ನ್ಯೂಸ್

ಸಿಎಂ ತಾವೇ ಸರ್ಟಿಫಿಕೇಟ್ ಕೊಟ್ಟುಕೊಂಡ ಮೇಲೆ ನಾವೇನು ಹೇಳೋದು: ಜಾರಕಿಹೊಳಿ|What can we say

ಬೆಂಗಳೂರು: ನಾನೇ ಐದು ವರ್ಷ ಸಿಎಂ ಎಂದು ಸಿದ್ದರಾಮಯ್ಯ ಅವರೇ ಹೇಳಿದ ಮೇಲೆ ಬೇರೆಯವರು ಏನು ಹೇಳಲು ಸಾಧ್ಯ(What can we say after the CM himself gives the certificate?) ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarakiholi) ಪ್ರಶ್ನಿಸಿದರು.

ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಸರ್ಟಿಫಿಕೇಟ್ ಕೊಟ್ಟುಕೊಂಡ ಮೇಲೆ ನಾವೇನು ಹೇಳೋದು? ಸರ್ಟಿಫಿಕೇಟ್ ಅವರೇ ಕೊಟ್ಟಿದ್ದಾರಲ್ಲ. ಹೇಳೋ ಅವಶ್ಯಕತೆ ಏನಿಲ್ಲ. ಸಚಿವ ಸ್ಥಾನವನ್ನು ನಾವು ಉಳಿಸಿಕೊಂಡ್ರೆ ಸಾಕು, ಅವರವರು ಉಳಿದ್ರೆ ಸಾಕು ಅಂತಿದ್ದಾರೆ. ಇನ್ನು ಬೇರೆಯವರದ್ದು ಎಲ್ಲಿ ಕೇಳುತ್ತಾರೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಆಯೋಜಿಸಿದ್ದ ಔತಣ ಕೂಟದಲ್ಲಿ ಭಾಗವಹಿಸಿದ್ದರಲ್ಲಿ ಅಂಥ ವಿಶೇಷವೇನೂ ಇಲ್ಲ. ಕೆಪಿಸಿಸಿ ಅಧ್ಯಕ್ಷರು ಕರೆದಾಗ ಭಾಗವಹಿಸಬೇಕಾಗುತ್ತದೆ. ಬಿಜೆಪಿ ನಾಯಕರು ಹೇಳುವ ಮಾತನ್ನು ನಂಬುವ ಅವಶ್ಯಕತೆ ಇಲ್ಲ. ಅವರು ಇವತ್ತು ಒಂದು ಹೇಳುತ್ತಾರೆ. ನಾಳೆ ಇನ್ನೊಂದು ಹೇಳುತ್ತಾರೆ ಎಂದು ಟಾಂಗ್ ಕೊಟ್ಟರು.

ಅಲ್ಲೋಲವೂ ಇಲ್ಲ ಕಲ್ಲೋಲವೂ ಇಲ್ಲ

ಸಚಿವರು ದೆಹಲಿಗೆ ಹೋದಾಗಲೆಲ್ಲ ಹೈಕಮಾಂಡ್ ಭೇಟಿ ಮಾಡುತ್ತಾರೆ. ಯಾರು ಹೋಗುತ್ತಾರೆ ಅವರನ್ನೇ ಕೇಳಬೇಕು. ನಾವು ಹೋಗಿದ್ದಾಗ ಹೇಳಿದ್ದೆವು. ರಾಜ್ಯರಾಜಕಾರಣದ ಬಗ್ಗೆ ಚರ್ಚೆ ಮಾಡಿದ್ದೆವು. ಯಾವ ಅಲ್ಲೋಲ ಕಲ್ಲೋಲ ಆಗುವುದಿಲ್ಲ. ಅಲ್ಲೋಲ ಕಲ್ಲೋಲ ಯಾಕೆ ಆಗುತ್ತದೆ? ನಾವು 140 ಮಂದಿ ಇದ್ದೇವಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಸ್ಲಿಂರಿಗೆ ಮೀಸಲಾತಿ ಸಂಪುಟ ತೀರ್ಮಾನ

