ಬೆಂಗಳೂರು: ಸೀಲ್ಡೌನ್ ವೇಳೆ ಪಾದರಾಯನಪುರದಲ್ಲಿ ಪೊಲೀಸರು ಹಾಗೂ ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದ ಪುಂಡರನ್ನು ಶಾಸಕ ಜಮೀರ್ ಅಹಮದ್ ಹಾಗೂ ಆರೋಪಿಗಳ ಕುಟುಂಬಸ್ಥರು ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾರೆ.
ದಾಂಧಲೆ ನಡೆಸಿದ 126 ಮಂದಿಯನ್ನು ಪೊಲೀಸರು ಬಂಧಿಸಿ ಹಳೇಗುಡ್ಡದಹಳ್ಳಿಯ ಹಜ್ಭವನದಲ್ಲಿ ಇಟ್ಟಿದ್ದರು. ಹೈಕೋರ್ಟ್ ಆರೋಪಿಗಳಿಗೆ 2 ದಿನಗಳ ಹಿಂದೆ ಷರತ್ತುಬದ್ಧ ಜಾಮೀನು ನೀಡಿತ್ತು. ಕೋರ್ಟ್ಗೆ 1.26 ಕೋಟಿ ರೂಪಾಯಿ ಮೊತ್ತದ ಶ್ಯೂರಿಟಿ ನೀಡಿ ಜಾಮೀನು ಪಡೆಯಲಾಗಿದೆ. ಈ ಹಣವನ್ನು ಶಾಸಕ ಜಮೀರ್ ಅಹಮದ್ ಭರಿಸಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ಬೆಳಗ್ಗೆ ಆರೋಪಿಗಳನ್ನು ಬಿಡಿಸಿಕೊಳ್ಳಲು ಶಾಸಕ ಜಮೀರ್ ಖುದ್ದಾಗಿ ಹಜ್‌ಭವನಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳಿಗೆ ಸ್ಯಾನಿಟೈಸರ್ ನೀಡಿ ಬಳಿಕ ತಮ್ಮ ಮಾಲೀಕತ್ವದ ಬಸ್‌ಗಳಲ್ಲಿ ಮನೆಗೆ ಕಳುಹಿಸಿದ್ದಾರೆ.