ನ್ಯೂಸ್

ಒಂದು ಮಗು ಪೋಷಕರ ನೆಚ್ಚಿನ ಮಗುವಾದಾಗ: ಅದು ಇನ್ನೊಂದು ಮಗುವಿನ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತದೆ ಗೊತ್ತಾ? Favorite Child

Favorite Child | ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಚಿಕ್ಕ ಅಥವಾ ದೊಡ್ಡ ಮಕ್ಕಳ ಮೇಲೆ ಪೋಷಕರಿಂದ ವಿಶೇಷ ಪ್ರೀತಿ ಹಾಗೂ ಮಮತೆಯಿರುತ್ತದೆ. ಆ ಮಗು ಏನಾದರೂ ತಪ್ಪು ಮಾಡಿದಾಗಲೂ ಪೋಷಕರು ಅವರನ್ನು ಹೊಡಿಯದೇ, ಬೈಯ್ಯದೆ ಸಮಾಧಾನವಾಗಿಯೇ ಬುದ್ಧಿಮಾತನ್ನು ಹೇಳುತ್ತಾರೆ. ಇಂತಹ ಪ್ರೀತಿ ಮನೆಯಲ್ಲಿ ಎರಡು ಅಥವಾ ಮೂರು ಮಕ್ಕಳಿದ್ದರೆ ಮಾತ್ರ ಕಂಡುಬರುತ್ತದೆ. ತಾಯಿಗೆ ಚಿಕ್ಕ ಮಗನ ಮೇಲೆ ಪ್ರೀತಿ, ತಂದೆಗೆ ಹಿರಿಯ ಮಗಳು ಅಥವಾ ಮಗನ ಮೇಲೆ ಪ್ರೀತಿ ಇರುವುದು ಸಾಮಾನ್ಯ. ಆದರೆ ಒಬ್ಬರ ಮೇಲೆ ತೋರುವ ಈ ರೀತಿಯ ವಿಶೇಷ ಕಾಳಜಿ ಅಥವಾ ಪ್ರೀತಿ ಇನ್ನೊಬ್ಬರ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಆದರೆ ಈ ವಿಷಯಗಳು ಪೋಷಕರಿಗೆ ತಮಾಷೆಯಂತೆ ಕಾಣಿಸಬಹುದು. ಹಾಗಿದ್ದರೆ ಇದು ಮಕ್ಕಳ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತದೆ ಎಂದರೆ ನಿಮಗೆ ಭಯವಾಗುವುದು ಖಂಡಿತ!

ಪೋಷಕರಿಂದ ಪ್ರೀತಿಯ ಕೊರತೆ ಅಥವಾ ನಿರ್ಲಕ್ಷ್ಯವು ಮಕ್ಕಳ ಇಡೀ ಜೀವನದ ಮೇಲೆ ಪರಿಣಾಮ ಬೀರಬಹುದು. ಮನುಷ್ಯರು ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳನ್ನು ಪ್ರೀತಿಸುವುದು ಅಥವಾ ಅವರೊಂದಿಗೆ ಬಾಂಧವ್ಯ ಹೊಂದಿರುವುದು ಮಾನವನ ಸ್ವಭಾವ, ನಾವು ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಮಕ್ಕಳ ಪ್ರೀತಿಯ ಪ್ರಶ್ನೆಯಲ್ಲಿ ಇದು ಇರುವುದಿಲ್ಲ. ಮಗು ಏನೇ ಆಗಿರಲಿ, ಅದು ನಿಮ್ಮದು. ಹಾಗಾದ್ರೆ ಪಾಲಕರು ತಮ್ಮ ಮಕ್ಕಳಲ್ಲಿಯೇ ಒಂದು ಮಗುವಿಗಿಂತ ಇನ್ನೊಂದು ಮಗುವನ್ನು ಯಾಕೆ ಹೆಚ್ಚು ಪ್ರತಿಸುತ್ತಾರೆ? ಇದರಿಂದ ಮಕ್ಕಳ ಮೇಲೆ ಬೀರುವ ಪರಿಣಾಮಗಳೇನು? ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಒಂದು ಮಗುವನ್ನು ಇನ್ನೊಂದು ಮಗುವಿಗಿಂತ ಹೆಚ್ಚಾಗಿ ಏಕೆ ಪ್ರೀತಿಸುತ್ತಾರೆ?

ಬುದ್ಧಿವಂತ ಮತ್ತು ಜವಾಬ್ದಾರಿಯುತ ಮಕ್ಕಳು: ಬುದ್ಧಿವಂತರಾಗಿರುವ ಮಕ್ಕಳು, ಪ್ರತಿಯೊಂದು ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ. ಜನರ ನಡುವೆ ಸುಲಭವಾಗಿ ಬೆರೆಯುತ್ತಾರೆ. ಹೀಗಾಗಿ ಅವರಿಗೆ ಪೋಷಕರಿಂದ ಹೆಚ್ಚಿನ ಪ್ರೀತಿ ಸಿಗುತ್ತದೆ.

ಮೊದಲ ಮಗು: ಮನೆಯಲ್ಲಿರುವ ಹಿರಿಯ ಮಕ್ಕಳು ಹೆಚ್ಚಿನ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. ಕಿರಿಯ ಮಗುವು ತನ್ನ ಅಣ್ಣ ಅಥವಾ ತಂಗಿಯನ್ನು ತನಗಿಂತ ಹೆಚ್ಚು ಪ್ರೀತಿಸುತ್ತಾರೆ ಎಂದು ಭಾವಿಸಬಹುದು.

