ನ್ಯೂಸ್

5 ಸ್ಟಾರ್ ಹೋಟೆಲ್ ಹಾಗೂ 7 ಸ್ಟಾರ್ ಹೋಟೆಲ್​ಗೂ ಇರುವ ವ್ಯತ್ಯಾಸವೇನು? ಬಹುತೇಕ ಜನರಿಗೆ ಈ ವಿಷಯ ಗೊತ್ತಿಲ್ಲ|hotels

hotels; ಭಾರತದಲ್ಲಿ ಬಹುತೇಕ ದೊಡ್ಡ ಉದ್ಯಮಗಳಲ್ಲಿ ಈ ಹೋಟೆಲ್​ ಉದ್ಯಮ ಕೂಡ ಒಂದಾಗಿದೆ. ಅತ್ಯಂತ ಕೆಳಮಟ್ಟದ ವ್ಯಕ್ತಿಯಿಂದ ಹಿಡಿದು, ಶ್ರೀಮಂತರ ವರೆಗೂ ಸಹ ಈ ಹೋಟೆಲ್​ಗಳಿಗೆ ಭೇಟಿ ನೀಡಿರುತ್ತಾರೆ. ಆದರೆ ಒಬ್ಬೊಬ್ಬರ ಆರ್ಥಿಕತೆಗೆ ತಕ್ಕಂತೆ ಅವರು ಭೇಟಿ ನೀಡುವ ಹೋಟೆಲ್​ಗಳಲ್ಲಿ ಬದಲಾವಣೆ ಕಂಡುಬರುತ್ತದೆ.

5 ಸ್ಟಾರ್​ಗಳಿಗೆ ಹೋಲಿಸಿದರೆ, ಈ ಹೋಟೇಲ್​ಗಳು ವಿಶಾಲವಾದ ಕೊಠಡಿಗಳು, ಪ್ರೀಮಿಯಂ ಪೀಠೋಪಕರಣಗಳನ್ನು ಒಳಗೊಂಡಿರುತ್ತವೆ. ಅದೇ ರೀತಿ ಟಿವಿ, ಬಾರ್, ವೈ-ಫೈ ಸೇರಿದಂತೆ ಕಣ್ಣಿಗೆ ಆಕರ್ಷಣೀಯವಾಗುವಂತೆ ಇಲ್ಲಿನ ವಿನ್ಯಾಸ ಇರುತ್ತದೆ. ಇವೆಲ್ಲವುಗಳನ್ನೂ ನಿಮಗೆ ಐಷಾರಾಮಿ ಅನುಭವ ನೀಡುವ ಜೊತೆಗೆ ಆರಾಮದಾಯಕ ಕ್ಷಣವನ್ನು ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿರುತ್ತದೆ.

ದೊಡ್ಡ ಹೋಟೆಲ್‌ಗಳನ್ನು ಅವುಗಳ ಐಷಾರಾಮಿ ಸೌಕರ್ಯ, ಬೆರಗುಗೊಳಿಸುವ ವಿಭಿನ್ನ ವಿನ್ಯಾಸ ಹಾಗೂ ವಿಶೇಷ ಸೇವೆಯಿಂದಾಗಿ ಅವುಗಳನ್ನು 7ಸ್ಟಾರ್​ ಎಂದು ಕರೆಯಲಾಗುತ್ತದೆ. ಈ ಹೋಟೆಲ್​ಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಪಡೆದಿರುತ್ತವೆ. ಇನ್ನೂ ಈ 5 ಸ್ಟಾರ್ ಹೋಟೆಲ್‌ಗಳು ಸಾಮಾನ್ಯವಾಗಿ ಸ್ಪಾ, ಜಿಮ್, ಈಜುಕೊಳ ಇತ್ಯಾದಿ ಸೌಲಭ್ಯಗಳನ್ನು ಹೊಂದಿರುತ್ತವೆ. ಆದರೆ 7 ಸ್ಟಾರ್ ಹೋಟೆಲ್‌ಗಳು ಇವುಗಳು ಜೊತೆಗೆ ವಿಶ್ವಪ್ರಸಿದ್ಧ ಬಾಣಸಿಗರು ಬೇಯಿಸಿದ ವಿಶೇಷ ಅಡುಗೆಗಳು, ಕೆಲವೊಮ್ಮೆ ಹೋಟೆಲ್ ಮಿನಿ ಥಿಯೇಟರ್, ಕಲಾ ಗ್ಯಾಲರಿಗಳು ಮತ್ತು ಐಷಾರಾಮಿ ಶಾಪಿಂಗ್ ಪ್ರದೇಶಗಳನ್ನು ಸಹ ಹೊಂದಿರುತ್ತದೆ.

