ಮೆಟಾ ಪರಿಚಯಿಸಲಿರುವ ಈ ಹೊಸ ವೈಶಿಷ್ಟ್ಯದ ಮೂಲಕ ಒಂದು ವಾಟ್ಸ್ಆ್ಯಪ್ ಅಪ್ಲಿಕೇಶನ್‌ನಲ್ಲಿ ಅನೇಕ ವಾಟ್ಸ್ಆ್ಯಪ್ ಖಾತೆಗಳನ್ನು ಸ್ವಿಚ್ ರೀತಿಯಲ್ಲಿ ತೆರೆಯಬಹುದು. ಈಗಾಗಲೇ ಈ ಆಯ್ಕೆ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಇದೆ. ಶೀಘ್ರದಲ್ಲೇ ವಾಟ್ಸ್ಆ್ಯಪ್ ತನ್ನ ಬಳಕೆದಾರರ ಈ ಆಯ್ಕೆಯನ್ನು ನೀಡಲಿದೆ.
ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಅನುಕೂಲಕ್ಕೆ ತಕ್ಕಂತೆ ಹೊಸದಾದ ಫೀಚರ್ಗಳನ್ನ ಪರಿಚಯಿಸುತ್ತಿದೆ. ಇನ್ನುಂದೆ ನಿಮಗೆ ಈ ಹೊಸ ವೈಶಿಷ್ಟ್ಯದ ಮೂಲಕ ಒಂದೇ ವಾಟ್ಸ್ಆ್ಯಪ್ನಲ್ಲಿ ವಿಭಿನ್ನ ಖಾತೆಗಳನ್ನು ಬಳಸಬಹುದಾಗಿದೆ.
ವಾಟ್ಸ್ಆ್ಯಪ್ ತನ್ನ ಬಳಕೆದಾರರ ಈ ಆಯ್ಕೆಯನ್ನು ನೀಡಲಿದೆ ಎಂದು ವರದಿ ಆಗಿದೆ. ಸುಲಭವಾಗಿ ಹೇಳಬೇಕೆಂದರೆ, ಈ ಹೊಸ ವೈಶಿಷ್ಟ್ಯದ ಮೂಲಕ ಒಂದು ವಾಟ್ಸ್ಆ್ಯಪ್ ಅಪ್ಲಿಕೇಶನ್‌ನಲ್ಲಿ ಅನೇಕ ವಾಟ್ಸ್ಆ್ಯಪ್ ಖಾತೆಗಳನ್ನು ಸ್ವಿಚ್ ರೀತಿಯಲ್ಲಿ ತೆರೆಯಬಹುದು.
ಆಂಡ್ರಾಯ್ಡ್ ಆವೃತ್ತಿ 2.23.17.8 ಗಾಗಿ ವಾಟ್ಸ್ಆ್ಯಪ್ ಬೀಟಾವನ್ನು ಅಪ್‌ಡೇಟ್ ಮಾಡಿದರೆ ಈ ಆಯ್ಕೆ ಸಿಗಲಿದೆ. ಆದಾಗ್ಯೂ ಕೆಲವು ಬಳಕೆದಾರರಿಗೆ ಹಿಂದಿನ 2.23.17.7 ಆವೃತ್ತಿಯಲ್ಲಿ ಈ ವೈಶಿಷ್ಟ್ಯವನ್ನು ಉಪಯೋಗಿಸಲು ಸಾಧ್ಯವಾಗುತ್ತಿದೆ.
ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಬಹು ಖಾತೆಗಳನ್ನು ನಿರ್ವಹಿಸುವ ಅನುಕೂಲವನ್ನು ಒದಗಿಸುವುದಲ್ಲದೆ, ಒಂದೇ ಅಪ್ಲಿಕೇಶನ್‌ನಲ್ಲಿ ಖಾಸಗಿ ಚಾಟ್‌ಗಳು, ಕೆಲಸದ ಸಂಭಾಷಣೆಗಳು ಮತ್ತು ಇತರ ಸಂದೇಶಗಳಿಗೆ ಸಹಾಯ ಮಾಡುತ್ತದೆ.