ನ್ಯೂಸ್

ಕರೊನಾ 2ನೇ ಅಲೆ ನಿಜವೇ? ಗುಣವಾದವರಿಗೂ ಮತ್ತೆ ಸೋಂಕು.. ಕೇಂದ್ರದ ಸಚಿವರು ಏನಂತಾರೆ?

ನವದೆಹಲಿ: ಕರೊನಾ ಸೋಂಕಿನ ಎರಡನೇ ಅಲೆ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿದ್ದು, ಇದೀಗ ಆ ಕುರಿತ ಮಾತು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಿಶೇಷವೆಂದರೆ, ಆ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಅವರೇ ಪ್ರತಿಕ್ರಿಯಿಸಿದ್ದಾರೆ.

ಸೋಂಕಿನಿಂದ ಒಮ್ಮೆ ಗುಣವಾದವರು ಮತ್ತೆ ಸೋಂಕು ತಗುಲುವ ಭಯದಿಂದ ಮುಕ್ತರಲ್ಲ. ಭಾರತ ಮಾತ್ರವಲ್ಲದೆ ಜಗತ್ತಿನ ಇತರ ಭಾಗಗಳಲ್ಲೂ ಒಮ್ಮೆ ಸೋಂಕುಮುಕ್ತರಾದವರೂ ಮತ್ತೆ ಸೋಂಕಿಗೆ ಒಳಗಾದ ಪ್ರಕರಣಗಳು ವರದಿಯಾಗಿವೆ. ಅದಾಗ್ಯೂ ಅಂಥ ಪ್ರಕರಣಗಳು ನಗಣ್ಯ ಎಂಬ ಪ್ರಮಾಣದಲ್ಲಿ ಇರುವುದರಿಂದ ಆ ಬಗ್ಗೆ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಸಚಿವ ಹರ್ಷವರ್ಧನ್​ ತಿಳಿಸಿದ್ದಾರೆ.

ಕೋವಿಡ್​ ರೋಗಿಯ ವರದಿಯನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಲಾಗುತ್ತಿದೆ. ಪುನಃ ಸೋಂಕು ತಗುಲುವ ಕುರಿತು ಪರೀಕ್ಷೆಗಳು ನಡೆಯುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಅಂಥ ರಿಸ್ಕ್​ಗಳು ಕಡಿಮೆ ಇವೆ ಎಂದು ಸಚಿವರು ಹೇಳಿದ್ದಾರೆ. (ಏಜೆನ್ಸೀಸ್​)