ನ್ಯೂಸ್

ರೆಡ್ಡಿ ಜೈಲಿನಲ್ಲಿದ್ದಾಗ ಅವರಿವರ ಕಾಲು ಹಿಡಿದು ಹೊರಗೆ ತಂದಿರುವೆ!: ಮಾಜಿ ಸಚಿವ ಶ್ರೀರಾಮುಲು | Sriramulu

ಬಳ್ಳಾರಿ: ನಾಲ್ಕು ವರ್ಷ ಜೈಲಿನಲ್ಲಿದ್ದ ವೇಳೆ ಅವರಿವರ ಕೈಕಾಲು ಹಿಡಿದು ಹೊರಗಡೆ ತಂದಿರುವ ಬಗ್ಗೆ ರೆಡ್ಡಿ ತಿಳಿದಿದೆ. ರೆಡ್ಡಿ ಇಲ್ಲದ ವೇಳೆಯೂ ಕೂಡ ಬಿಜೆಪಿಯನ್ನು ಕಟ್ಟಿರುವೆ. ಯಾರ ಕೃಪಾ ಕಟಾಕ್ಷದಿಂದ ಬೆಳೆದಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು(Sriramulu) ತಿರುಗೇಟು‌ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮೊದಲಿನಿಂದಲೂ ಸುಳ್ಳಿನ ಮೇಲೆ ಕೋಟೆ ಕಟ್ಟುವ ಗುಣ ಶಾಸಕ ಜಿ.ಜನಾರ್ದನರೆಡ್ಡಿ ಸ್ವರೂಪವಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಮಣಿಸಲು ರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಡಿಸಿಎಂ ಡಿ.ಕೆ.ಶಿವಕುಮಾರ ಹೂಡಿದ ತಂತ್ರ ಎಂಬುದಾಗಿ ರೆಡ್ಡಿ ಸುಳ್ಳು ಹೇಳುತ್ತಿದ್ದಾರೆ. ಜಾರಕಿಹೊಳಿ ಮಣಿಸುವುದಕ್ಕೆ ನಾನು ಯಾರು ? ಈ ಊರಿನ ರಾಜ ಮತ್ತೊಂದು ಊರಿನಲ್ಲಿ ಗುಲಾಮ.

ಅದರಂತೆ ಬಿಜೆಪಿಯಲ್ಲಿ ನಾನು ಪ್ರಭಾವಿ ಹಾಗೂ ಸಮುದಾಯ ನಾಯಕನೇ ಹೊರತು, ಕಾಂಗ್ರೆಸ್ ಪಕ್ಷಕ್ಕೆ ಅಲ್ಲ ಎಂದು ಹೇಳಿದರು. ಕಾಂಗ್ರೆಸ್ ನಲ್ಲಿ 137 ಶಾಸಕರಿದ್ದಾರೆ. ಅವರು ಏಕೆ ನನ್ನ‌ ಕರೆದುಕೊಳ್ಳುತ್ತಾರೆ. ನಾನು ಹೋಗ್ತಿನಿ ಅಂದರೆ ಯಾರು ಬೇಡ ಎನ್ನುತ್ತಾರೆ. ಶಾಸಕರಾದ ರಮೇಶ ಜಾರಕಿಹೊಳಿ, ಬಸವನಗೌಡ ‌ಪಾಟೀಲ್ ಯತ್ನಾಳ್ ಇಬ್ಬರು ಒಳ್ಳೆಯ ಸ್ನೇಹಿತರೆ. ಆದರೆ, ಅವರ ಒಂದು ಸಭೆಗಳಿಗೂ ಹಾಜರಾಗಿಲ್ಲ ಎಂದರು.

ರೆಡ್ಡಿ ಕ್ರಿಮಿನಲ್ ಕತೆಗಳು ತಿಳಿದಿದೆ

ಅವನು, ಅವನು ಅನ್ನುವ ಸಂಪ್ರದಾಯ ನನ್ನದಲ್ಲ ಅವನು ಅಂದಹಾಗೇ‌ ಹೇಳುವದಕ್ಕೆ ಆಗಲ್ಲ. ನನ್ನನ್ನು ಕ್ರಿಮಿನಲ್ ಆಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ರಾಜಕೀಯ ಇರಲಿ ಬಿಡಲಿ ಸದಾ ಬಡವರ ಪರ ಕಾಳಜಿ ಹೊಂದಿರುವೆ. ಯಾರು ಯಾರನ್ನು ಬೆಳೆಸಲು ಆಗಲ್ಲ ಅವರ ಹಣೆಬರಹ ಚೆನ್ನಾಗಿರಬೇಕು. ರೆಡ್ಡಿ ನಿಮ್ಮ ಎಲ್ಲ ಕ್ರಿಮಿನಲ್ ಕತೆಗಳ ಬಗ್ಗೆ‌ ತಿಳಿದಿದೆ ಸಮಯ ಬಂದ ವೇಳೆ ದಾಖಲೆಗಳನ್ನು ಬಹಿರಂಗಪಡಿಸುವೆ. ಮೊದಲ ಬಾರಿಗೆ ಜೈಲಿನಿಂದ ಹೊರಗಡೆ ಬಂದಾಗ ಜಿಲ್ಲೆಗೆ ಭವ್ಯ ಸ್ವಾಗತದ‌ ಮೂಲಕ‌ ರೆಡ್ಡಿಯನ್ನು ಸ್ವಾಗತಿಸಿದೆ. ಇತ್ತೀಚೆಗೆ ಭೇಟಿ‌‌ ನೀಡಿದಾಗ ನಾನು ಹೋಗಲಿಲ್ಲ. ಆದರೆ, ಅವರೇ ಮಾಧ್ಯಮವರ ಮುಂದೆ‌ ರಾಮುಲುಗೆ ಆರೋಗ್ಯ ಸರಿಯಲ್ಲ ಎಂಬುದಾಗಿ ಸುಳ್ಳು ಹೇಳಿದರು. ಅಲ್ಲಿಂದಲೇ ಇಬ್ಬರಲ್ಲಿ ಭಿನ್ನಭಿಪ್ರಾಯ ಮೂಡಿತು ಎಂದರು.