ನ್ಯೂಸ್

VIDEO| ವೆಲ್ಷ್ ಕ್ಲಾಗ್ ನೃತ್ಯ ಪ್ರಕಾರದಲ್ಲಿ 60 ಸೆಕೆಂಡುಗಳಲ್ಲಿ 55 ಮೇಣದ ಬತ್ತಿ ನಂದಿಸಿದ ನರ್ತಕ ಗಿನ್ನಿಸ್​ ದಾಖಲೆಗೆ ಸೇರ್ಪಡೆ

ಲಂಡನ್​: ವೆಲ್ಷ್ ಕ್ಲಾಗ್ ಎಂಬ ನೃತ್ಯ ಪ್ರಕಾರದ ನರ್ತಕ ತುದುರ್ ಫಿಲಿಪ್ಸ್, ಒಂದು ನಿಮಿಷದಲ್ಲಿ ಜಂಪ್ ಹೀಲ್ ಕ್ಲಿಕ್‌ಗಳಿಂದ 55 ಮೇಣದಬತ್ತಿಗಳನ್ನು ನಂದಿಸಿದ್ದು ಗಿನ್ನಿಸ್​ ವರ್ಲ್ಡ್​ ರೆಕಾರ್ಡ್​ನಲ್ಲಿ ದಾಖಲಾಗಿದೆ.

ಬಾಟಲ್​ಗಳ ಮೇಲೆ 55 ಮೇಣದ ಬತ್ತಿಗಳನ್ನು ಹೊತ್ತಿಸಿ ಇಡಲಾಗಿತ್ತು. ಇದನ್ನು ಕುಪ್ಪಳಿಸುತ್ತ ಕಾಲಿನಲ್ಲೇ ನಂದಿಸಿದ್ದಾರೆ ತುದುರ್​. ಅದು ಕೂಡ ವೆಲ್ಷ್ ಕ್ಲಾಗ್ ಎಂಬ ಸಾಂಪ್ರಾದಾಯಿಕ ನೃತ್ಯ ಪ್ರಕಾರದಲ್ಲಿ.

ಸಾಂಪ್ರದಾಯಿಕ ಐರಿಶ್ ನೃತ್ಯ ಶೈಲಿಯ ಪ್ರಕಾರದಲ್ಲಿ 30 ಸೆಕೆಂಡುಗಳಲ್ಲಿ 191 ಮೇಣದ ಬತ್ತಿಗಳನ್ನು ನಂದಿಸಿದ ದಾಖಲೆ ಯುಕೆ ಮೂಲದ ಬೆನೆಡಿಕ್ಟ್ ಡೆವ್ಲಿನ್ ಅವರ ಹೆಸರಲ್ಲಿ ದಾಖಲಾಗಿದೆ.

ಬೆನೆಡಿಕ್ಟ್ ಡೆವ್ಲಿನ್ ಅವರು 2009 ಏಪ್ರಿಲ್ 23 ರಂದು ಯುಕೆನಲ್ಲಿ ಐರಿಶ್ ನೃತ್ಯ ಶೈಲಿಯ ಪ್ರಕಾರದಲ್ಲಿ 30 ಸೆಕೆಂಡುಗಳಲ್ಲಿ 191 ಮೇಣದ ಬತ್ತಿಗಳನ್ನು ನಂದಿಸಿ ದಾಖಲೆ ಬರೆದಿದ್ದರು.

ನೃತ್ಯ ಪ್ರಕಾರಗಳಲ್ಲಿ ಮೇಣದ ಬತ್ತಿ ನಂದಿಸುವಾಗ ಎರಡು ಕಾಲುಗಳನ್ನು ಮೇಲಕ್ಕೆ ಜಂಪ್​ ಮಾಡಿ ಕಾಲುಗಳು ಗಾಳಿಯಲ್ಲಿದ್ದಾಗಲೇ ಮೇಣದ ಬತ್ತಿ ನಂದಿಸಬೇಕು. ನಂತರ ಒಂದು ಹೆಜ್ಜೆ ಮುಂದಕ್ಕೆ ಜಂಪ್​ ಮಾಡಿ ಮತ್ತೆ ಮೇಣದ ಬತ್ತಿ ನಂದಿಸಬೇಕು. (ಏಜೆನ್ಸೀಸ್​)