆ.1ರ ಬಜೆಟ್​ನಲ್ಲಿ ಉತ್ತರ ಸಿಗಲಿದೆ.

ಬಜೆಟ್ ಸಾಧ್ಯತೆಗಳು

  • ಮೋದಿ ಗ್ಯಾರಂಟಿ ಯೋಜನೆಗಳ ಮುಂದುವರಿಕೆ.
  • ಅಸಂಘಟಿತ ಕ್ಷೇತ್ರದ ಕಾರ್ವಿುಕರಿಗೆ ನೆರವು.
  • ಮಧ್ಯಮವರ್ಗ, ರೈತರಿಗೆ ಪೂರಕ ಕ್ರಮಗಳು.
  • ರೈಲ್ವೆಯಲ್ಲಿ ನೇಮಕಾತಿಗಳಿಗೆ ಪೂರಕ ಹೆಜ್ಜೆ.
  • ರೈಲ್ವೆ ಸುಧಾರಣೆ, ಹೊಸ ಯೋಜನೆಗಳಿಗೆ ಅನುದಾನ.
  • ಮೂಲಸೌಕರ್ಯ ವಿಸ್ತರಣೆಗೆ ಒತ್ತು.