ಆಂಧ್ರಪ್ರದೇಶ: ಈ ಹಿಂದೆ ಹೊಂಬಾಳೆ ಫಿಲಂಸ್ ಘೋಷಿಸಿದ್ದ 'ಸಲಾರ್' ರಿಲೀಸ್ ದಿನಾಂಕದಲ್ಲಿ ಬದಲಾವಣೆ ಕೇಳಿಬಂದಿತ್ತು. ಚಿತ್ರದ ವಿಎಫ್ಎಕ್ಸ್ ಕೆಲಸಗಳ ರಿ-ವರ್ಕ್ಗಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಿದ ಚಿತ್ರತಂಡ, ಇದೀಗ ಸಿನಿಮಾವನ್ನು ಯಾವ ದಿನದಂದು ಬಿಡುಗಡೆಗೊಳಿಸಲಿದೆ ಎಂಬ ಗೊಂದಲ ಸಿನಿಪ್ರೇಕ್ಷಕರಲ್ಲಿ ಮೂಡಿದೆ.
ಮುಂಚಿತವಾಗಿಯೇ ತಿಳಿಸಿದಂತೆ 'ಸಲಾರ್' ಸೆಪ್ಟೆಂಬರ್ 28, 2023 ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿತ್ತು. ಆದ್ರೆ, ಚಿತ್ರದ ವಿಎಫ್ಎಕ್ಸ್ ಕೆಲಸಗಳಲ್ಲಿ ಮತ್ತಷ್ಟು ಬದಲಾವಣೆ ಕಂಡ ನಿರ್ದೇಶಕ ಪ್ರಶಾಂತ್ ನೀಲ್, ಇದೀಗ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಿದ್ದಾರೆ.
ಸಿನಿಮಾ ಸೆ.28 ರಂದು ಬಿಡುಗಡೆಯಾಗುವುದು ಅನುಮಾನ ಎಂಬುದು ತಿಳಿದರೂ, ಮುಂದೆ ಯಾವ ದಿನಾಂಕದಂದು ಚಿತ್ರ ತೆರೆ ಕಾಣಲಿದೆ ಎಂಬ ಪ್ರಶ್ನೆಯನ್ನು ಸದ್ಯ ಪ್ರಭಾಸ್ ಅಭಿಮಾನಿಗಳು ಚಿತ್ರತಂಡದ ಮುಂದಿಟ್ಟಿದ್ದಾರೆ.
ಇದನ್ನೂ ಓದಿ: G20 Summit 2023:ಜಿ 20ನಲ್ಲಿ ಕ್ಸಿ ಜಿನ್ಪಿಂಗ್ ಅನುಪಸ್ಥಿತಿಗೆ ಕಾರಣವನ್ನು ಚೀನಾ ವಿವರಿಸಲಿ: ಅಮೆರಿಕದ ಅಧಿಕಾರಿ
ವದಂತಿಗಳ ಪ್ರಕಾರ, 2024ರ ಸಂಕ್ರಾಂತಿ ಹಬ್ಬಕ್ಕೆ 'ಸಲಾರ್' ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡಿದೆ. ಆದ್ರೆ, ಇತ್ತೀಚಿನ ವರದಿಗಳು ನೀಡಿರುವ ಮಾಹಿತಿ ಅನುಸಾರ, ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುವುದಿಲ್ಲ. ಚಿತ್ರವು 2023 ರೊಳಗೆ ರಿಲೀಸ್ ಆಗುವುದು ಖಚಿತ ಎಂದು ನಿರ್ಮಾಪಕರು ಸ್ಪಷ್ಟಪಡಿಸಿರುವುದು ಮುನ್ನೆಲೆಗೆ ಬಂದಿದೆ. ಸದ್ಯ ಈ ಸಂಗತಿ ಪ್ರಭಾಸ್ ಅಭಿಮಾನಿಗಳಿಗೆ ನಿಟ್ಟುಸಿರು ಬಿಡುವಂತಾಗಿದೆ.
'ಸಲಾರ್' ಬಿಡುಗಡೆಯ ನಿರೀಕ್ಷೆಯಲ್ಲಿರುವ ಫ್ಯಾನ್ಸ್ಗೆ ಶೀಘ್ರದಲ್ಲೇ ಚಿತ್ರದ ಹೊಸ ರಿಲೀಸ್ ದಿನಾಂಕದ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಘೋಷಿಸಲಿದೆ. ಚಿತ್ರದಲ್ಲಿ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ನಟಿ ಶ್ರುತಿ ಹಾಸನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಮೀನಾಕ್ಷಿ ಚೌಧರಿ, ಸರಣ್ ಶಕ್ತಿ, ಈಶ್ವರಿ ರಾವ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).