ನ್ಯೂಸ್

ವಾರಭವಿಷ್ಯ| ಈ ರಾಶಿಯವರಿಗೆ ಶನಿ ಪಂಚಮದಲ್ಲಿರುವುದರಿಂದ ದಿನದಿಂದ ದಿನಕ್ಕೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ

ಮೇಷ: ಮೇಷರಾಶಿಗೆ ದಶಮದಲ್ಲಿ, ಮೀನರಾಶಿಗೆ ಹನ್ನೊಂದು, ಕಟಕಕ್ಕೆ ಸಪ್ತಮ, ಧನಸ್ಸು ರಾಶಿಗೆ ದ್ವಿತೀಯದಲ್ಲಿ ಗುರುವಿರುವುದರಿಂದ ಒಳ್ಳೆಯ ಕೆಲಸ ಮಾಡಿ, ಸಂತೋಷ ಪಡೆಯಲು ಮಾಘ ಮಾಸದ ಬಹುಳ ಪಾಡ್ಯಮಿಯಂದು ಗಾಣಗಾಪುರ ದತ್ತಾತ್ರೇಯನಿಗೆ ಶರಣಾಗಿ. 4 ದಿನ ದತ್ತನನ್ನು ಪೂಜಿಸಿ. ಫೆಬ್ರವರಿ 28, ಮಾರ್ಚ್ 2, 3 ಶುಭದಿನಗಳು.

ವೃಷಭ: ಒಂಬತ್ತರ ಗುರುವಿಗೆ ನಿಮ್ಮ ಪ್ರಾರ್ಥನೆ ಇರಲಿ. ತಪ್ಪದೇ ಕಾರ್ತಿಕೇಯ ಸ್ತೋತ್ರವನ್ನು ಪಠಿಸಿ. ದತ್ತಾ ಎಂದರೆ ಕೊಡುವವನು. ಕರುಣಾ ಸಮುದ್ರ ದೇವನು ಎಲ್ಲವನ್ನೂ ಕೊಡುತ್ತಾನೆ. ಆದರೆ ಗುರು-ಶನಿ ಜೊತೆಯಿರುವುದರಿಂದ ಪ್ರಾರ್ಥನೆ-ಪೂಜೆಗಳ ಅವಶ್ಯಕತೆ ಇರುತ್ತದೆ. ನೀವು ನೀವಾಗಿಯೇ ಎಲ್ಲವನ್ನೂ ಮೈಮೇಲೆ ಎಳೆದುಕೊಳ್ಳಬೇಡಿ. ಎಚ್ಚರವಹಿಸಿ ಕೆಲಸ ಮಾಡಿ. ವಿರೋಧಕ್ಕೆ ಕಿವಿಗೊಡಬೇಡಿ.

ಮಿಥುನ: ನಿಮ್ಮ ಕಾರ್ಯವೈಖರಿ, ದಕ್ಷತೆಯನ್ನು ಗಮನಿಸುವ ದೇವ ನಿಯಮಿತ ಚಿತ್ರಗುಪ್ತರಿದ್ದಾರೆ. ನಿಮ್ಮ ಕೆಲಸ ನೀವು ಮಾಡಿ. ಸಮಯ ಚೆನ್ನಾಗಿಲ್ಲದಿರುವುದರಿಂದ ಹೊಸ ಕೆಲಸಗಳು ಬೇಡ. ಸತ್ಯನಾರಾಯಣ ಸ್ವಾಮಿಯ ಕಥಾ ಶ್ರವಣವನ್ನು ಪ್ರತಿ ಶನಿವಾರವೂ, ಗುರು ಬದಲಾವಣೆ ಆಗುವವರೆಗೂ ಮಾಡಿ.

ಕಟಕ: ಗುರುವಿಗೆ ಕಟಕ ರಾಶಿಯು ಉಚ್ಚ ಸ್ಥಾನ. ದೈವದತ್ತವಾಗಿ ನಿಮಗೆ ಬೇಕಾದ ಕೆಲಸಗಳು ಆಗಿ ಸುಖ-ಸಂತೋಷ ಹೊಂದುತ್ತೀರ. ದೇವರಿಗೆ ಬಗ್ಗಿ ನಮಸ್ಕಾರ ಮಾಡಬೇಕು. ಆದರೆ ನೀವು ಬಾಡದಂತೆ ನೋಡಿಕೊಳ್ಳಲು ಶಿವನಾಮವನ್ನು, ಸೌಂದರ್ಯಲಹರಿಯನ್ನು ಪಾರಾಯಣ ಮಾಡಿ. ಹೆಚ್ಚಿನ ಅಭಿವೃದ್ಧಿ ಹೊಂದಿರಿ. ಆರೋಗ್ಯದ ಬಗ್ಗೆ ನಿಗಾವಹಿಸಿ.