ಮುಸ್ಲಿಂರಿಗೆ ಗುತ್ತಿಗೆ ಮೀಸಲಾತಿ ಕುರಿತ ಪ್ರಶ್ನೆಗೆ, ಮುುಂಚೆ ಎಸ್ಸಿ,ಎಸ್ಟಿಗೆ ಮೀಸಲು ಇತ್ತು. ಈಗ ಮುಸ್ಲಿಂರಿಗೂ ಆಗಿದೆ. ಈ ಬಗ್ಗೆ ಸಂಪುಟ ತೀರ್ಮಾನವಾಗಿದೆ. ಕಳೆದ ಬಾರಿ ಚರ್ಚೆಗೆ ಬಂದಿತ್ತು. ಈಗಲೂ ಈ ಬಗ್ಗೆ ಸದನದಲ್ಲಿ ವಿಧೇಯಕ ಮಂಡಿಸಬಹುದು ಎಂದರು.

ಮೇಲ್ಮನೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಇಲ್ಲವಲ್ಲ ಎಂಬ ಪ್ರಶ್ನೆಗೆ, ಗ್ರೇಟರ್ ಬೆಂಗಳೂರು ಬಿಲ್ ಪಾಸ್ ಆಗಿದೆಯಲ್ಲ. ಬೇರೆ ಬೇರೆ ಬಿಲ್‌ಗಳು ಹಿಂದೆ ಆಗಿವೆ. ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಜತೆ ಹೊಂದಾಣಿಕೆ ಆಗುತ್ತವೆ. ಕೆಲವೊಮ್ಮೆ ಹೊಂದಾಣಿಕೆ ಆಗಬೇಕಲ್ಲವೆ ಎಂದು ಕೇಳಿದರು.

ಎಂಎಲ್‌ಸಿ ನಾವು ಕೇಳಿದ್ದೇವೆ

ಎಂಎಲ್ಸಿ ನಾಮನಿರ್ದೇಶನ ನಾವು ಹೆಸರು ಶಿಫಾರಸು ಮಾಡಿದ್ದೇವೆ. ಅದು ಸಿಎಂ, ಡಿಸಿಎಂ ಮಾಡುವ ಕೆಲಸ. ಅವರ ಕೈಯಲ್ಲಿ ಪಟ್ಟಿ ಕೊಟ್ಟಿದ್ದೇವೆ. ಅಂತಿಮ ನಿರ್ಣಯ ಅವರು ಮಾಡಬೇಕು.

ನೂರು ಮಂದಿ ಹೇಳಿದ್ದಾರೆ. ನಮಗೆ ಕೊಡಿ ಎಂದು ಕೇಳಿದ್ದಾರೆ. ಇರೋದು ನಾಲ್ಕೇ ತಾನೆ?

ನಾವು ಬೆಳಗಾವಿ ಬೇಡಿಕೆ ಅಂತ ಕೇಳಿಲ್ಲ. ಜನರಲ್ ಆಗಿಯೇ ಕೇಳಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಸದಾಶಿವನಗರ, ಚಾಮರಾಜಪೇಟೆ ಅಂತಾರೆ. ಇದರಲ್ಲಿ ಯಾರ ಸಹಾಯವೂ ಇಲ್ಲ, ಬಿಸಿನೆಸ್ ಅಷ್ಟೇ. ಚಿನ್ನ, ಡ್ರಗ್ಸ್ ತರೋದು ಹೊಸದೇನಲ್ಲ, ಹಿಡಿಯೋದು ಒಂದು ರೂಟಿನ್. ಯಾರು ಸಿಗುತ್ತಾರೆ, ಅವರನ್ನು ಹಿಡಿದು ಕ್ರಮ ಜರುಗಿಸುತ್ತಾರೆ. ಇನ್ನೊಂದು 15 ದಿನ ಇರಿ. ಎಲ್ಲವೂ ಹೊರಗೆ ಬರುತ್ತದೆ.

-ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ.