Burevestnik Missile: ಯುಕ್ರೇನ್ ಮೇಲಿನ ಯುದ್ಧವನ್ನು ನಿಲ್ಲಿಸದೆ ಇಂದಿಗೂ ಸಾರುತ್ತಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇದೀಗ ಪ್ರಮುಖ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ರಷ್ಯಾ ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ವಿಶ್ವದ ಯಾವುದೇ ರಕ್ಷಣಾ ವ್ಯವಸ್ಥೆಯನ್ನು ಭೇದಿಸಬಲ್ಲ ಈ ಮಿಸೈಲ್ ಶೀಘ್ರದಲ್ಲೇ ಮಿಲಿಟರಿ ನಿಯೋಜನೆಗೆ ಸಿದ್ಧವಾಗಲಿದೆ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ. ಈ ಕ್ಷಿಪಣಿಯ ಹೆಸರು ‘ಬ್ಯೂರೆವೆಸ್ಟ್ನಿಕ್’. ಇದು ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿಯಾಗಿದ್ದು, 14,000 ಕಿ.ಮೀ.ವರೆಗೆ ಚಲ್ಲಿಸಬಲ್ಲದು ಹಾಗೂ ತನ್ನ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಪರಮಾಣು ಚಾಲಿತವಾದ ಈ ಕ್ಷಿಪಣಿ ಒಂದೇ ಹಾರಾಟದಲ್ಲಿ 15 ಗಂಟೆಗಳ ಕಾಲ ಹಾರಿದ್ದು, ಒಟ್ಟು 140 ಕಿ.ಮೀ ದೂರವನ್ನು ಕ್ರಮಿಸಿತು ಎಂದು ರಷ್ಯಾದ ಮಿಲಿಟರಿ ಮುಖ್ಯಸ್ಥರು ತಿಳಿಸಿದ್ದಾರೆ. ಕ್ಷಿಪಣಿ ಬಹುತೇಕ ಅನಿಯಮಿತ ವ್ಯಾಪ್ತಿಯನ್ನು ಹೊಂದಿದೆ ಮತ್ತು ಅದರ ಪಥವನ್ನು ಊಹಿಸಲು ಅಸಾಧ್ಯ ಎಂಬ ಅಚ್ಚರಿ ಸಂಗತಿ ಈಗ ಹೊರಬಿದ್ದಿದೆ.
2001ರಲ್ಲಿ ಅಮೆರಿಕವು ಏಕಪಕ್ಷೀಯವಾಗಿ ಬ್ಯಾಲಿಸ್ಟಿಕ್ ವಿರೋಧಿ ಕ್ಷಿಪಣಿ ಒಪ್ಪಂದದಿಂದ ಹಿಂದೆ ಸರಿದಿದ್ದಕ್ಕೆ ಮತ್ತು ನ್ಯಾಟೋ ಮೈತ್ರಿಕೂಟದ ವಿಸ್ತರಣೆಗೆ ಖಡಕ್ ಪ್ರತಿಕ್ರಿಯೆ ನೀಡಲು ಪುಟಿನ್ 2018ರಲ್ಲಿ ಮೊದಲು ಈ ಕ್ಷಿಪಣಿಯನ್ನು ಘೋಷಿಸಿದರು. ಅಮೆರಿಕ ಯುಕ್ರೇನ್‌ಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಮಾಹಿತಿಯನ್ನು ಒದಗಿಸುತ್ತಿರುವ ಸಮಯದಲ್ಲಿ, ರಷ್ಯಾ ದಾಳಿ ಮಾಡಿದರೆ ಎಷ್ಟು ದೊಡ್ಡ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಎಚ್ಚರಿಸಲು ರಷ್ಯಾ ಈ ಪರೀಕ್ಷೆಯನ್ನು ಕೈಗೊಂಡಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ: ನೇಕಾರ ಸಮಾಜದಿಂದ ಪ್ರತ್ಯೇಕ ಜಾತಿ ಗಣತಿ, ಕುರುಹಿನಶೆಟ್ಟಿ ಸಮಾಜ ಅಭಿವೃದ್ಧಿ ಸಂಘದ ಸಭೆಯಲ್ಲಿ ಅಧ್ಯಕ್ಷರ ಹೇಳಿಕೆ
ಕ್ಷಿಪಣಿಯ ದೊಡ್ಡ ಗಾತ್ರ (12 ಮೀ.ಗಿಂತ ಹೆಚ್ಚು), ಸಬ್‌ಸಾನಿಕ್ ವೇಗ ಮತ್ತು ವಿಕಿರಣಶೀಲ ನಿಷ್ಕಾಸವು ಮಿಸೈಲ್ ಅನ್ನು ಪತ್ತೆಹಚ್ಚಲು ಅಸಾಧ್ಯವಾಗಿಸಿದೆ. ಭಾರೀ ವೇಗದಲ್ಲಿ ಚಲಿಸುವ ಈ ಕ್ಷಿಪಣಿ, ರಷ್ಯಾದ ಪರಮಾಣು ತ್ರಿಕೋನವನ್ನು ಇನ್ನಷ್ಟು ಬಲಪಡಿಸಿದೆ,(ಏಜೆನ್ಸೀಸ್).