ಇತ್ತೀಚಿನ ದಿನಗಳಲ್ಲಿ ಬಹುತೇಕ ಪ್ರತಿಯೊಬ್ಬರೂ ಬಳಸುವ ಅತ್ಯಂತ ಜನಪ್ರಿಯ ಅಪ್ಲಿಕೇಶನ್ WhatsApp.ಬಳಕೆದಾರರ ಅನುಭವವನ್ನು ಹೆಚ್ಚಿಸಲು WhatsApp ಹಲವು ಹೊಸ ವೈಶಿಷ್ಟ್ಯಗಳನ್ನು ತರುತ್ತಿದೆ. ಹಲವು ವರ್ಷಗಳಿಂದ ವಾಟ್ಸಾಪ್ ನಲ್ಲಿ ಬ್ಲರ್ ಫೋಟೋ ಶೇರಿಂಗ್ ಸಮಸ್ಯೆ ಎದುರಾಗುತ್ತಿತ್ತು. ಇದೀಗ ಈ ಸಮಸ್ಯೆಗೂ ಕಂಪನಿ ಪರಿಹಾರ ಕಂಡುಕೊಂಡಿದೆ.
ವಾಟ್ಸ್ಆ್ಯಪ್ನ ಈ ಹೊಸ ಫೀಚರ್ ಬಳಕೆದಾರರು HD (2000x3000 ಪಿಕ್ಸೆಲ್‌ಗಳು) ಅಥವಾ ಸ್ಟ್ಯಾಂಡರ್ಡ್ (1365x2048 ಪಿಕ್ಸೆಲ್‌ಗಳು) ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡುತ್ತದೆ. ಇದು ಇಂಟರ್ನೆಟ್ ವೇಗದ ಮೇಲೆ ಅವಲಂಬಿಸಿದೆ.
ವಾಟ್ಸ್ಆ್ಯಪ್ ಶೀಘ್ರದಲ್ಲೇ ಬಳಕೆದಾರರಿಗೆ HD ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡುತ್ತದೆ ಎಂದು ಮೆಟಾ-ಮಾಲೀಕತ್ವದ ಮೆಸೇಜಿಂಗ್ ಕಂಪನಿಯು ಘೋಷಿಸಿದೆ. ವಾಟ್ಸ್ಆ್ಯಪ್ನ ಈ ಹೊಸ ಫೀಚರ್, ಬಳಕೆದಾರರು HD (2000×3000 ಪಿಕ್ಸೆಲ್‌ಗಳು) ಅಥವಾ ಸ್ಟ್ಯಾಂಡರ್ಡ್ (1365×2048 ಪಿಕ್ಸೆಲ್‌ಗಳು) ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡುತ್ತದೆ. ಇದು ಇಂಟರ್ನೆಟ್ ವೇಗದ ಮೇಲೆ ಅವಲಂಬಿಸಿದೆ.
ಇಂಟರ್ನೆಟ್ ನಿಧಾನವಾಗಿದ್ದರೆ HD ನಲ್ಲಿರುವ ಫೋಟೋಗಳನ್ನು ಕಳುಹಿಸಲು ಅಥವಾ ಲೋಡ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ HD ಫೋಟೋಗಳು ಹೆಚ್ಚು ಎಮ್ಬಿಯಿಂದ ಕೂಡಿರುತ್ತದೆ.
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೂಡ ಫೇಸ್‌ಬುಕ್‌ನಲ್ಲಿ ಈ ಹೊಸ ಅಪ್ಡೇಟ್ ಬಗ್ಗೆ ಹಂಚಿಕೊಂಡಿದ್ದಾರೆ. “ವಾಟ್ಸ್ಆ್ಯಪ್ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದು ಇದೀಗ ಅಪ್‌ಗ್ರೇಡ್ ಆಗಿದೆ. ಈಗ ನೀವು HD ನಲ್ಲಿ ಫೋಟೋ ಕಳುಹಿಸಬಹುದು,” ಎಂದು ಬರೆದುಕೊಂಡಿದ್ದಾರೆ.