ನ್ಯೂಸ್

ಈ ದಿನಾಂಕಗಳಂದು ಜನಿಸಿದವರು ಕಿರೀಟವಿಲ್ಲದಿದ್ದರೂ ತಮ್ಮ ಜೀವನದುದ್ದಕ್ಕೂ ರಾಜರಂತೆ ಬದುಕುತ್ತಾರಂತೆ! Numerology

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಸಂಖ್ಯೆಗಳು ನಮ್ಮ ಜೀವನದ ಎಲ್ಲ ವಿಷಯಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ. ಅಲ್ಲದೆ, ಈ ಸಂಖ್ಯೆಗಳು ನೈಸರ್ಗಿಕವಾಗಿ ವಿಶ್ವದಲ್ಲಿ ವಿಶಿಷ್ಟ ಶಕ್ತಿಯನ್ನು ಹೊಂದಿದ್ದು, ಯಾರನ್ನಾದರೂ ಮೇಲಕ್ಕೇರಿಸಬಹುದು ಮತ್ತು ಕೆಳಗಿಳಿಸಬಹುದು.

ಅಂದಹಾಗೆ ಸಂಖ್ಯಾಶಾಸ್ತ್ರವು ವ್ಯಕ್ತಿಯ ಹೆಸರು, ಆತನ ಹುಟ್ಟಿದ ದಿನಾಂಕ, ತಿಂಗಳು, ವರ್ಷದ ಆಧಾರದ ಮೇಲೆ ಅವರ ಭವಿಷ್ಯದ ಜೀವನ ಹೇಗಿರುತ್ತದೆ ಎಂದು ಊಹಿಸುವ ವಿಜ್ಞಾನವಾಗಿದೆ. ಈ ಸಂಖ್ಯಾಶಾಸ್ತ್ರವನ್ನು ರಾಡಿಕ್ಸ್ ಸಂಖ್ಯೆಗಳ ಆಧಾರದ ಮೇಲೆ ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಬ್ಬ 24ನೇ ತಾರೀಖಿನಂದು ಜನಿಸಿದರೆ ಆತನ ರಾಡಿಕ್ಸ್​ ಸಂಖ್ಯೆ 2+4= 6 ಆಗಿರುತ್ತದೆ.

ರಾಶಿಗಳಂತೆ ರಾಡಿಕ್ಸ್​ ಸಂಖ್ಯೆಗಳು ಕೂಡ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಸಂಖ್ಯಾಶಾಸ್ತ್ರದಲ್ಲಿ 01 ರಿಂದ 09ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳು ಎಂದು ಹೇಳಲಾಗುತ್ತದೆ. ಈ ಒಂಬತ್ತು ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ.

ಅಂದಹಾಗೆ, ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದ ಜನರು ತಮ್ಮ ಜೀವನವನ್ನು ರಾಜರಂತೆ ಬದುಕುತ್ತಾರಂತೆ. ಅವರು ಎಲ್ಲೆ ಇದ್ದರು ತಮಗೆ ತಾವು ಹೆಚ್ಚಿನ ಆದ್ಯತೆ ನೀಡಲು ಬಯಸುತ್ತಾರೆ. ಹಾಗಾದರೆ, ಕಿರೀಟವಿಲ್ಲದಿದ್ದರೂ ತಮ್ಮ ಜೀವನದುದ್ದಕ್ಕೂ ರಾಜನಂತೆ ಬದುಕುವ ವ್ಯಕ್ತಿ ಯಾವ ದಿನದಂದು ಜನಿಸುತ್ತಾರೆ ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.

