ವಿರಾಜಪೇಟೆಯ ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಓರಿಯಂಟೇಷನ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು ನಾಗೇಂದ್ರ, ಪ್ರಶಾಂತ್, ವೆದೀಕಾ ರೆಡ್ಡಿ, ವಿನೀತಾ ಇದ್ದರು. 
ನ್ಯೂಸ್

ವಿದ್ಯಾರ್ಥಿಗಳಿಗೆ ಸ್ವಾಗತ, ಪುನಶ್ಚೇತನ ಕಾರ್ಯಕ್ರಮ

ಎಂ.ರವಿ

ವಿರಾಜಪೇಟೆ: ಕೆವಿವಿ ಎಜುಕೇಷನಲ್ ಟ್ರಸ್ಟ್ ವತಿಯಿಂದ ವಿರಾಜಪೇಟೆ ಕಾವೇರಿ ಕಾಲೇಜಿನ ಆವರಣದಲ್ಲಿ ನೂತನವಾಗಿ ಪ್ರಾರಂಭವಾದ ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ಕಾಲೇಜಿನ ಪ್ರಥಮ ವರ್ಷದ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಪುನಶ್ಚೇತನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆವಿವಿ ಎಜುಕೇಷನ್ ಟ್ರಸ್ಟ್ ಮುಖ್ಯಸ್ಥ ಜಿ.ಎನ್.ನಾಗೇಂದ್ರ ಮಾತನಾಡಿ, ಕಾವೇರಿ ಕಾನೂನು ಕಾಲೇಜಿನ ಧ್ಯೇಯೊದ್ದೇಶಗಳನ್ನು ತಿಳಿಸಿ ಟ್ರಸ್ಟ್ ಭಾರತಾದ್ಯಂತ ವಿದ್ಯಾರ್ಥಿಗಳಿಗಾಗಿ ಕಾನೂನು ಶಿಕ್ಷಣವನ್ನು ನೀಡಲು ವಿವಿಧ ಶಾಖೆಗಳನ್ನು ಆರಂಭಿಸಿದ್ದು ಗುಣಾತ್ಮಕ ಶಿಕ್ಷಣ ಮತ್ತು ಕಾನೂನು ಸೇವೆಗಳನ್ನು ಉತ್ತಮ ರೀತಿಯಲ್ಲಿ ಒದಗಿಸುತ್ತ ಬರುವುದರೊಂದಿಗೆ ವಿದ್ಯಾರ್ಥಿಗಳಿಗೆ ಆರಂಭಿಕ ಹಂತದಲ್ಲಿ ನ್ಯಾಯಾಧೀಶರ ಪರೀಕ್ಷೆಗೆ ಸಿದ್ಧಪಡಿಸಲಾಗುವುದು. ನ್ಯಾಯಾಲಯಗಳಲ್ಲಿ ನಡೆಯುವ ಪ್ರಕ್ರಿಯೆಗಳ ತರಬೇತಿಯನ್ನು ಮೊದಲ ಸೆಮಿಸ್ಟರ್ ಹಂತದಲ್ಲಿಯೇ ಆರಂಭಿಸಲಾಗುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ವಿನೀತಾ ಮಾತನಾಡಿ, ಕಾನೂನು ಶಿಕ್ಷಣ ಪಡೆದವರು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕೆಂದರು. ಕಾವೇರಿ ಕಾನೂನು ಕಾಲೇಜಿನ ಟ್ರಸ್ಟಿಗಳಾದ ವಿದೇಕ ರೆಡ್ಡಿ, ಪ್ರಶಾಂತ್, ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗ, ಆಡಳಿತಾತ್ಮಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.