ಸಿಂಹ: ಆರರ ಗುರುವು ನಿಮ್ಮ ಕೆಲಸಗಳನ್ನು ನಿಧಾನ ಮಾಡಿದರೂ ಯಾವುದಕ್ಕೂ ಹೆದರಬೇಕಿಲ್ಲ. ಸಿಂಹದಂತೆ ಬಾಳಿ. ಬೆಳಕು ಕೊಡುವ ಸೂರ್ಯನಿಗೆ ಪೂಜೆ-ಪ್ರಾರ್ಥನೆ ಇರಲಿ. ಪಾರ್ವತಿ ಅಪರಾಜಿತ ಸ್ತೋತ್ರವನ್ನು ಪಠಿಸಿ. ಪಾರ್ವತಿ ಸಹಿತ ಶ್ರೀಕಂಠೇಶ್ವರನನ್ನು ಇದ್ದ ಜಾಗದಲ್ಲೇ ಧ್ಯಾನಿಸಿ, ಪೂಜಿಸಿ.

ಕನ್ಯಾ: ಶನಿಯು ಪಂಚಮದಲ್ಲಿ ಇರುವುದರಿಂದ ಆರೋಗ್ಯವನ್ನು ಕೊಡದೆ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚಾಗುತ್ತವೆ. ಸಮಸ್ಯೆಯಿಂದ ಪಾರಾಗಬೇಕಾದರೆ ದೈವಕೃಪೆಯಿಂದ ಮಾತ್ರವೇ ಸಾಧ್ಯ. ಶ್ರೀ ರಾಮ ಅಷ್ಟೋತ್ತರ ಪಠಿಸಿ. ಭದ್ರಾಚಲಂನ (ಆಂಧ್ರ)ರಾಮನನ್ನು ಮನೆಯಿಂದಲೇ ಸ್ಮರಿಸಿ, ಪೂಜಿಸಿ.

ತುಲಾ: ನಿಮ್ಮನ್ನು ಎದುರಿಸುವವರು, ಮನಸ್ಸನ್ನು ನೋಯಿಸಿದರೂ ನಿಮಗೆ ಕೇಡು ಮಾಡಲು ಆಗುವುದಿಲ್ಲ. ತಾತ್ಸಾರವೇ ಅದಕ್ಕೆ ಮದ್ದು. ನೀವು ಎಲ್ಲವನ್ನೂ ಜಯಿಸುವಿರಿ. ಏಪ್ರಿಲ್ 5ರಿಂದ ಗುರು ಪಂಚಮಕ್ಕೆ ಬಂದು ಕೋರ್ಟ್ ವ್ಯವಹಾರದಲ್ಲಿ ಜಯವನ್ನು, ವಿಶೇಷವಾದ ಧನಲಾಭವನ್ನು ಪಡೆಯುತ್ತೀರಿ. ಮರೆಯದೇ ಲಲಿತಾ ಸಹಸ್ರನಾಮ ಪಾರಾಯಣ ಮಾಡಿ. ಖಡ್ಗಮಾಲಾ ಸ್ತೋತ್ರ ಪಠಿಸಿರಿ.

ವೃಶ್ಚಿಕ: ನಿಮ್ಮ ದೃಢವಾದ ಗುರುಭಕ್ತಿ ವಿಶೇಷ ಫಲ ಕೊಡುವುದರಲ್ಲಿ ಸಂದೇಹವಿಲ್ಲ. ಧನಬಂದಾಗ ಮತ್ತೆ ದುಷ್ಟರೇ ಸುತ್ತುವರಿಯುತ್ತಾರೆ. ದತ್ತಾಧ್ಯಾನವಿರಲಿ. ಮನೆಯಲ್ಲಿ ಶ್ರೀ ಚಕ್ರವಿದ್ದರೆ ಅದಕ್ಕೆ ಜೇನುಹಾಲು ಸಕ್ಕರೆಯನ್ನು ಮಿಶ್ರಣ ಮಾಡಿ ನೈವೇದ್ಯ ಮಾಡಿ. ನಿಮ್ಮ ಇಷ್ಟಾರ್ಥ ಈಡೇರುವುದು.