ರಜೆ, ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವಾಗ ಮೊದಲು ನಮ್ಮ ಮನಸ್ಸಿಗೆ ಬರುವುದೇ ಈ ಹೋಟೆಲ್​ಗಳು. ಇಲ್ಲಿ ನೀಡಲಾಗುವ ಊಟ, ಕೊಠಡಿ, ವಸತಿ ಮತ್ತು ಇತರ ಸೇವೆಯು ನಮ್ಮ ಅನುಭವವನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಈ ಹೋಟೆಲ್​ಗಳು 1 ಸ್ಟಾರ್ 5ಸ್ಟಾರ್​​ನಿಂದ ಹಿಡಿದು 7 ಸ್ಟಾರ್​ಗಳ ರೇಟಿಂಗ್​ಅನ್ನು ಹೊಂದಿರುತ್ತವೆ.

(ಏಜೆನ್ಸೀಸ್)

ಹಾಗಾಗಿ ನೀವು 5 ಸ್ಟಾರ್ ಹೋಟೆಲ್‌ನಲ್ಲಿ ಐಷಾರಾಮಿಯಾಗಿ ಆನಂದಿಸಬಹುದು. ಆದರೆ 7 ಸ್ಟಾರ್ ಹೋಟೆಲ್‌ನಲ್ಲಿ ನೀವು ರಾಜಮನೆತನದ ಜೀವನವನ್ನು ನಡೆಸುತ್ತಿರುವಂತೆ ಭಾಸವಾಗುತ್ತದೆ. ಈ 7 ಸ್ಟಾರ್ ಹೋಟೆಲ್‌ಗಳಲ್ಲಿ ರೋಲ್ಸ್ ರಾಯ್ಸ್ ಕಾರುಗಳು, ಖಾಸಗಿ ಹೆಲಿಪ್ಯಾಡ್ ಸೌಲಭ್ಯ ಮತ್ತು ಅತಿಥಿಗಳಿಗಾಗಿ ಖಾಸಗಿ ದೋಣಿ ಸೇವೆಗಳನ್ನು ಸಹ ಒದಗಿಸಲಾಗಿರುತ್ತದೆ.

ಎಷ್ಟೋ ಜನ 5ಸ್ಟಾರ್​ ಹೋಟೆಲ್​ ಹಾಗೂ 7ಸ್ಟಾರ್​ ಹೋಟೆಲ್​ಗಳು ಬಹುತೇಕ ಒಂದೇ ರೀತಿ ಇರುತ್ತವೆ ಎಂದು ಭಾವಿಸುತ್ತಾರೆ. ಆದರೆ 7 ಸ್ಟಾರ್ ಹೋಟೆಲ್‌ಗಳಲ್ಲಿ ಪ್ರತಿಯೊಂದು ಕೋಣೆಯನ್ನು ರಾಜಮನೆತನದ ಅರಮನೆಯಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಕೊಠಡಿಗಳು ಚಿನ್ನ ಮತ್ತು ಬೆಳ್ಳಿಯಂತೆ ಕಾಣುವ ಅಲಂಕಾರಿಕಾ ವಸ್ತುಗಳಿಂದ ಕಂಗೊಳಿಸುತ್ತದೆ. 7 ಸ್ಟಾರ್ ಹೋಟೆಲ್‌ನಲ್ಲಿ ಪ್ರತಿಯೊಬ್ಬ ಅತಿಥಿಗೂ ಒಬ್ಬ ವೈಯಕ್ತಿಕ ಸಹಾಯಕನನ್ನು ನೇಮಿಸಲಾಗಿರುತ್ತದೆ.