ದಿಸ್ಪುರ್: ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮುಖ್ಯಸ್ಥನನ್ನು ಹತ್ಯೆ ಮಾಡಲಾಗಿದ್ದು, ಅವನ ಸಾವಿಗೆ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ I.N.D.I.A ಬಣದ ಸದಸ್ಯರು ಶೋಕಿಸುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Sarma) ಭಾನುವಾರ(ಸೆಪ್ಟೆಂಬರ್ 29) ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಡಿಸಿಎಂ ಆಗಿ ಉದಯನಿಧಿ ನೇಮಕ; ಸ್ಟಾಲಿನ್ ಕ್ಯಾಬಿನೆಟ್ಗೆ ನಾಲ್ವರು ಹೊಸ ಸಚಿವರ ಸೇರ್ಪಡೆ | Oathing Ceremony
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ಧ ನಡೆಯುತ್ತಿರುವುದನ್ನು ನೀವು ಈಗ ನೋಡುತ್ತಿದ್ದೀರಿ ಮತ್ತು ಕೇಳುತ್ತಿದ್ದಿರಿ. ಇತ್ತೀಚೆಗೆ ಇಸ್ರೇಲಿ ಸೇನೆಯು ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಕೊಂದಿತು. ಯಾರನ್ನಾದರೂ ಎಲ್ಲಿಯಾದರೂ ಕೊಲ್ಲುವುದು ಅವರ ದೇಶದ ವಿಷಯವಾಗಿದೆ. ಅದರಲ್ಲಿ ನಾವು ಯಾವುದೇ ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಮೆಹಬೂಬಾ ಮುಫ್ತಿ, ಫಾರೂಕ್ ಅಬ್ದುಲ್ಲಾ ಮತ್ತು ರಾಹುಲ್ ಗಾಂಧಿ ಅವರನ್ನು ನಾನು ಕೇಳಲು ಬಯಸುತ್ತೇನೆ. ಒಬ್ಬ ಹಿಂದೂ ಸತ್ತಾಗ ಅಥವಾ ಭಯೋತ್ಪಾದಕರು ಹಿಂದೂ ಸೈನಿಕರನ್ನು ಕೊಂದಾಗ, ನೀವು ಇನ್ನೂ ದುಃಖಿತರಾಗಿದ್ದೀರಾ? ದಯವಿಟ್ಟು ಇದನ್ನು ನಮಗೆ ತಿಳಿಸಿ ಎಂದು ಪ್ರಶ್ನಿದ್ದಾರೆ.
ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಕೊಲ್ಲಲಾಗಿದೆ. ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ಅವರು ನಸ್ರಲ್ಲಾ ಸಾವಿನಿಂದ ದುಃಖಿತರಾಗಿರುವ ಕಾರಣ ನಾವು ಪ್ರಚಾರ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ ಏಂದು ಹೇಳಿದ ಬಳಿಕ ಹಿಮಂತ್ ಬಿಸ್ವಾ ಶರ್ಮಾ ಅವರು ವಾಗ್ದಾಳಿ ನಡೆಸಿದ್ದಾರೆ.
ಇಸ್ರೇಲ್ ದಾಳಿಯಲ್ಲಿ ಹುತಾತ್ಮರಾದ ಹಿಜ್ಬುಲ್ಲಾ ನಾಯಕ ನಸ್ರಲ್ಲಾ ಅವರನ್ನು ಹುತಾತ್ಮ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಬಣ್ಣಿಸಿದ್ದಾರೆ. ಅಕ್ಟೋಬರ್ 1 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರನೇ ಮತ್ತು ಅಂತಿಮ ಹಂತದ ಮತದಾನ ನಡೆಯಲಿದೆ. ನಸ್ರಲ್ಲಾ ಅವರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ ಪಿಡಿಪಿ ಮುಖ್ಯಸ್ಥ ಮೆಹಬೂಬಾ ಮುಫ್ತಿ ಅವರು ಲೆಬನಾನ್ ಮತ್ತು ಗಾಜಾದ ಹುತಾತ್ಮರನ್ನು ಬೆಂಬಲಿಸಲು ವಿಶೇಷವಾಗಿ ಹಸನ್ ನಸ್ರಲ್ಲಾಹ್ ಸಾವಿಗೆ ದುಃಖ ವ್ಯಕ್ತಪಡಿಸುತ್ತಾ ನಾನು ಭಾನುವಾರದ ಚುನಾವಣಾ ಪ್ರವಾಸವನ್ನು ರದ್ದುಗೊಳಿಸುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)