ನ್ಯೂಸ್

ವಾಟ್ಸ್​ಆ್ಯಪ್​​ ಬಳಕೆದಾರರಿಗೆ ಗುಡ್​ ನ್ಯೂಸ್: ಸ್ಟೇಟಸ್​ ಅವಧಿ ಮಿತಿಯಲ್ಲಿ ಏರಿಕೆ...!​

ನವದೆಹಲಿ: ಭಾರತದ ವಾಟ್ಸ್​ಆ್ಯಪ್​​ ಬಳಕೆದಾರರಿಗೆ ಗುಡ್​ ನ್ಯೂಸ್​ ಕೇಳಿಬಂದಿದೆ. ಎರಡು ತಿಂಗಳ ಕಾಲಾವಾಕಾಶದ ನಂತರ ಸಾಮಾಜಿಕ ಸಂದೇಶ ರವಾನೆ ವೇದಿಕೆ (ಸೋಶಿಯಲ್​ ಮೆಸೆಂಜಿಂಗ್​ ಫ್ಲಾಟ್​ಫಾರ್ಮ್​) ವ್ಯಾಟ್ಸ್​ಆ್ಯಪ್​ ಭಾರತದಲ್ಲಿನ ಸ್ಟೇಟಸ್ ಅವಧಿಯ ಮಿತಿಯನ್ನು 15 ರಿಂದ ಮತ್ತೆ 30 ಸೆಕೆಂಡ್​ಗಳಿಗೆ ಮರು ಏರಿಕೆ ಮಾಡಿದೆ. ಆಂಡ್ರಾಯ್ಡ್​ ಆವೃತ್ತಿ 2.20.166 ಅಪ್ಡೇಟೆಡ್​ ವರ್ಸನ್​ನಲ್ಲಿ ಈ ಫೀಚರ್​ ಲಭ್ಯವಾಗಲಿದೆ.

ಸ್ಟೇಟ್​ ಫೀಚರ್​ ಅನ್ನು 2017ರಲ್ಲಿ ವಾಟ್ಸ್​ಆ್ಯಪ್​ ಪರಿಚಯಿಸಿತು. ಈ ಹೊಸ ಫೀಚರ್​ ಮೂಲಕ ಫೋಟೋ, ವಿಡಿಯೋಗಳು ಮತ್ತು ಜಿಐಎಫ್​ (GIFs) ಫೈಲ್​ಗಳನ್ನು ಅಪ್​ಲೋಡ್​ ಮಾಡಲು ಅವಕಾಶ ನೀಡಲಾಯಿತು. ಅಪ್​ಲೋಡ್​ ಮಾಡಿದ ಫೈಲ್​ಗಳು 24 ಗಂಟೆಗಳ ನಂತರ ತನ್ನಷ್ಟಕ್ಕೆ ತಾನೇ ಮರೆಯಾಗುತ್ತವೆ. ಅಲ್ಲಿಯವರೆಗೆ ಬಳಕೆದಾರನ ಸಂಪರ್ಕದಲ್ಲಿರುವವರಿಗೆ ಸ್ಟೇಟಸ್​ ಗೋಚರವಾಗುತ್ತದೆ.

ಫೀಚರ್​ ಪರಿಚಯಿಸಿದ ಆರಂಭದಲ್ಲಿ ಮೂರು ನಿಮಿಷದ ವಿಡಿಯೋಗಳಿಗೆ 90 ಸೆಕೆಂಡ್​ ಅವಧಿ ನೀಡಲಾಗಿತ್ತು. ಅಲ್ಲದೆ, ಅಪ್​ಲೋಡ್​ ಮಾಡುವ ಫೈಲ್​ 16 ಎಂಬಿಗಿಂತ ಜಾಸ್ತಿ ಇದ್ದರೆ, ಅದನ್ನು ಎಡಿಟ್​ ಮಾಡಿ ಸ್ಟೇಟಸ್​ಗೆ ಕಳುಹಿಸುವ ಅವಕಾಶ ನೀಡಿತ್ತು. ಆ ಬಳಿಕ ಸ್ಟೇಟಸ್​ ಅನ್ನು 30 ಸೆಕೆಂಡ್​ಗೆ ಇಳಿಸಲಾಗಿತ್ತು.

ವಾಟ್ಸ್​ಆ್ಯಪ್​ನಲ್ಲಿ ಹರಿದಾಡುತ್ತಿದ್ದ ನಕಲಿ ಸುದ್ದಿಗಳನ್ನು ನಿಯಂತ್ರಣಕ್ಕೆ ತರಲು ಮತ್ತು ಸರ್ವರ್​ ದಟ್ಟನೆಯನ್ನು ಕಡಿಮೆ ಮಾಡಲು ಫೀಚರ್​ ಅವಧಿಯನ್ನು ಭಾರತದಲ್ಲಿ 30 ಸೆಕೆಂಡ್​ನಿಂದ 15ಕ್ಕೆ ಕೆಲ ತಿಂಗಳುಗಳಿಂದ ಇಳಿಸಲಾಗಿತ್ತು. ಇದೀಗ ಮರಳಿ 30 ಸೆಕೆಂಡ್​ಗೆ ಏರಿಸಲಾಗಿದೆ.

ವಾಬೇಟಾಇನ್​ಫೋ ನೀಡಿರುವ ಮಾಹಿತಿಯ ಪ್ರಕಾರ ಆಂಡ್ರಾಯ್ಡ್​ ಆವೃತ್ತಿ 2.20.166 ಅಪ್ಡೇಟೆಡ್​ ವರ್ಸನ್​ನಲ್ಲಿ ಈ ಫೀಚರ್​ ಲಭ್ಯವಾಗಲಿದ್ದು, ನೀವು ಆದಷ್ಟು ಬೇಗೆ ಫೀಚರ್​ ಪಡೆಯಬೇಕಾದರೆ ನಿಮ್ಮ ವಾಟ್ಸ್​ಆ್ಯಪ್​ಗಳನ್ನು ಆದಷ್ಟು ಬೇಗ ಅಪ್ಡೇಟ್​ ಮಾಡಿಕೊಳ್ಳಲು ಸೂಚಿಸಿದೆ. (ಏಜೆನ್ಸೀಸ್​)