ಬೆಂಗಳೂರು: ತುಂಬಾ ದಿನಗಳ ಬಳಿಕ ರೂಮ್ನಿಂದ ಹೊರಗೆ ಬಂದಿರುವ ನಟಿ ಮಲೈಕಾ ಅರೋರಾ ಈಗ ತಮ್ಮ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.
"ಕೊನೆಗೂ ನಾನು ಬಹಳ ದಿನಗಳ ಬಳಿಕ ನನ್ನ ರೂಮ್ನಿಂದ ಹೊರಗೆ ಬಂದಿದ್ದೇನೆ. ಈಗ ನನಗೆ ಎಲ್ಲೋ ಔಟಿಂಗ್ ಹೋದಂತೆ ಅನಿಸುತ್ತಿದೆ" ಎಂದು ನಟಿ ಮಲೈಕಾ ಕಳೆದ ಕೆಲವು ದಿನಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
"ಅಂತೂ ಮಿನಿಮಮ್ ಪೇನ್ ಮತ್ತು ಡಿಸ್ಕಂಫರ್ಟ್ನಲ್ಲೇ ನಾನು ಈ ಕರೊನಾ ಸೋಂಕಿನಿಂದ ಹೊರಬಂದೆ. ಸುಲಭದಲ್ಲಿ ಸೋಂಕುಮುಕ್ತಳಾಗಿ ನಿರಾಳ ಆಗುವಂತೆ ಮಾಡಿದ ನನ್ನ ಎಲ್ಲ ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದಗಳು" ಎಂದು ಅವರು ಥ್ಯಾಂಕ್ಸ್ ಹೇಳಿದ್ದಾರೆ. ಜೊತೆಗೆ "ಸೋಂಕಿನಿಂದ ಹೊರಬರುವಲ್ಲಿ ಸ್ನೇಹಿತರು, ನೆರೆಹೊರೆಯವರು ಹಾಗೂ ಅಭಿಮಾನಿಗಳ ಸಹಕಾರ-ಹಾರೈಕೆಗಳೂ ನೆರವಾಗಿವೆ" ಎಂದು ಮಲೈಕಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.