ನ್ಯೂಸ್

ಯೂಟ್ಯೂಬ್ ಹಳೆ ನಿಯಮ ಏನಿತ್ತು? ಬದಲಾವಣೆ ಬೆನ್ನಲ್ಲೇ ವಿಡಿಯೋ ಕ್ರಿಯೇಟರ್ಸ್​ಗಳಿಗೆ ತಲೆಬಿಸಿ! YouTube

ಮೋಹನ್​ ಶೆಟ್ಟಿ

Youtube Rules: ಯೂಟ್ಯೂಬ್ ತನ್ನ ಬಳಕೆದಾರರ ಲಾಭ ಗಳಿಕೆಯ ನಿಯಮಗಳಲ್ಲಿ ದೊಡ್ಡ ಬದಲಾವಣೆಗಳನ್ನು ತಂದಿದ್ದು, ಈ ಹೊಸ ನಿಯಮಗಳು ಇದೇ ಜುಲೈ 15ರಿಂದ ಜಾರಿಗೆ ಬರಲಿವೆ ಎಂದು ಸ್ಪಷ್ಟಪಡಿಸಿದೆ. ಕೃತಕ ಬುದ್ಧಿಮತ್ತೇ ವಿಷಯವನ್ನು ಪ್ರಕಟಿಸುವ ಮತ್ತು ವಿಷಯವನ್ನು ನಕಲಿಸುವ ಯೂಟ್ಯೂಬ್ ಚಾನಲ್‌ಗಳ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ. ಇಂತಹ ವಿಡಿಯೋಗಳನ್ನು ಹೊಂದಿರುವ ಚಾನಲ್​ಗಳಿಗೆ ಕಠಿಣ ನಿರ್ಬಂಧ ಹೇರಲು ಯೂಟ್ಯೂಬ್ ಸಜ್ಜಾಗಿದೆ.

ಏನು ಹೊಸ ನಿಯಮಗಳು?

ಜುಲೈ 15, 2025ರಿಂದ, ಒಂದೇ ವಿಡಿಯೊವನ್ನು ಪದೇ ಪದೇ ಅಪ್‌ಲೋಡ್ ಮಾಡುವವರು ಅಥವಾ ಬೇರೆಯವರು ಈಗಾಗಲೇ ಪಬ್ಲಿಶ್​ ಮಾಡಿರುವ ವಿಡಿಯೊವನ್ನು ಪೋಸ್ಟ್ ಮಾಡುವವರು ಇನ್ಮುಂದೆ ಯುಟ್ಯೂಬ್​ನಿಂದ ಹಣವನ್ನು ಪಡೆಯುವುದಿಲ್ಲ. ಇದಲ್ಲದೆ, ಆ ಚಾನಲ್‌ನ ಹಣ ಗಳಿಕೆಯೂ ಬಂದ್ ಆಗಲಿದೆ.

ಪ್ಲಾಟ್‌ಫಾರ್ಮ್‌ಗೆ ಅಪ್‌ಲೋಡ್ ಮಾಡಲಾದ ವಿಡಿಯೊಗಳ ಗುಣಮಟ್ಟವನ್ನು ಸುಧಾರಿಸಲು ಯೂಟ್ಯೂಬ್ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ರೀತಿಯಾಗಿ, ಯೂಟ್ಯೂಬ್ ತನ್ನ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುತ್ತಿದೆ. ಇದು ಕ್ರಿಯೇಟರ್ಸ್​ ಶ್ರಮ ಉಳಿಸಿಕೊಳ್ಳುವುದು ಮತ್ತು ಪ್ಲಾಟ್‌ಫಾರ್ಮ್‌ನ ದುರುಪಯೋಗಪಡಿಸಿಕೊಳ್ಳುವ ಚಾನಲ್‌ಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಮೂಲ ಉದ್ದೇಶವಾಗಿದೆ.

ಹಳೆಯ ನಿಯಮ ಏನಿತ್ತು?

ಈ ಹಿಂದೆ ಯೂಟ್ಯೂಬ್​ನಲ್ಲಿ ಹಣ ಗಳಿಸಲು, ಒಂದು ವರ್ಷಕ್ಕೆ 1,000 ಚಂದಾದಾರರನ್ನು ಮತ್ತು 4,000 ಗಂಟೆಗಳ ವಿಡಿಯೊವನ್ನು ಹೊಂದಿರಬೇಕಿತ್ತು. ಕಳೆದ 90 ದಿನಗಳಲ್ಲಿ 10 ಮಿಲಿಯನ್ ವೀಕ್ಷಣೆಗಳನ್ನು ಪಡೆಯಲು ಕಿರು ವಿಡಿಯೊಗಳ ಅಗತ್ಯವಿತ್ತು. ಇದನ್ನು ಪೂರ್ಣಗೊಳಿಸಿದ ಚಾನಲ್‌ಗಳು ಮಾತ್ರ ಲಾಭ ಕಾಣಲು ಅರ್ಹತೆ ಪಡೆಯುತ್ತಿತ್ತು.

ಇದೆಲ್ಲಕ್ಕಿಂತ ಹೆಚ್ಚಾಗಿ ನಕಲು, ಕಾಪಿ ಪೇಸ್ಟ್​ ಅಥವಾ ಎಐ ವಿಷಯವನ್ನು ಬಳಸಿಕೊಳ್ಳಲು ಅವಕಾಶವಿತ್ತು. ಹಳೆಯ ವಿಡಿಯೊಗಳನ್ನು ಮತ್ತೆ ಮತ್ತೆ ಮರುಪೋಸ್ಟ್ ಮಾಡಬಹುದಿತ್ತು. ಇದು ಲಕ್ಷಾಂತರ ವಿಡಿಯೋ ಕ್ರಿಯೇಟರ್​​ಗಳಿಗೆ ದುಪ್ಪಟ್ಟು ಆದಾಯವನ್ನೇ ತಂದುಕೊಟ್ಟಿದೆ. ಆದರೆ, ಯೂಟ್ಯೂಬ್​ ಈಗ ಜಾರಿಗೊಳಿಸಿರುವ ಕಟ್ಟುನಿಟ್ಟಿನ ನಿಯಮಗಳು ಅಂತಹ ಚಾನಲ್‌ಗಳಿಗೆ ಇನ್ನು ಮುಂದೆ ಸುಲಭವಾಗಿ ಹಣ ಗಳಿಸಲು ಅವಕಾಶ ನೀಡುವುದಿಲ್ಲ,(ಏಜೆನ್ಸೀಸ್).