ಸಂಖ್ಯೆ 1

ಯಾವುದೇ ತಿಂಗಳಿನಲ್ಲಿ 1, 10, 19 ಮತ್ತು 28ನೇ ತಾರೀಖಿನಂದು ಜನಿಸಿದ ಜನರು ಜೀವನದಲ್ಲಿ ಎಲ್ಲವೂ ತಮ್ಮ ಇಚ್ಛೆಯಂತೆಯೇ ಆಗಬೇಕು ಎಂದು ಬಯಸುತ್ತಾರೆ. ಇವರು ಅವಕಾಶಗಳಿಗಾಗಿ ಕಾಯುವ ಬದಲು ಅವಕಾಶಗಳನ್ನು ಸೃಷ್ಟಿಸುವ ಗುಣ ಹೊಂದಿರುತ್ತಾರೆ. ತಮ್ಮ ಆತ್ಮವಿಶ್ವಾಸ, ವರ್ಚಸ್ಸು ಮತ್ತು ಸವಾಲಿನ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಸ್ವಾಭಾವಿಕವಾಗಿಯೇ ತಮ್ಮನ್ನು ನಾಯಕರೆಂದು ಭಾವಿಸುತ್ತಾರೆ ಮತ್ತು ಅದಕ್ಕೆ ತಕ್ಕಂತೆ ವರ್ತಿಸುತ್ತಾರೆ. ಅವರು ಯಾವಾಗಲೂ ಯಾವುದೇ ಸ್ಥಳದಲ್ಲಿ ಅತ್ಯುತ್ತಮ ನಾಯಕರಾಗಿರುತ್ತಾರೆ.

ಸಂಖ್ಯೆ 5

ದಿನಾಂಕ 5, 14 ಮತ್ತು 23 ನೇ ತಾರೀಖಿನಂದು ಜನಿಸಿದ ಜನರು ಆತ್ಮವಿಶ್ವಾಸ, ಆಕರ್ಷಣೆ ಮತ್ತು ನೈಸರ್ಗಿಕ ಅಧಿಕಾರಕ್ಕೆ ಹೆಸರುವಾಸಿಯಾಗಿರುತ್ತಾರೆ. ಅವರು ಪ್ರೀತಿಯಿಂದ ಎಲ್ಲವನ್ನೂ ಸಾಧಿಸುವ ಗುಣವನ್ನು ಹೊಂದಿರುತ್ತಾರೆ. ಈ ಸಂಖ್ಯೆಯಲ್ಲಿ ಜನಿಸಿದವರು ನಾಯಕತ್ವದ ಸ್ಥಾನಗಳಲ್ಲಿರುವುದು ಹೆಚ್ಚು. ಅವರು ಯಾವಾಗಲೂ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಿದ್ಧರಿರುತ್ತಾರೆ. ಅವರಲ್ಲಿರುವ ಆತ್ಮವಿಶ್ವಾಸವು ಜೀವನದ ಮುಂದಿನ ಹಂತಕ್ಕೆ ಹೋಗಲು ಸಹಾಯ ಮಾಡುತ್ತದೆ.

ಸಂಖ್ಯೆ 8

ದಿನಾಂಕ 8, 17 ಮತ್ತು 26ನೇ ತಾರೀಖಿನಂದು ಜನಿಸಿದ ಜನರು ಮಹತ್ವಾಕಾಂಕ್ಷೆ ಉಳ್ಳವರಾಗಿದ್ದಾರೆ. ಅವರಿಗೆ ಕೆಲಸದ ಮನೋಭಾವವಿದ್ದು, ಎಲ್ಲೇ ಇದ್ದರು ತಮ್ಮ ಕೆಲಸದ ಮೇಲೆ ಗಮನ ಇಟ್ಟಿರುತ್ತಾರೆ. ಗುರಿಯತ್ತ ಸಾಗುವಾಗ ಸದಾ ಕಾರ್ಯನಿರತರಾಗಿರುತ್ತಾರೆ. ತಮ್ಮ ತಾಳ್ಮೆಯ ಗುಣದಿಂದಾಗಿ ಅವರು ಯಶಸ್ವಿಯಾಗುತ್ತಾರೆ. ಎಲ್ಲೇ ಇರಲಿ ನಾಯಕತ್ವವನ್ನು ಸ್ವೀಕರಿಸುವ ಧೈರ್ಯ ಈ ದಿನಾಂಕದಂದು ಜನಿಸಿದ ಜನರಲ್ಲಿದೆ. ಅಲ್ಲದೆ, ಈ ಜನರು ಇತರರನ್ನು ಗೌರವಿಸುತ್ತಾರೆ. ಅದೇ ಅವರ ಶಕ್ತಿಯೂ ಹೌದು. ಅವರು ಜೀವನದ ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.