ನ್ಯೂಸ್

ಜನ ವಿರೋಧಿ ಬಜೆಟ್; ಮಮತಾ ಬ್ಯಾನರ್ಜಿ ಟೀಕೆ

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನ ಸಾಮಾನ್ಯರಿಗೆ ಉಪಯೋಗವಾಗುವುದಿಲ್ಲ. ಇದು ಬಡವರ ವಿರೋಧಿ, ಜನ ವಿರೋಧಿ ಬಜೆಟ್ ಆಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ದಿಕ್ಕುರಹಿತ, ದೂರದೃಷ್ಟಿಯಿಲ್ಲದ, ಕೇವಲ ರಾಜಕೀಯ ಉದ್ದೇಶದ ಮೇಲೆ ಕೇಂದ್ರೀಕೃತವಾದ ಈ ಬಜೆಟ್ ಜನರ ಅಗತ್ಯಗಳನ್ನು ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.