ಲಿಂಗ: ಭಾರತೀಯ ಸಮಾಜದಲ್ಲಿ ಹುಡುಗಿಯರಿಗಿಂತ ಹುಡುಗರಿಗೆ ಹೆಚ್ಚಿನ ಪ್ರೀತಿ ಸಿಗುತ್ತದೆ. ಇಂದಿಗೂ ಸಹ ಅನೇಕ ಕುಟುಂಬಗಳಲ್ಲಿ, ಜನರು ತಮ್ಮ ಮಗುವಾಗಿ ಗಂಡು ಮಗುವನ್ನು ಬಯಸುತ್ತಾರೆ.

ಸ್ವಭಾವ : ಪೋಷಕರ ಅಭಿರುಚಿಗಳನ್ನು ಹೋಲುವ ಮಕ್ಕಳು ಅವರ ಬಗ್ಗೆ ಹೆಚ್ಚು ಬಾಂಧವ್ಯ ಹೊಂದಬಹುದು. ಅಂತಹ ಪರಿಸ್ಥಿತಿಯಲ್ಲಿ, ಇತರ ಮಕ್ಕಳು ಕಡಿಮೆ ಪ್ರೀತಿಯನ್ನು ಅನುಭವಿಸಬಹುದು.

ಅನಾರೋಗ್ಯ ಅಥವಾ ದೌರ್ಬಲ್ಯದಿಂದ ಬಳಲುತ್ತಿರುವ ಮಗು: ಮಗುವೊಂದು ಅನಾರೋಗ್ಯದಿಂದ ಬಳಲುತ್ತಿರುವಾಗ ಅಥವಾ ಬೇರೆ ಯಾವುದಾದರೂ ತೊಂದರೆಯಲ್ಲಿ ಸಿಲುಕಿದಾಗ, ಅವನಿಗೆ ಅಥವಾ ಅವಳಿಗೆ ಹೆಚ್ಚಿನ ಪ್ರೀತಿ ಸಿಗದಿರಬಹುದು.

ಇನ್ನೊಂದು ಮಗುವಿನ ಮೇಲೆ ಯಾವ ಪರಿಣಾಮ ಬೀರುತ್ತದೆ?

ಹೆತ್ತವರು ಒಂದು ಮಗುವಿನ ಮೇಲೆ ಹೆಚ್ಚಿನ ಪ್ರೀತಿ ತೋರಿಸಿದಾಗ, ಇನ್ನೊಂದು ಮಗು ತನ್ನನ್ನು ಕಡೆಗಣಿಸಿದ್ದಾರೆ ಎಂದು ಭಾವಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಅವನ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಆತ್ಮವಿಶ್ವಾಸದ ಕೊರತೆ:

ಒಡಹುಟ್ಟಿದವರ ನಡುವೆ ಅಸೂಯೆ:

ಪೋಷಕರಿಂದ ದೂರವಾಗುವುದು:

ಸಾಮಾಜಿಕ ಜೀವನದ ಮೇಲೆ ಪರಿಣಾಮ:

ಮಾನಸಿಕ ಒತ್ತಡ ಮತ್ತು ಖಿನ್ನತೆ:

ಸೇಡಿನ ಭಾವನೆ:

ತನ್ನನ್ನು ತಾನೇ ದೂಷಿಸಿಕೊಳ್ಳುವುದು:

ಪೋಷಕರಿಗೆ ಏನು ಸಲಹೆ?

ಕಾಲಕಾಲಕ್ಕೆ ನಿಮ್ಮ ನಡವಳಿಕೆಯನ್ನು ನೋಡಿಕೊಳ್ಳಿ. ನೀವು ಯಾವುದೇ ಒಂದು ಮಗುವಿನೊಂದಿಗೆ ತುಂಬಾ ಕಟ್ಟುನಿಟ್ಟಾಗಿ ಅಥವಾ ತುಂಬಾ ಮೃದುವಾಗಿ ವರ್ತಿಸುತ್ತಿದ್ದೀರಾ ಎಂಬುದನ್ನು ತಿಳಿಯಿರಿ. ಇನ್ನೊಂದು ಮಗುವನ್ನು ತನ್ನ ಸಹೋದರ ಅಥವಾ ಸಹೋದರಿಗೆ ಸಹಾಯ ಮಾಡಲು ಕೇಳಿ. ಇದರಿಂದ ಅವರು ಜವಾಬ್ದಾರಿಯುತ ಮತ್ತು ಮುಖ್ಯವೆಂದು ಭಾವಿಸುತ್ತಾರೆ. ತನ್ನ ಅನಾರೋಗ್ಯ ಅಥವಾ ದುರ್ಬಲ ಸಹೋದರ ಅಥವಾ ಸಹೋದರಿಯನ್ನು ನೋಡಿಕೊಳ್ಳುವುದು ಅವನ ದೊಡ್ಡ ಜವಾಬ್ದಾರಿ ಎಂದು ಅವನಿಗೆ ವಿವರಿಸಿ. ಈ ರೀತಿಯಾಗಿ ಇಬ್ಬರ ಮೇಲೆಯೂ ಸಮನಾದ ಪ್ರೀತಿ, ಕಾಳಜಿಯೂ ಅವರ ಜೀವನದ ಮೇಲೆ ಉತ್ತಮ ಪರಿಣಾಮ ಬೀರಬಹುದಾಗಿದೆ. (ಏಜೆನ್ಸೀಸ್​)