ನ್ಯೂಸ್

ಇನ್ಮುಂದೆ ವಾರಕ್ಕೆ ಎರಡು ದಿನ ಲಾಕ್​ಡೌನ್​...

ಕೋಲ್ಕತ್ತ: ದೇಶದ ಎಲ್ಲ ರಾಜ್ಯಗಳಲ್ಲೂ ಕೊವಿಡ್​-19 ಪ್ರಸರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸರ್ಕಾರಗಳು ಮತ್ತೆ ಲಾಕ್​ಡೌನ್ ಮೊರೆ ಹೋಗುತ್ತಿವೆ. ಆದರೆ ಮೊದಲಿನಂತೆ ದೀರ್ಘ ಸಮಯದ ಲಾಕ್​ಡೌನ್​ ಮಾಡದೆ, ವಾರ, ಮೂರುದಿನಗಳ ಅವಧಿಗೆ ಜಾರಿ ಮಾಡಲಾಗುತ್ತಿದೆ.

ಹಾಗೇ, ಪಶ್ಚಿಮ ಬಂಗಾಳದಲ್ಲಿ ಕೂಡ ಇನ್ನುಮುಂದೆ ಪ್ರತಿವಾರ ಎರಡು ದಿನ ಸಂಪೂರ್ಣ ಲಾಕ್​ಡೌನ್​ ಇರಲಿದೆ. ಈ ವಾರ ಗುರುವಾರ ಮತ್ತು ಶನಿವಾರ ಲಾಕ್​ಡೌನ್​ ವಿಧಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೂಚಿಸಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ 42,487ಕ್ಕೆ ಏರಿದ್ದು, 1,112 ಸೋಂಕಿತರು ಮೃತಪಟ್ಟಿದ್ದಾರೆ. (ಏಜೆನ್ಸೀಸ್​)