ಧನು: ಧನುರ್-ಮೀನ ರಾಶಿಯವರು ದೈವಕೃಪೆಯಿಂದಲೇ ಜನಿಸಿರುತ್ತಾರೆ. ಸಮುದ್ರದ ನೀರಿನಲ್ಲಿ ಉಪ್ಪಿಗೆ ಬಡತನವಿಲ್ಲ. ಹಾಗೆಯೇ ದೈವಕೃಪೆಗೆ ಸಮುದ್ರರಾಜನ ಆರಾಧ್ಯದೇವರಾದ ಶ್ರೀರಾಮನನ್ನು ಧ್ಯಾನಿಸಿ, ಪೂಜಿಸಿ. ವಿರೋಧಿಗಳಿಗೆ ನಿಮ್ಮ ಮೌನವೇ ಉತ್ತರ. ನಿಮ್ಮ ಕೆಲಸ ಮಾಡಿಕೊಂಡು ಮುಂದೆ ಸಾಗಿರಿ. ದೈವವು ನಿಮಗೆ ಬೇಕಾದ್ದನ್ನು ಕೊಡುತ್ತದೆ.

ಮಕರ: ಗುರು ಬದಲಾವಣೆಯಾದರೆ ನಿಮಗೆ ದೈವಸಹಾಯ ಒದಗಿ ಬಂದು ಜೀವನ ಸರಾಗವಾಗುತ್ತದೆ. ಆರೋಗ್ಯದ ಬಗ್ಗೆ ತಾತ್ಸಾರ ಬೇಡ. ನಿತ್ಯವೂ ಕೃಷ್ಣಾಷ್ಟೋತ್ತರವನ್ನು ಪಠಿಸಿ. ಶನಿವಾರದಲ್ಲಿ ಹನುಮಾನ್ ಚಾಲೀಸಾ ಪಾರಾಯಣ ಮಾಡಿ. ಒಳ್ಳೆಯ ದಿನಗಳು ಬರಲಿವೆ.

ಕುಂಭ: ತುಂಬಿದ ಕೊಡ ತುಳುಕುವುದಿಲ್ಲ. ದೈವಕೃಪೆ ಸಂಪಾದಿಸಿಯೇ ಆಗಿದ್ದಲ್ಲಿ ದ್ವಾದಶ ಶನಿಯಿಂದ ಏನೇ ಬಂದರೂ ಸಹಿಸಿಕೊಳ್ಳುವ ಶಕ್ತಿಯನ್ನು ರಾಶ್ಯಾಧಿಪತಿ ಶನಿಯೇ ಕೊಡುತ್ತಾನೆ. ದಶರಥ ವಿರಚಿತ ಶನಿ ಸ್ತೋತ್ರವನ್ನು ಪಾರಾಯಣ ಮಾಡಿ. ತಿಲ ಮತ್ತು ಬೆಲ್ಲ ದಾನಮಾಡಿ. ಮನೆಯ ದೇವರನ್ನು ಶನಿಯ ಸಂಚಾರದಲ್ಲಿ ತಪ್ಪದೇ ಧ್ಯಾನಿಸಿ, ಪೂಜಿಸಿ. ಒಂಬತ್ತು ಅವತಾರಗಳ ದೇವಿ ಪಾರಾಯಣ ಮಾಡಿ, ಕಷ್ಟವನ್ನು ಜಯಿಸಿ. ಏಪ್ರಿಲ್ 5ರ ನಂತರ ಸುಸಮಯ ಬರುತ್ತದೆ.

ಮೀನ: ಎಲ್ಲವೂ ಚೆನ್ನಾಗಿದೆ. ಯಾವುದಕ್ಕೂ ದುಃಖ ಬೇಡ. ಯಾರು ಬೇಕೋ ಅವರೊಂದಿಗೆ ಸ್ನೇಹವನ್ನು ಇಟ್ಟುಕೊಂಡು ಸಂತಸದಿಂದಿರಿ. ಉಮಾಮಹೇಶ್ವರ ಕಲ್ಯಾಣ ಮಾಡಿಸಿ. ಇಲ್ಲವೇ ವೀಕ್ಷಿಸಿ ಹಾಗೂ ಶಿವ-ಬ್ರಹ್ಮ ನಾರಾಯಣ ಸ್ವರೂಪಿಯಾಗಿ ಗಾಣಗಾಪುರದಲ್ಲಿ ದತ್ತನನ್ನು ಆರಾಧಿಸಿ.