ನ್ಯೂಸ್

ಕಿತ್ತೂರು ರಾಣಿ ಚೆನ್ನಮ್ಮ ವೀರಜ್ಯೋತಿಗೆ ಸ್ವಾಗತ

ಧಾರವಾಡ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಿಂದ ನಗರಕ್ಕೆ ಆಗಮಿಸಿದ ಕಿತ್ತೂರು ರಾಣಿ ಚೆನ್ನಮ್ಮ ವೀರ ಜ್ಯೋತಿಯನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಸ್ವಾಗತಿಸಲಾಯಿತು.
ಸವದತ್ತಿ ತಾಲೂಕಿನಿಂದ ಹಾರೋಬೆಳವಡಿ ಗ್ರಾಮ ಮಾರ್ಗವಾಗಿ ಆಗಮಿಸಿದ ಜ್ಯೋತಿಯನ್ನು ಜಿಲ್ಲಾಽಕಾರಿ ಗುರುದತ್ತ ಹೆಗಡೆ ಹಾಗೂ ಜಿಲ್ಲಾ ಮಟ್ಟದ ಅಽಕಾರಿಗಳು ಕಲಾತಂಡಗಳೊ೦ದಿಗೆ ಸ್ವಾಗತಿಸಿ ಪೂಜೆ ನೆರವೇರಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ಸಮಾಜದ ಮುಖಂಡರಿದ್ದರು.